Janataa24 NEWS DESK
ಬೆಂಗಳೂರು: ಗೆಳೆಯನ ಜೊತೆ ಸೇರಿಕೊಂಡು ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಅತ್ಯಾಚಾರ ಮಾಡಿದ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿ (Gang Rape In Bengaluru) ನಲ್ಲಿ ನಡೆದಿದೆ.

ಪುರುಷೋತ್ತಮ್ ಹಾಗೂ ಚೇತನ್ ಆರೋಪಿಗಳು. ಮೂಲತಃ ತುಮಕೂರಿನ ನಿವಾಸಿಯಾಗಿರುವ ಯುವತಿ, ಪ್ಯಾರಾ ಮೆಡಿಕಲ್ ಓದುತ್ತಿದ್ದಳು. ಈಕೆ ಹಾಗೂ ತುಮಕೂರಿನ ಕೊರಟಗೆರೆ ನಿವಾಸಿ ಪುರುಷೋತ್ತಮ್ ಕಳೆದ 1 ವರ್ಷದಿಂದ ಪರಸ್ಪರ ಪೀತಿಸುತ್ತಿದ್ದರು.
ಕಳೆದ ಒಂದು ವಾರದ ಹಿಂದೆ ಯುವತಿಯನ್ನ ಭೇಟಿ ಮಾಡಿದ್ದ ಆರೋಪಿ ಪುರುಷೋತ್ತಮ್, ನಂತರ ಯುವತಿಯ ಮೊಬೈಲ್ ಪಡೆದು ಬೆಂಗಳೂರಿಗೆ ಬಂದಿದ್ದ. ಎರಡು ದಿನಗಳ ಹಿಂದೆ ಪ್ರಿಯಕರನಿಗೆ ಕರೆ ಮಾಡಿ ನನ್ನ ಮೊಬೈಲ್ ವಾಪಸ್ ಕೊಡು ಅಂತ ಯುವತಿ ಕೇಳಿದ್ದಳು. ಈ ವೇಳೆ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಾ, ನಿನ್ನ ಮೊಬೈಲ್ ಕೊಡ್ತೀನಿ ಅಂತ ಪುರುಷೋತ್ತಮ್ ಹೇಳಿದ್ದಾನೆ. ಹೀಗಾಗಿ ಮೇ 6 ರಂದು ಯುವತಿ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಂದಿದ್ದಳು.
ಯುವತಿಯನ್ನ ಪುರುಷೋತ್ತಮ್ ಗಿರಿನಗರದ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಬಂದಿದ್ದ. ನನ್ನ ಮೊಬೈಲ್ ಕೊಡು ಊರಿಗೆ ಹೋಗಬೇಕು ಅಂತ ಹೇಳಿದಾಗ, ಇವತ್ತು ಇಲ್ಲೆ ಇರು ಅಂತ ಹೇಳಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ನಂತರ ತನ್ನ ಸ್ನೇಹಿತ ಚೇತನ್ನ ಘಟನಾ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಪುರುಷೋತ್ತಮ್ ಹಾಗೂ ಆತನ ಗೆಳೆಯ ಚೇತನ್ ಇಬ್ಬರೂ ಸೇರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಯುವತಿಯ ಚೀರಾಟಕ್ಕೆ ಅಕ್ಕಪಕ್ಕದ ಮೆನೆಯವರು ಬಂದಿದ್ದಾರೆ. ಕೂಡಲೇ ಸ್ಥಳೀಯರು ಗಿರಿನಗರ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸದ್ಯ ಯುವತಿಯನ್ನ ರಕ್ಷಣೆ ಮಾಡಿ, ಆರೋಪಿಗಳಾದ ಚೇತನ್ ಹಾಗೂ ಪುರುಷೋತ್ತಮ್ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆ (Girinagar Police Station) ಯಲ್ಲಿ ಪ್ರಕರಣ ದಾಖಲಾಗಿದೆ.