Document

Turuvekere: ಮಾರುತಿ ಸ್ವಾಮಿಯ 31 ಅಡಿ ಎತ್ತರದ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ.

JANATAA24 NEWS DESK 

 

 

Turuvekere: ಮಾರುತಿ ಸ್ವಾಮಿಯ 31 ಅಡಿ ಎತ್ತರದ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ.

 

Turuvekere

ತುರುವೇಕೆರೆ: ತಾಲೂಕಿನ ಟಿಬಿ ಕ್ರಾಸ್ ಬಳಿ ಇರುವ ಶ್ರೀ ವಿನಾಯಕ ಮಾರುತಿ ದೇವಾಲಯದ ಮರು ಪ್ರತಿಷ್ಠಾಪನ ಕಾರ್ಯಕ್ರಮ ನಡೆಯಲಿದ್ದು ವಿಶೇಷವಾಗಿ ನೂತನವಾಗಿ ಸ್ಥಾಪಿತವಾಗಿರುವ 31 ಅಡಿ ಎತ್ತರದ ಶ್ರೀ ಮಾರುತಿ ಸ್ವಾಮಿಯ ಪ್ರತಿಮೆ, ವಿಮಾನ ಗೋಪುರ ಕಳಸ ಸ್ಥಾಪನೆ, ಹಾಗೂ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ನೂತನ ಮಾರುತಿ ದೇವರ ವಿಗ್ರಹ ಹಾಗೂ ಗಣೇಶ ಮೂರ್ತಿಯ ದೇವರುಗಳ ಪ್ರತಿಷ್ಠಾಪನೆಯನ್ನು ಇದೇ ತಿಂಗಳು ದಿನಾಂಕ 7-5-2026ನೇ ಗುರುವಾರ ಮತ್ತು 8-5- 2026ನೇ ಶುಕ್ರವಾರದಂದು ಅನಾವರಣಗೊಳಿಸಲಿದ್ದು ಅದ್ದೂರಿ ಸಮಾರಂಭ ಕುರಿತು ಇಂದು ಪತ್ರಿಕಾ ಮಾಧ್ಯಮ ಘೋಷ್ಠಿ ನಡೆಸಲಾಯಿತು.

 

ಶ್ರೀ ವಿನಾಯಕ ಮಾರುತಿ ದೇವಾಲಯ ಸಮಿತಿ ವತಿಯಿಂದ ಈ ಅದ್ದೂರಿ ಕಾರ್ಯಕ್ರಮ ನಡೆಯಲಿದ್ದು ಕುಂಭಾಭಿಷೇಕದ ದಿವ್ಯ ಸಾನಿಧ್ಯವನ್ನು ನಿರ್ಮಲಾನಂದನಾಥ ಮಹಾಸ್ವಾಮಿಜಿಯವರು ಮತ್ತು ಪ್ರಧಾನ ಕಾರ್ಯದರ್ಶಿಯಾದ ಪ್ರಸನ್ನನಾಥ ಸ್ವಾಮೀಜಿಯವರು ವಹಿಸಲಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರು ಮಹಾಸಂಸ್ಥಾನ ಮಠದ ಹಾಲಿ ಲೋಕಸಭಾ ಸದಸ್ಯರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಹಾಗೂ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರು ಆದಂತಹ ಎಚ್ ಡಿ ಕುಮಾರಸ್ವಾಮಿ, ಹಾಗೂ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆ ಸಚಿವರಾದಂತಹ ವಿ ಸೋಮಣ್ಣನವರು ಉದ್ಘಾಟಿಸಲಿದ್ದು,

 

ಅಧ್ಯಕ್ಷತೆಯನ್ನು ತುರುವೇಕೆರೆ ತಾಲೂಕಿನ ಜನಪ್ರಿಯ ಶಾಸಕರಾದ ಎಂ ಟಿ ಕೃಷ್ಣಪ್ಪನವರು ವಹಿಸಲಿದ್ದಾರೆ, ಹಾಗಾಗಿ ತುರುವೇಕೆರೆ ತಾಲೂಕಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಮಾಧ್ಯಮ ಗೋಷ್ಠಿ ಮುಖೇನ ಸರ್ವರಿಗೂ ಆಹ್ವಾನಿಸಿದ್ದಾರೆ. ಇನ್ನು ನೂತನವಾಗಿ ಶ್ರೀ ಮಾರುತಿ ದೇವರ ಹಾಗೂ ಗಣಪತಿ ದೇವರ ವಿಗ್ರಹಗಳನ್ನು ಹಾಲಿ ಮಾರುತಿ ದೇವಾಲಯದ ಅಧ್ಯಕ್ಷರಾದ, ಮನೋಜ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕರಾದ ಲೋಕೇಶ್ ಮತ್ತು ಸಾನ್ವಿ ಪಾಲಿ ಕ್ಲಿನಿಕ್ ಸೆಂಟರ್ ಮಾಲೀಕರಾದ ಸೌಮ್ಯ ಹರಿಪ್ರಸಾದ್ ವಿಗ್ರಹಗಳ ದಾನಿಗಳಾಗಿದ್ದು ಕಾರ್ಯಕ್ರಮ ನಡೆಯುವ ಎರಡು ದಿನಗಳ ಅನ್ನ ಸಂತರ್ಪಣೆಯನ್ನು ನಿಸರ್ಗ ಎಂಟರ್ಪ್ರೈಸಸ್ ಬೆಂಗಳೂರು, ಮಾಲೀಕರಾದ ಕೆ ಟಿ ಕುಮಾರ್ ಅನ್ನ ಸಂತರ್ಪಣೆಯನ್ನು ನಡೆಸಲಿದ್ದಾರೆ ಎಂದು ಕಮಿಟಿಯ ಪದಾಧಿಕಾರಿಗಳು ತಿಳಿಸಿದರು.

 

ಇದೇ ಸಂದರ್ಭದಲ್ಲಿ ಶ್ರೀ ವಿನಾಯಕ ಮಾರುತಿ ದೇವಾಲಯದ ಮಾರ್ಗದರ್ಶಕರಾದ ಶಂಕರ್ ಗುರೂಜಿ, ಪದಾಧಿಕಾರಿಗಳಾದ, ಲೋಕೇಶ್ ಅಧ್ಯಕ್ಷರು, ಕೆ ರಘು, ಹನುಮಂತರಾಜು ಉಪಾಧ್ಯಕ್ಷರು, ಕಾರ್ಯದರ್ಶಿಗಳಾದ ಜಿ ಡಿ ಗಂಗಾಧರಯ್ಯ, ಖಜಾಂಚಿ ಎಸ್ ಎನ್ ಚಂದ್ರಶೇಖರಯ್ಯ, ಸದಸ್ಯರುಗಳಾದ ನಂಜುಂಡಯ್ಯ, ವೈ ಮಂಜುನಾಥ್, ಪಿ ನಾಗೇಶ್, ಸ್ವಾಮಿ, ಎಂ ಕೆ ಶಿವಣ್ಣ, ಕೆ ಎಲ್ ಲೋಕೇಶ್, ಎಸ್ ಪಿ ಶಿವಣ್ಣ, ರಾಮಚಂದ್ರ ಎಸ್ ಎನ್ ಇನ್ನು ಹಲವರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು.

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *