ತುರುವೇಕೆರೆ ,2023 ವಿಧಾನಸಭಾ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು.

ತುರುವೇಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ಅವರು ಇಂದು ಜನಸಾಗರದೊಂದಿಗೆ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದರು,
ಇದೇ ವೇಳೆ ಸಾವಿರಾರು ಕಾರ್ಯಕರ್ತರು ರಸ್ತೆಯ ತುಂಬಿಲ್ಲ ಜನ ಸಾಗರವೇ ತುಂಬಿದ್ದು, ಎಲ್ಲಿ ನೋಡಿದರೂ ಜನವೋ ಜನ.
ಇನ್ನು ನಾಮಪತ್ರ ಸಲ್ಲಿಸಲು ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ತಿಪಟೂರು ರಸ್ತೆಯಿಂದ ಆಗಮಿಸಿದ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪನವರಿಗೆ,
ತಾಲೂಕು ಆಡಳಿತ ಕಚೇರಿ ಎದುರು ತೆಂಗಿನಕಾಯಿಗಳನ್ನು ಒಡೆದು ಅವರನ್ನು ಬರಮಾಡಿಕೊಂಡು,

ನಂತರ ನಾಮಪತ್ರ ಸಲ್ಲಿಸಲು ಕಾರ್ಯಕರ್ತರು ಬಿಳ್ಕೊಟ್ಟರು,
ಇನ್ನು ನಾಮಪತ್ರ ಸಲ್ಲಿಸಲು ಆಗಮಿಸಿದ ಎಂಟಿ ಕೃಷ್ಣಪ್ಪ ಅವರಿಗೆ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾದ ಚಂದ್ರೇಶ್, ಜೆಡಿಎಸ್ ಮುಖಂಡರುಗಳಾದ ಬಾಣಸಂದ್ರ ರಮೇಶ್, ವೆಂಕಟಪುರ ಯೋಗೀಶ್, ರಮೇಶ್ ಗೌಡ, ಇನ್ನು ಅನೇಕ ಮುಖಂಡರುಗಳು ಸಾತ್ ನೀಡಿದರು.
ವರದಿ
ತುರುವೇಕೆರೆ: ಮಂಜುನಾಥ್