Document

Tiptur: ಕಲೋತ್ಸವದಲ್ಲಿ ಜಾನಪದ ಮೆರುಗು ತಂದ ಕನ್ನಡಾಂಬೆಯ ಜಂಬೂಸವಾರಿ.

JANATAA24 NEWS DESK 

 

 

Tiptur: ಕಲೋತ್ಸವದಲ್ಲಿ ಜಾನಪದ ಮೆರುಗು ತಂದ ಕನ್ನಡಾಂಬೆಯ ಜಂಬೂಸವಾರಿ.

Tiptur: ಕಲೋತ್ಸವದಲ್ಲಿ ಜಾನಪದ ಮೆರುಗು ತಂದ ಕನ್ನಡಾಂಬೆಯ ಜಂಬೂಸವಾರಿ.
ತಿಪಟೂರು : ನಗರದ ಕಲ್ಪತರು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ, ಕಲಾಕೃತಿ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಪರ ಸಂಘಟನೆಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಾನಪದ ಸಂಭ್ರಮಕ್ಕೆ ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು.

ಕಲೋತ್ಸವ ಕಾರ್ಯಕ್ರಮದ ಜನಪದ ಸಂಭ್ರಮದಲ್ಲಿ ನಗರದ ಕೆಂಪಮ್ಮ ದೇವಸ್ಥಾನದಿಂದ ಕಲ್ಪತರು ಕ್ರೀಡಾಂಗಣದವರೆಗೆ ಆನೆಯ ಮೇಲೆ ಅಂಬಾರಿಯನ್ನಿಟ್ಟು ಕನ್ನಡಾಂಬೆಯ ಭಾವಚಿತ್ರದೊಂದಿಗೆ ಸುಮಾರು ಮೂರು ಕಿ.ಮೀ ಅಂಬಾರಿ ಉತ್ಸವ ಜರುಗಿತು.

ಕಲೋತ್ಸವದ ಕಾರ್ಯಕ್ರಮದ ಅಂಗವಾಗಿ ಕ್ರೀಡಾಂಗಣದಲ್ಲಿ ಸಾಕು ಪ್ರಾಣಿಗಳ ಪ್ರದರ್ಶನ, ಹಿರಿಯರಿಗೆ ಪ್ರತ್ಯೇಕವಾಗಿ ಮಹಿಳಾ ಮತ್ತು ಪುರುಷರಿಗೆ ಮನರಂಜನಾ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗಿತ್ತು ರಂಗಗೀತೆಗಳ ಸ್ಪರ್ಧೆ ನೆಡೆಯಿತು. ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜನೆ ಮಾಡ್ಲಿ ಹಿರಿಯರ ವಿಭಾಗದಲ್ಲಿ ತರುಣ್ ಪ್ರಥಮ, ಸರಸ್ವತಿ ದ್ವಿತೀಯ, ಸಿಯಾ. ಎಮ್.ಪಟೇಲ್ ತೃತಿಯ, ಕಿರಿಯರ ವಿಭಾಗದಲ್ಲಿ ತನ್ಮಯಿ ಚೈತನ್ಯ ಪ್ರಥಮ, ಚಿನ್ಮಯ್‌ಗೌಡ ದ್ವಿತೀಯ, ಚಿಂತನ.ಎನ್.ಆರ್ ತೃತೀಯ ಸ್ಥಾನ ಪಡೆದರು.

ಉತ್ಸವದಲ್ಲಿ ಬೆಳ್ಳಿರಥದಲ್ಲಿ ಹೊಸಳ್ಳಿ ಪುರದ ಬಸವೇಶ್ವರ ಸ್ವಾಮಿ ವಿಗ್ರಹ, ಕುದುರೆ, ಎತ್ತು ಹಸು ನಗಾರಿ, ನಂದಿಧ್ವಜ ಕುಣಿತ, ವೀರಗಾಸೆ, ಸೋಮನ ಕುಣಿತ, ನಾನಾ ಜನಪದ ಕಲಾ ತಂಡಗಳ ಮೆರವಣಿಗೆ, ಕನ್ನಡದ ಕೆಂಪು ಹಳದಿ ಬಾವುಟಗಳು ರಾರಾಜಿಸಿ ವಿವಿಧ ರೀತಿಯ ವಾಧ್ಯಗಳೊಂದಿಗೆ, ತೆರೆದ ವಾಹನದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಜೊತೆಗೂಡಿ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿತು. ಮಹಿಳೆಯರು ಪುರುಷರು ತಲೆಗೆ ಪೇಟವನ್ನು ಧರಿಸಿ ಸಂಭ್ರಮಿಸಿದರು.

