Document

Turuvekere: ಕರ್ನಾಟಕ ಕೃಷಿ ರೈತ ಬಂಧು ವೇದಿಕೆ  ಯುವ ಘಟಕದ ರಾಜ್ಯಾಧ್ಯಕ್ಷರಾಗಿ ದಬ್ಬೇಘಟ್ಟ ಡಿ.ಪಿ. ವೇಣುಗೋಪಾಲ್ ನೇಮಕ.

JANATAA24 NEWS DESK 

 

Turuvekere: ಕರ್ನಾಟಕ ಕೃಷಿ ರೈತ ಬಂಧು ವೇದಿಕೆ  ಯುವ ಘಟಕದ ರಾಜ್ಯಾಧ್ಯಕ್ಷರಾಗಿ ದಬ್ಬೇಘಟ್ಟ ಡಿ.ಪಿ. ವೇಣುಗೋಪಾಲ್ ನೇಮಕ.

 

Turuvekere

ತುರುವೇಕೆರೆ: ಕರ್ನಾಟಕ ಕೃಷಿ ರೈತ ಬಂಧು ವೇದಿಕೆ (ರಾಜ್ಯ ರೈತ ಸಂಘಟನೆ) ಯುವ ಘಟಕದ ರಾಜ್ಯಾಧ್ಯಕ್ಷರಾಗಿ ದಬ್ಬೇಘಟ್ಟ ಪುಟ್ಟರಾಜು ರವರ ಸುಪುತ್ರರಾದ ಡಿ.ಪಿ. ವೇಣುಗೋಪಾಲ್ ರವರನ್ನು ವೇದಿಕೆಯ ರಾಜ್ಯಾಧ್ಯಕ್ಷರಾದ ಮುತ್ತುಗದಹಳ್ಳಿ ಹೊನ್ನೇಶ್ ಗೌಡರವರು ನೇಮಿಸಿ ಆದೇಶಿಸಿದ್ದಾರೆ.ಮಾಧ್ಯಮ ಮಿತ್ರರನ್ನು ಉದ್ದೇಶಿಸಿ ಮಾತನಾಡಿದ ಡಿ.ಪಿ. ವೇಣುಗೋಪಾಲ್ ರವರು ರೈತರು ದೇಶದ ಆರ್ಥಿಕತೆಯ ರೂವಾರಿಗಳು ˌ ಪ್ರೊ॥ ನಂಜುಂಡಸ್ವಾಮಿ ಅವರಂತಹ ರೈತ ಹೋರಾಟಗಾರರು ನನ್ನಂತಹ ಯುವಕರಿಗೆ ಪ್ರೇರಣೆ ˌ

 

ರೈತರು ಸ್ವಾಭಿಮಾನಿಗಳು ದೇಶದ ಅಭಿವೃದ್ದಿಯಲ್ಲಿ ರೈತರ ಪಾತ್ರವೂ ಮಹತ್ತರವಾದುದು. ರೈತರು ದೇಶದ ಬೆನ್ನೆಲುಬು ಮತ್ತು ನಮಗೆ ಅನ್ನ ನೀಡುವ ನಿಜವಾದ ದೇವರೆನಿಸಿಕೊಂಡಿದ್ದಾರೆ. ಬಿಸಿಲು, ಮಳೆ ಎನ್ನದೆ ಹೊಲದಲ್ಲಿ ಕಷ್ಟಪಟ್ಟು ದುಡಿದು, ಇಡೀ ದೇಶದ ಹಸಿವನ್ನು ನೀಗಿಸುವ ರೈತರ ಪಾತ್ರ ಅಮೂಲ್ಯವಾದುದು. ಕೃಷಿಯು ಭಾರತೀಯ ಆರ್ಥಿಕತೆಯ ಮೂಲಾಧಾರವಾಗಿದ್ದು, ಲಕ್ಷಾಂತರ ಜನರಿಗೆ ಉದ್ಯೋಗ ಮತ್ತು ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ*ರೈತರು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿ ಅನಿಶ್ಚಿತತೆ: ಹವಾಮಾನ ವೈಪರೀತ್ಯಗಳು, ಅಕಾಲಿಕ ಮಳೆ ಮತ್ತು ಬರಗಾಲಗಳು ರೈತನ ಬದುಕನ್ನು ಅತಂತ್ರಗೊಳಿಸುತ್ತವೆ.

 

ಆರ್ಥಿಕ ಸಂಕಷ್ಟ: ಬೀಜ, ರಸಗೊಬ್ಬರಗಳ ಹೆಚ್ಚಿನ ಬೆಲೆ ಮತ್ತು ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವುದು ಸಾಲದ ಸುಳಿಗೆ ಕಾರಣವಾಗುತ್ತದೆ. ತಾಂತ್ರಿಕತೆಯ ಕೊರತೆ: ಅನೇಕ ರೈತರು ಇಂದಿಗೂ ಆಧುನಿಕ ಕೃಷಿ ಪದ್ಧತಿಗಳು ಮತ್ತು ನೀರಾವರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.ರೈತರಿಲ್ಲದೆ ಪ್ರಗತಿ ಅಸಾಧ್ಯ. “ರೈತ ಶ್ರೀಮಂತನಾದರೆ ರಾಷ್ಟ್ರವೂ ಶ್ರೀಮಂತ” ಎಂಬ ನುಡಿಯಂತೆ, ರೈತರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಅವರ ಶ್ರಮವನ್ನು ಗುರುತಿಸಿ, ಅವರಿಗೆ ಅಗತ್ಯವಾದ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ರೈತರನ್ನು ಗೌರವಿಸಬೇಕು ಮತ್ತು ಅವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ನೋಡಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಸಶಕ್ತಗೊಳಿಸುವಲ್ಲಿ ಇನ್ನೂ ಅನೇಕ ಉಪಯುಕ್ತ ಯೋಜನೆಗಳನ್ನು ತರುವ ಮೂಲಕ ರೈತರ ಶ್ರೇಯಸ್ಸಿಗಾಗಿ ಶ್ರಮಿಸಬೇಕು ˌ ಮುಂದಿನ ದಿನಗಳಲ್ಲಿ ರೈತ ಸಮುದಾಯನ್ನು ಆರ್ಥಿಕವಾಗಿ ಸಬಲಗೊಳಿಸುವುದಕ್ಕೆ ಅನೇಕ ಯೋಜನೆಗಳನ್ನು ರೂಪಿಸಬೇಕುˌ ನಾವೆಲ್ಲರೂ ಸಮಸ್ತ ನಾಡಿನ ರೈತರ ಜೊತೆ ಇರುತ್ತೇವೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಹೊನ್ನೇಶ್ ಗೌಡರು ˌ ರೈತ ಮುಖಂಡರಾದ ದಿಲ್ ˌ ಸುಬ್ಬಣ್ಣ ˌ ಕುಮಾರ್ ˌ ಮಂಜುನಾಥ್ ಹಾಗೂ ಮುಖಂಡರು ಉಪಸ್ಥಿತರಿದ್ದರು.

 

 

ವರದಿ: ಮಂಜುನಾಥ್ ತುರುವೇಕೆರೆ.

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *