JANATAA24 NEWS DESK
Turuvekere: ಸಾರ್ವಜನಿಕ ಸೇವೆಗೆ ಆಂಬ್ಯುಲೆನ್ಸ್ ನೀಡಿದ ರೋಟರಿ ಕ್ಲಬ್ ತುರುವೇಕೆರೆ.

ತುರುವೇಕೆರೆ: ರೋಟರಿ ಕ್ಲಬ್ ತನ್ನ 2026-27 ನೇ ಸಾಲಿನ ವಾರ್ಷಿಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಪಟ್ಟಣದ ಚೌದ್ರಿ ಕನ್ವೆಂಷನ್ ಹಾಲ್ನಲ್ಲಿ ಅತ್ಯಂತ ಅದ್ದೂರಿಯಾಗಿ ಆಯೋಜಿಸಿತ್ತು.
ಈ ಕಾರ್ಯಕ್ರಮವು ಕೇವಲ ಆಡಳಿತ ಮಂಡಳಿಯ ಬದಲಾವಣೆಗೆ ಸಾಕ್ಷಿಯಾಗಲಿಲ್ಲ, ಬದಲಿಗೆ ಮಾಜಿ ಶಾಸಕ ಮಸಾಲಾ ಜಯರಾಮ್ ಅವರ ಭಾಗವಹಿಸುವಿಕೆ ಮತ್ತು ಹೊಸ ಆಂಬ್ಯುಲೆನ್ಸ್ ಸೇವಾ ವಾಹನದ ಚಾಲನೆಯೊಂದಿಗೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಶಾಸಕ ಮಸಾಲಾ ಜಯರಾಮ್ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಅವರು ತಮ್ಮ ಹಳೆಯ ದಿನಗಳ ನೆನಪನ್ನು ಮೆಲುಕು ಹಾಕುತ್ತಾ, ರೋಟರಿ ಕ್ಲಬ್ ತುರುವೇಕೆರೆಯು ಕಳೆದ 12 ವರ್ಷಗಳಿಂದ ಮಾಡುತ್ತಿರುವ ಸಾಮಾಜಿಕ ಸೇವೆವನ್ನು ಶ್ಲಾಘಿಸಿದರು. “ರೋಟರಿ ಕ್ಲಬ್ನಂತಹ ಸೇವಾ ಸಂಸ್ಥೆಗಳು ಸಮಾಜದ ಬೆನ್ನೆಲುಬಾಗಿವೆ.
ಇಂದಿನ ಯುವ ಪೀಳಿಗೆಗೆ ರೋಟರಿ ಕ್ಲಬ್ ಒಂದು ಮಾದರಿಯಾಗಿದೆ” ಅಂಬ್ಯುಲೆನ್ಸ್ ಗೆ ನಾನು ಚಾಲನೆ ನೀಡಿರುವುದು ನನಗೆ ಅತ್ಯಂತ ಖುಷಿ ತಂದಿದೆ “ತುರುವೇಕೆರೆ ಪಟ್ಟಣದಲ್ಲಿ ಆಂಬ್ಯುಲೆನ್ಸ್ ಸೇವೆ ಪ್ರಾರಂಭವಾಗಿರುವುದು ಬಡವರಿಗೆ ಮತ್ತು ತುರ್ತು ಚಿಕಿತ್ಸೆಯ ಅಗತ್ಯವಿರುವವರಿಗೆ ವರದಾನವಾಗಿದೆ. ರೋಟರಿ ಕ್ಲಬ್ನ ಈ ಕಾರ್ಯವನ್ನು ನಾನು ಪೂರ್ಣವಾಗಿ ಬೆಂಬಲಿಸುತ್ತೇನೆ” ಎಂದು ಅವರು ನುಡಿದರು.
ಹಸ್ತಾಂತರಗೊಂಡ ನಂತರ ನೂತನ ಅಧ್ಯಕ್ಷರಾದ ಡಿ. ಸಂತೋಷ್ ಅವರು ಅಧಿಕಾರ ಸ್ವೀಕರಿಸಿ, “ನನ್ನನ್ನು 2026-27 ನೇ ಸಾಲಿನ ರೋಟರಿ ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸರ್ವ ಸದಸ್ಯರಿಗೂ ಧನ್ಯವಾದಗಳು. ನನ್ನ ಎಲ್ಲಾ ಕಾರ್ಯಗಳಲ್ಲಿ ಬೆಂಬಲವಾಗಿ ನಿಂತ ಮಾಜಿ ಶಾಸಕರಾದ ಜಯರಾಮಣ್ಣ ಅವರ ಬಗ್ಗೆ ನಾನು ಚಿರ ಋಣಿಯಾಗಿದ್ದೇನೆ” ಎಂದು ಭಾವಪೂರ್ಣವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಅವರು 12 ಸೇವಾ ಚಟುವಟಿಕೆಗಳ ಸಮಗ್ರ ಯೋಜನೆಯನ್ನು ಅನಾವರಣಗೊಳಿಸಿದರು ಹಸಿರೇ ಉಸಿರು ಅಭಿಯಾನ 1,200 ಗಿಡಗಳನ್ನು ನೆಡುವ ಬೃಹತ್ ಕಾರ್ಯಕ್ರಮದ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು, ಶೈಕ್ಷಣಿಕ ಸಬಲೀಕರಣ ಪ್ರತಿಭಾ ಪುರಸ್ಕಾರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು, ಶೈಕ್ಷಣಿಕ ನೆರವು ತಾಲೂಕಿನ ಎರಡು ಪ್ರೌಢಶಾಲೆಗಳಿಗೆ ಉಚಿತ ನೋಟ್ಬುಕ್ಗಳ ವಿತರಣೆ,ಮಹಿಳಾ ಆರೋಗ್ಯ ಮತ್ತು ನೈರ್ಮಲ್ಯ ಸ್ಯಾನಿಟರಿ ಪರಿಹಾರ ಬಸ್ ನಿಲ್ದಾಣಗಳು ಮತ್ತು ಕಾಲೇಜುಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷೀನ್ಗಳನ್ನು ಅಳವಡಿಕೆ, ಇಬ್ಬರು ಬಡ ಮಕ್ಕಳನ್ನು ಎರಡು ವರ್ಷಗಳ ಅವಧಿಗೆ ದತ್ತು ಪಡೆದು ಅವರ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸುವುದು,ರಸ್ತೆಬದಿಯ ಪತ್ರಿಕೆ ವಿತರಕರಿಗೆ ನೆರವು ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಹುಡುಗರಿಗೆ ಮಳೆ ಕೋಟ್ಗಳ ವಿತರಣೆ, ಆಂಬ್ಯುಲೆನ್ಸ್ ಸೇವೆ ಹೊಸ ವಾಹನದ ಮೂಲಕ ತುರ್ತು ಸಂದರ್ಭಗಳಲ್ಲಿ ರಿಯಾಯಿತಿ ದರದ ಆಂಬ್ಯುಲೆನ್ಸ್ ಸೇವೆ ನೀಡಿದ್ದೇವೆ
