JANATAA24 NEWS DESK
Tiptur: ಕೇರಾ ಸಂಘದ ವತಿಯಿಂದ ೭೦ನೇ ಕನ್ನಡ ರಾಜ್ಯೋತ್ಸವದ ಆಚರಣೆಗೆ ಸಕಲ ಸಿದ್ಧತೆ.

ತಿಪಟೂರು: ತಾಲೂಕಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಾಡಗೀತೆ ಗಾಯನ, ಸಾಧಕರಿಗೆ ಸನ್ಮಾನ ನಡೆಯಲಿದೆ. ಹಾಗೂ ವಿಶೇಷವಾಗಿ ಅಸಮಾನ್ಯ ಜ್ಞಾನ ