Janataa24 NEWS DESK
ಮಧುಗಿರಿ: ಮತಿ ಭ್ರಮಣೆಗೊಳಗಾಗಿದ್ದ ವಿವಾಹಿತ ಮಹಿಳೆಯೊಬ್ಬಳು ತನ್ನ ಮಗನ ಸಾವಿಗೆ ಕಾರಣಳಾಗಿದ್ದಾಳೆ.

ಪಟ್ಟಣದ ತಿಪ್ಪಾಪುರ ಛತ್ರದ ಹಿಂಭಾಗದಲ್ಲಿ ವಾಸವಾಗಿದ್ದ ಶ್ವೇತಾ (26) ಎನ್ನುವ ಮಹಿಳೆಯೊಬ್ಬಳು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತನ್ನ ಒಂದು ವರ್ಷದ ಗಂಡು ಮಗನಾದ ಕೃತೀಶ್ ನ ಕೈಯನ್ನು ಚಾಕುವಿನಿಂದ ಕೊಯ್ದಿದ್ದು ರಕ್ತ ಸ್ರಾವ ಹೆಚ್ಚಾಗಿ ಆತನ ಸಾವಿಗೆ ಕಾರಣಳಾಗಿದ್ದು, ನಂತರ ಆಕೆಯು ಸಹ ಆತ್ಮ ಹತ್ಯೆಗೆ ಮುಂದಾಗಿದ್ದು ನೆರೆಹೊರೆಯವರ ಸಹಾಯದಿಂದ ಶ್ವೇತಾಳನ್ನು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ತಪಾಸಣೆ ನಂತರ ಹೆಚ್ಚುವರಿ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆ ಗೆ ರವಾನಿಸಲಾಗಿದೆ, ಆಕೆಯು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಆರಕ್ಷಕ ನಿರೀಕ್ಷಕರಾದ ಹನುಮಂತರಾಯಪ್ಪ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಘಟನೆ ಬಗ್ಗೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ
ಮಧುಗಿರಿ: ಅಬಿದ್