ಸೇವೆ “ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ತಲುಪಬೇಕು ಎಂಬುದು ನಮ್ಮ ಆಶಯವಾಗಿದೆ. ನಿರಂತರ ಸೇವೆಯನ್ನು ನೀಡುವುದು ನಮ್ಮ ದ್ಯೇಯೋ” ಎಂದು ಅಧ್ಯಕ್ಷ ಡಿ. ಸಂತೋಷ್ ಅವರು ಭವಿಷ್ಯದ ಬಗ್ಗೆ ಭರವಸೆ ನೀಡಿದರು. ಈ ಮೂಲಕ ರೋಟರಿ ಕ್ಲಬ್ ತುರುವೇಕೆರೆಯು ಮುಂದಿನ ವರ್ಷದಲ್ಲಿ ಮತ್ತಷ್ಟು ಸಮರ್ಪಣಾ ಭಾವದಿಂದ ಕೆಲಸ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
ಈ ಸೇವಾ ಉಪಕ್ರಮಗಳನ್ನು ಜಾರಿಗೆ ತರಲು ರೋಟರಿ ಕ್ಲಬ್ ಇತರ ಸಂಸ್ಥೆಗಳೊಂದಿಗೆ ಸಹಕರಿಸಲಿದೆ.ರೋಟರಿ ಕ್ಲಬ್ ತನ್ನ 12 ವರ್ಷಗಳ ಅವಧಿಯಲ್ಲಿ ಶೈಕ್ಷಣಿಕ ಬೆಂಬಲ, ಆರೋಗ್ಯ ಜಾಗೃತಿ, ಪರಿಸರ ಸಂರಕ್ಷಣೆ ಮತ್ತು ಸಮುದಾಯ ಅಭಿವೃದ್ಧಿಯಂತಹ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆಗಳನ್ನು ನೀಡಿದೆ. ಈ ವರ್ಷವು ‘ಸಂತೋಷ ಸೇವಾ ಸ್ಪರ್ಶ @ 12’ ಕಾರ್ಯಕ್ರಮದ ಮೂಲಕ ಸಂಸ್ಥೆಯ ಸೇವೆಯ ಸಂಭ್ರಮವನ್ನು ದ್ವಿಗುಣಗೊಳಿಸಿದೆ.ಮಾಜಿ ಶಾಸಕ ಮಸಾಲಾ ಜಯರಾಮ್ ಅವರ ಭಾಗವಹಿಸುವಿಕೆ ಮತ್ತು ಆಂಬ್ಯುಲೆನ್ಸ್ ಸೇವಾ ವಾಹನದ ಚಾಲನೆಯು ಈ ಸಮಾರಂಭವನ್ನು ಕೇವಲ ಪದಗ್ರಹಣ ಸಮಾರಂಭವನ್ನಾಗಿ ಮಾಡದೆ, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೊಸ ಆಯಾಮಗಳನ್ನು ತೆರೆದ ಮಹತ್ವದ ಕಾರ್ಯಕ್ರಮವನ್ನಾಗಿ ಮಾಡಿದೆ ರೊಟರಿ ಕ್ಲಬ್ ಅಂಬ್ಯುಲೆನ್ಸ್ ಅನ್ನು ಸೇವೆಗೆ ನೀಡುವಲ್ಲಿ ನೂತನ ಅಧ್ಯಕ್ಷರಾದ ಡಿ. ಸಂತೋಷ್ ರವರ ಪರಿಶ್ರಮ ಮತ್ತು ಅವರ ದೂರ ದೃಷ್ಟಿಯ ಅನಾವರಣವಾಗಿದೆ
ಈ ಸಂದರ್ಭದಲ್ಲಿ ಜಿಲ್ಲಾ ಪಾಲಕರಾದ ರವಿಶಂಕರ್ ಡಕೋಜು, ಮೇಘನಾ ಸಂತೋಷ್,ವಿ.ಆರ್. ಉಮೇಶ್,ಕಾರ್ಯದರ್ಶಿ ಸುನಿಲ್ ಸಿ.ಆರ್, ಸಂಸ್ಥಾಪಕ ಅಧ್ಯಕ್ಷ ಏನ್.ಆರ್. ಜಯರಾಮ್, ಉಪೇಂದ್ರ ಕುಮಾರ್ ,ಪ್ರಸನ್ನ ಕುಮಾರ್ ,ಸಾ.ಶಿ ದೇವರಾಜ್, ಶಿವರಾಜು, ಗ್ಯಾಸ್ ಪ್ರಭುಸ್ವಾಮಿ, ಗೀತಾ ಸುರೇಶ್, ಇನ್ನರ್ವಿಲ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ನೇತ್ರ ಸಿದ್ದಲಿಂಗ ಸ್ವಾಮಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
https://www.janataa24.com/operation-sindor-pok-9-terrorist/