JANATAA24 NEWS DESK
Pavagada: ಸರ್ಕಾರದ ವಿಧಿವಿಧಾನ ಮೂಲಕ ಸ್ವತಂತ್ರ ಹೋರಾಟಗಾರ ಪಾವಗಡ ಗಾಂಧಿ ಎಂದೇ ಹೆಸರುವಾಸಿಯಾದ ವಿ.ಎನ್.ರೆಡ್ಡಿ ಯವರ ಅಂತ್ಯ ಸಂಸ್ಕಾರ ಜಿಲ್ಲಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ನೇರವರಿತು.

ಪಾವಗಡ: ತಾಲೂಕಿನ ವೆಂಕಟಾಪುರ ಗ್ರಾಮಕ್ಕೆ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ಅವರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಜಿಲ್ಲಾಡಳಿತದ ಪರವಾಗಿ ಗೌರವ ಸಮರ್ಪಿಸಿ ಮಾತನಾಡಿದ ಅವರು ನಮ್ಮ ತುಮಕೂರು ಜಿಲ್ಲೆಯಲ್ಲಿ ಹಲವು ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ, ಅಂತಹವರಲ್ಲಿ ಪಾವಗಡ ತಾಲ್ಲೂಕಿನ ವಿ.ಎನ್.ರೆಡ್ಡಿ ಯವರು ಒಬ್ಬರಾಗಿದ್ದರು, ಅವರು ಸ್ವಾತಂತ್ರ್ಯ ನಂತರ ಸುಮಾರು ಮೂವತ್ತು ವರ್ಷಗಳ ಕಾಲ ಮಂಡಲ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು, ನಮ್ಮ ಜಿಲ್ಲಾಡಳಿತದ ವತಿಯಿಂದ ಗೌರವ ಸಮರ್ಪಣೆ ಮಾಡಲಾಗುತ್ತಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದರು
ಮಾಜಿ ಸಚಿವರಾದ ವೆಂಕಟರಮಣಪ್ಪ ರವರು ಮಂಗಳವಾರ ಬೆಳಗ್ಗೆ ತಾಲೂಕಿನ ವೆಂಕಟಾಪುರ ಗ್ರಾಮದ ಮೃತರ ನಿವಾಸಕ್ಕೆ ಭೇಟಿ ನೀಡಿದ ಸಚಿವರು ರೆಡ್ಡಿಯವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿ ಮಾತನಾಡಿದ ಅವರು ವಿ.ಎನ್.ರೆಡ್ಡಿಯವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ನಮಗೆಲ್ಲಾ ಮಾರ್ಗದರ್ಶಕರಾಗಿದ್ದರು, ಬಹಳ ಪ್ರಾಮಾಣಿಕರಾಗಿದ್ದ ಅವರು ಅಷ್ಟೇ ಹಠವಾದಿಯಾಗಿದ್ದರು, ಯಾವಾಗಲೂ ತಾಲೂಕಿನ ಅಭಿವೃದ್ಧಿಯ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದರು, ಅಂತಹ ಒಬ್ಬ ನಾಯಕರನ್ನು ಇಂದು ಕಳೆದುಕೊಂಡಂತಾಗಿದೆ,ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದರು
ಇದೇ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್.ರೆಡ್ಡಿ ಅವರ ನಿಧನಕ್ಕೆ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ರವಿ ಮತ್ತಿತರರು ಕೂಡ ಸಂತಾಪ ಸೂಚಿಸಿ, ಗೌರವ ಸಮರ್ಪಣೆ ಮಾಡಿದರು.
ಗಡಿನಾಡು ವೆಂಕಟಾಪುರದ ವಿ.ಎನ್.ರೆಡ್ಠಿ ಅವರಿಗೆ ಸು. 103 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಸೋಮವಾರ ಕೊನೆಯುಸಿರೆಳೆದಿದ್ದಾರೆ.
ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ್ದ ತಾಲೂಕಿನ ಗಾಂಧಿವಾದಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಅವರು, ರೈತ ಕುಟುಂಬದಲ್ಲಿ ಜನಿಸಿ, ವಿದ್ಯಾರ್ಥಿ ಜೀವನದಲ್ಲಿ ಒಂದಲ್ಲ ಒಂದು ಕ್ರಿಯಾತ್ಮಕ ಹಾಗೂ ಸಂಘಟಿತ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಅನೇಕ ದೇಶ ಭಕ್ತರು, ರಾಷ್ಟನಾಯಕರ ಸಂಪರ್ಕ ಪಡೆದಿದ್ದರು. ಚಿಕ್ಕ ವಯಸ್ಸಿಗೆ ಮಹಾತ್ಮಗಾಂಧಿ,ಲೋಕನಾಯಕ ಜಯಪ್ರಕಾಶ್ ನಾರಾಯಣ, ಡಾ.ರಾಮ್ ಮಹೋಹರ್ ಲೋಹಿಯಾ, ಮತ್ತಿತರಿಂದ ಪ್ರಭಾವಿತರಾಗಿದ್ದರು. ಹಲವು ಮಂದಿ ಗಾಂಧಿವಾದಿಗಳಲ್ಲಿ ಇವರು ಸಹ ಪ್ರಮುಖರು.
ವಿ.ಎನ್.ರೆಡ್ಡಿ ನಿಧನದಿಂದ ಜಿಲ್ಲೆ ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಕಳೆದುಕೊಂಡಿದೆ.
ಹೇಳಿಕೆ:-ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಅವರು ಮಾತನಾಡಿ ನನ್ನ ಈ ಸ್ವಗ್ರಾಮವಾದ ವೆಂಕಟಪುರ ವಾಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರದ ವಿ.ಎನ್ ರೆಡ್ಡಿ ಅವರು ಊರು ಎಂಬುದು ನನಗೆ ಗೌರವದ ವಿಷಯ ವಿ.ಎನ್ ರೆಡ್ಡಿ ಅವರ ಸಾವಿನ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಿ ಗೌರವದಿಂದ ಅವರ ಅಂತ್ಯ ಸಂಸ್ಕಾರ ನಡೆಸಲು ವಿಚಾರ ಮುಟ್ಟಿಸಿದ ನಂತರ ಎಲ್ಲಾ ಸರ್ಕಾರಿ ಗೌರವದ ರೀತಿಯಲ್ಲಿ ಮಂಗಳವಾರ ಅಂತ್ಯಸಂಸ್ಕಾರ ಜಿಲ್ಲಾ ಆಡಳಿತ ನಡೆಸಿಕೊಟ್ಟಿದ್ದಾರೆ ಎಂದರು.
ಹೇಳಿಕೆ:-ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ ವಿ.ಎನ್ ರೆಡ್ಡಿ ಪ್ರಾಮಾಣಿಕ ವ್ಯಕ್ತಿ ಎಂಬುದಾಗಿ ಗುರುತಿಸಲ್ಪಟ್ಟಿದ್ದರು ಇವರ ಆದರ್ಶಗಳು ಇಂದಿನ ಮಕ್ಕಳು ಪಾಲಿಸಬೇಕು ಬಹಳಷ್ಟು ವಿಚಾರಧಾರೆಗಳು ಇವರಿಂದ ನಾವು ಕೇಳಿ ಮಾಹಿತಿ ಪಡೆಯುತ್ತಿದ್ದೆವು.
ಈ ವೇಳೆ ಹಿರಿಯ ಅಧಿಕಾರಿಗಳು, ಇತರೆ ಸ್ಥಳೀಯ ಗಣ್ಯರು ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದರು.
ವರದಿ: ಇಮ್ರಾನ್ ಉಲ್ಲಾ. ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.