JANATAA24 NEWS DESK
Gubbi: NREG ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ–ಎಸ್ ಆರ್ ಶ್ರೀನಿವಾಸ್.

ಗುಬ್ಬಿ : ಎನ್ ಆರ್ ಇ ಜಿ(NREG)ಯೋಜನೆಯ ಕಾಮಗಾರಿಯನ್ನು ಸದುಪಯೋಗಪಡಿಸಿಕೊಂಡಲ್ಲಿ ಗ್ರಾಮಗಳು ಅಭಿವೃದ್ಧಿ ಪಥದತ್ತ ಸಾಗುತ್ತವೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಕಡಬ ಹೋಬಳಿ ಕೊಪ್ಪ ಗ್ರಾಮದ ನೂತನ ಗ್ರಾಮ ಪಂಚಾಯಿತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಎನ್ ಆರ್ ಇ ಜಿ ಕಾಮಗಾರಿಯನ್ನು ಸದುಪಯೋಗ ಪಡಿಸಿಕೊಂಡಾಗ ಗ್ರಾಮಗಳು ಅಭಿವೃದ್ಧಿಯತ್ತ ಸಾಗುತ್ತವೆ. ಸ್ಥಳೀಯ ಆಡಳಿತಕ್ಕೆ ತುಂಬಾ ಪವರ್ ಇದ್ದು ನಾಸಿರ್ ಸಾಭ್ ಅವರು ಕಟ್ಟಿದ್ದ ಸ್ಥಳೀಯ ಆಡಳಿತ ಬಹಳ ಅಚ್ಚುಕಟ್ಟಾಗಿ ನಡೆಯಬೇಕಿತ್ತು.
ಗ್ರಾಮಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿ ಪರಿಕಲ್ಪನೆ ಹೊಂದಿದ್ದು ತಾತ್ಕಾಲಿಕ ನೆರವಿಗಾಗಿ ರೂಪಿಸಿದ್ದು, ಇಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ನಮಗೆ ಒತ್ತಡ ಕಡಿಮೆಯಾಗುತ್ತದೆ.
ಸಾರ್ವಜನಿಕರು ನೀರು ಬರ್ಲಿಲ್ಲ ಅಂದ್ರು ನನಗೆ ದೂರವಾಣಿ ಕರೆ ಮಾಡುತ್ತಾರೆ, ಇಂತಹ ಚಿಕ್ಕಪುಟ್ಟ ವಿಷಯಗಳಿಗೆ ನನಗೆ ಮಾಹಿತಿ ನೀಡುವ ಬದಲಿಗೆ ಇಲ್ಲಿ ಆಗಬೇಕಾದ ಕೆಲಸ ಮಾಡಿದರೆ ಖಂಡಿತ ಹಳ್ಳಿಯ ಜನರಿಗೆ ಅನುಕೂಲ ವಾಗುತ್ತದೆ. ಹಾಗೂ ಗುಬ್ಬಿ ತಾಲೂಕಿನಲ್ಲಿ ಅತೀ ಹೆಚ್ಚು ಅನುದಾನ ತೆಗೆದ ಕೊಂಡಿರುವ ಗ್ರಾಮ ಪಂಚಾಯತಿ ಕೊಪ್ಪ ಗ್ರಾಮ ಪಂಚಾಯತಿಯಾಗಿದೆ ಎಂದ ಅವರು ಈ ಭಾಗದಲ್ಲಿ ರಸ್ತೆ ಕಾಮಗಾರಿಗೆ ಡಿಸೆಂಬರ್ ವೇಳೆಗೆ ಭೂಮಿ ಪೂಜೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕಲಾವತಿ ಹನುಮಂತರಾಜು, ಉಪಾಧ್ಯಕ್ಷೆ ಕವಿತ ಮಂಜುನಾಥ್, ಸದಸ್ಯರು, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಕೆ ಆರ್ ವೆಂಕಟೇಶ್, ಇಓ ರಂಗನಾಥ್, ಪಿಡಿಓ ಮಂಜುಳ, ಮುಖಂಡರಾದ ಕೆ ಎಸ್ ಸುರೇಶ್, ಮಂಜುನಾಥ್,ಕೊಪ್ಪ ಗುರು, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.