Janataa24 NEWS DESK

ಪಾವಗಡ
ಪಾವಗಡದಲ್ಲಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿ ವಾಕ್ ಮತ್ತು ಶ್ರವಣ ಉಪಗ್ರಹದ ಕೇಂದ್ರ ಘಟಕ
ಉದ್ಘಾಟಿಸಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ.
ಪಾವಗಡ ಪಟ್ಟಣದ ಸ್ವಾಮಿ ವಿವೇಕಾನಂದ ಗ್ರಾಮೀಣ ಆರೋಗ್ಯ ಕೇಂದ್ರ ಮತ್ತು ಶ್ರೀ ಶಾರದಾ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ವಾಕ್ ಮತ್ತು ಶ್ರವಣ ಘಟಕ ಹಾಗೂ
ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವ ಅವರು ಮಾನವೀಯತೆಯ ಪ್ರತೀಕ ಸ್ವಾಮಿ ಜಪಾನಂದ.ಪಾವಗಡ ತಾಲೂಕಿನ ಜನತೆ ಉತ್ತಮ ಮೌಲ್ಯತೆಗಳಿಗೆ ಹೆಚ್ಚು ಹೊತ್ತುನಿಡುತ್ತಾರೆ. ಈ ಹಿಂದೆ ಮೌಲ್ಯದ ಆದರದ ಮೇಲೆ ಜನರು ನಡೆದುಕೊಳ್ಳುತ್ತಿದ್ದರು ಆದರೆ ಇತ್ತೀಚೆಗೆ ಶ್ರೀಮಂತಿಕೆ ಮತ್ತು ಅಧಿಕಾರ ದಾಹದಿಂದ ಮೌಲ್ಯದ ಆಧಾರಗಳು ನಶಿಸಿಹೋಗಿವೆ.
ಈ ಸಮಾಜದಲ್ಲಿ ಪ್ರಮಾಣಿಕತೆ ಮತ್ತು ಮಾನವೀಯತೆಗೆ ಗೌರವಿಲ್ಲದಂತಾಗಿದೆ.
ಈ ಹಿಂದೆ ಒಬ್ಬ ವ್ಯಕ್ತಿ ತಪ್ಪು ಮಾಡಿದರೆ ಹಿಡಿ ಕುಟುಂಬಕ್ಕೆ ಶಿಕ್ಷೆ ಆಗುತ್ತಿತ್ತು ಅಂತಹ ರೀತಿಯಲ್ಲಿ ಸಮಾಜ ನಡೆದುಕೊಳ್ಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಪ್ಪು ಮಾಡಿದ ದವನಿಗೆ ಶ್ರೀಮಂತಿಕೆ ಅಧಿಕಾರ ದಾಯದಿಂದ ರಕ್ಷಣೆಗೆ ಸಿಗುವಂತಾಗಿದೆ.
ಬೈಟ್:-ಬೆಂಗಳೂರಿನ ಹೆಸರಾಂತ ವಾಕ್ ಮತ್ತು ಶ್ರವಣ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕರಾದ ವಿವಿ ಕೃಷ್ಣಾರೆಡ್ಡಿ ಮಾತನಾಡಿ ಗಡಿ ಭಾಗದಲ್ಲಿ ಹಗಲು ರಾತ್ರಿ ಈ ಭಾಗದ ಜನರ ಬವಣೆಗೆ ದುಡಿಯುತ್ತಿರುವಂತಹ ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮೀ ಜಪಾನಂದ ಸ್ವಾಮೀಜಿಯವರ ಜೋತೆ ಕೈಜೋಡಿಸಿ ಈ ಭಾಗದಲ್ಲಿ ನಮ್ಮ ಸಮಸ್ತೆಯಿಂದ ಈ ಭಾಗದ ಜನರಿಗೆ ಅನುಕೂಲ ಆಗುವಂತೆ ಉಚಿತ ಸೇವೆ ಮಾಡುವ ನಿಟ್ಟಿನಲ್ಲಿ ಇಂದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರರಂಭೋತ್ಸ್ವ ಮಾಡಲಾಗಿದೆ ಎಂದರು.
ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಶ್ರೀ ಜಪಾನಂದ ಶ್ರೀ ಮಾತನಾಡಿ ಇಂದು ಹೊಸದಾಗಿ ನಮ್ ಆಸ್ಪತ್ರೆಯಲ್ಲಿ ವಾಕ್ ಮತ್ತು ಶ್ರವಣ ವಿಭಾಗದ ಘಟಕ ಸೇರ್ಪಡೆಗೊಂಡಿದೆ ಇದರ ಸದುಪಯೋಗ ವನ್ನು ಈ ಭಾಗದ ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಆಸ್ಪತ್ರೆ ಪ್ರಾರಂಭ ಯಿಂದ ಇಲ್ಲಿವರೆಗೂ 40,000 ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿದ ಇತಹಾಸ ನಮ್ಮ ರಾಮಕೃಷ್ಣ ಸೇವಾಶ್ರಮಕ್ಕೆ ದಕ್ಕುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜ್ಯೋತಿ ಸ್ವರೂಪ್ ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜು ತುಮಕೂರು. ಜಿಲ್ಲಾ ಆರೋಗ್ಯ ಅಧಿಕಾರಿ ಡಿ.ಎನ್.ಮಂಜುನಾಥ್ . ಡಿ.ಎಲ್. ಸುರೇಶ್ ಬಾಬು. ವಿ.ಎಸ್ ಶಾಂತವರ್ಧನ್ ಡಾ. ರೇಖಾ ವೀರಭದ್ರಯ್ಯ .ಡಾಕ್ಟರ್ ತಿರುಪತೈಯ್ಯ.ತಾಲೂಕು ವೈದ್ಯಧಿಕಾರಿ ಪಾವಗಡ.
ವರದಿ
ಪಾವಗಡ: ಇಮ್ರಾನ್ ಉಲ್ಲಾ.