ನೂತನ ಅಧ್ಯಕ್ಷ ಸ್ಥಾನಕ್ಕೆ ಶಿವಸ್ವಾಮಿ ಎ ಬಿ ಆಯ್ಕೆ.

ಗುಬ್ಬಿ: ಶ್ರೀಕಾಂತ್
ಗುಬ್ಬಿ ತಾಲೂಕಿನ ಕಡಬ ಹೋಬಳಿ ವ್ಯಾಪ್ತಿಯ ಮಾರಾಶೆಟ್ಟಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆ ಯಲ್ಲಿ ನೂತನ ಅಧ್ಯಕ್ಷರಾಗಿ ಶಿವಸ್ವಾಮಿ ಎ ಬಿ ಆಯ್ಕೆ ಯಾಗಿದ್ದಾರೆ. ಮತ್ತು ಉಪಾಧ್ಯಕ್ಷ ರಾಧಾ ನಟರಾಜ್ ಅವರು ಗ್ರಾ ಪಂ ಸದಸ್ಯರ ಬೆಂಬಲ ದೊಂದಿಗೆ ಯತಸ್ಥಿತಿ ಕಾಯ್ದುಕೊಂಡಿದ್ದಾರೆ.
ನೂತನ ಅಧ್ಯಕ್ಷ ಶಿವಸ್ವಾಮಿ ಮಾತನಾಡಿ ಗ್ರಾಪಂ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸಲಾಗುವುದು. ಕುಡಿಯುವ ನೀರು, ಗ್ರಾಮ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ತಾಲೂಕಿನ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿರೂಪಿಸಲಾಗುವುದು ಎಂದರು.
ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ರಾಜಕೀಯ ಮುಖಂಡರು, ಗ್ರಾಮಸ್ಥರು ಶುಭ ಕೋರಿದರು. ತಾಲೂಕು ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಚುನಾವಣೆ ಶಾಂತಿಯುತವಾಗಿ ನಡೆಯಿತು.
CCಈ ಸಂದರ್ಭದಲ್ಲಿ ಶಿವಶಂಕರ್ ಬಾಬು ದೇವರಾಜು ನಿತ್ಯನಂದ ಮೂರ್ತಿ ಮೋಹನ್ ಕುಮಾರ್ ಭರತ್ ದೋಣ್ಣೆರೆ ತಿಮ್ಮರಾಜ್ ಮಾರಾಶೆಟ್ಟಿಹಳ್ಳಿ ಬಸವರಾಜ್ ಪಿ ಡಿ ಓ ತನುಜಾ ಬೆನಕಟ್ಟೆ, ಮತ್ತು ಗ್ರಾಮಸ್ಥರು ಹಾಜರಿದ್ದರು