ಕನ್ನಡ ಧ್ವಜಾರೋಹಣ ನೇರವೇರಿಸಿದ ಸಮ್ಮೇಳನಾಧ್ಯಕ್ಷೆ ಸೆಂಟ್ರಲ್ ಶಾಲೆಯ ಕಾವೇರಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಯಾವ ಕಡೆ ಸಾಗುತ್ತಿದ್ದಾರೆ. ಅವರ ಮೇಲಾಗುತ್ತಿರುವ

ಒತ್ತಡ ಮತ್ತು ನೈತಿಕ ಪಾಠ, ಸಮಾಜದ ಅಭಿವೃದ್ಧಿ ಕುಟುಂಬ ವ್ಯವಸ್ಥೆಗಳ ಬಗ್ಗೆ ಮತ್ತು ಇಂದಿನ ಮನುಷ್ಯನ ಜೀವನಶೈಲಿಯ ಬಗ್ಗೆ ಚಿಂತನೆ ಮಾಡಬೇಕಾಗಿದ್ದು ನಮ್ಮ ಭಾಷೆ, ನಾಡು, ಸಂಸ್ಕೃತಿ ಬಗ್ಗೆ ಪ್ರೀತಿ ಗೌರವ ಬೆಳೆಸುವುದು ಮಕ್ಕಳ ಸಾಹಿತ್ಯ ಸಮ್ಮೇಳನದ ವಿಶೇಷತೆಯನ್ನು ಅರಿಯಬೇಕಾಗಿದೆ. ಕವಿಗೋಷ್ಠಿಯಲ್ಲಿ ಇಪ್ಪತ್ತುಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಕವನವನ್ನು ವಾಚನ ಮಾಡಿದರು.

ವಿಚಾರ ಗೋಷ್ಠಿಯಲ್ಲಿ ಮಕ್ಕಳಿಗೆ ಮೊಬೈಲ್ ಬೇಕೇ

ಬೇಡವೇ ಎಂದು ಪೂರ್ವಿಕ.ಎಮ್.ಕೆ. ಮಕ್ಕಳಿಗೆ

ಕನ್ನಡ ಭಾಷೆ ಕಲಿಕೆ ಅಗತ್ಯವೇ ಎಂದು ವರ್ಷ.ಕೆ.

ಮಕ್ಕಳ ಓದಿಗೆ ಅಡ್ಡಿಯಾಗುವ ಒತ್ತಡಗಳು ಎಂಬುದರ

ಬಗ್ಗೆ ಅಮೂಲ್ಯ, ಮಕ್ಕಳಿಗೆ ಅಜ್ಜ ಅಜ್ಜಿಯರ

ಅವಶ್ಯಕತೆ ಎಂಬುದರ ಬಗ್ಗೆ ಮಧು ಪ್ರಬಂಧವನ್ನು

ಶುಕ್ರವಾರ ‘ಕಲಾ ಸಂಭ್ರಮ’ ಕಾರ್ಯಕ್ರಮ. ಬೆಳಿಗ್ಗೆ 9ಕ್ಕೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯೊಂದಿಗೆ ಕಾರ್ಯಕ್ರಮ. ವಿವಿಧ ಇಲಾಖೆಗಳ ಜೊತೆ ಟೆನ್ನಿಸ್ ಬಾಲ್ ಕ್ರಿಕೇಟ್ ಟೂರ್ನಿ, 11.00 ಗಂಟೆಗೆ ಯಕ್ಷಗಾನ, ಜಾನಪದ ಗೀತೆ, ಭಾವಗೀತೆ, ಚಲನಗೀತೆ ಗಾಯನ ಸ್ಪರ್ಧೆ, ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ಅಭಿನಂದನಾ ಸಮಾರಂಭ, ಸಮಾರೋಪ ಕಾರ್ಯಕ್ರಮದಲ್ಲಿ ಖ್ಯಾತ ಸಿನಿಮಾ ನಟಿ ಉಮಾಶ್ರೀ ಅವರಿಗೆ ‘ಕಲ್ಪತರು ರತ್ನ’ ಪ್ರಶಸ್ತಿಯನ್ನು ಗೃಹ ಸಚಿವ ಡಾ.ಜಿಪರಮೇಶ್ವರ್ ಪ್ರದಾನ ಮಾಡಲಿದ್ದಾರೆ. ಇದೇ ವೇಳೆ, ತೆಂಗು ಉತ್ಪನ್ನಗಳ ಹಾಗೂ ಕೃಷಿ ವಸ್ತು ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಕಂಚಾಘಟ್ಟದ ರುದ್ರಮುನಿ ಸ್ವಾಮೀಜಿ, ಶಾಸಕ ಕೆ.ಷಡಕ್ಷರಿ, ಉಪವಿಭಾಗಧಿಕಾರಿ ಸಪ್ತಶ್ರೀ.ಬಿ.ಕೆ. ಕಲಾಕೃತಿ ಸಂಸ್ಥೆಯ ಅಧ್ಯಕ್ಷ ಡಾ.ಶ್ರೀಧರ್, ತಹಶೀಲ್ದಾರ್ ಮೋಹನ್‌ ಕುಮಾರ್. ತಾ.ಪಂ ಇಒ ಸುದರ್ಶನ್, ಡಿವೈಎಸ್ಪಿ ಜಯಲಕ್ಷಮ್ಮ ಬಿಇಒ ತಾರಾಮಣಿ ಸೇರಿದಂತೆ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ವರದಿ: ಮಂಜುನಾಥ್ ಡಿ ತಿಪಟೂರು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

Document

Leave a Reply

Your email address will not be published. Required fields are marked *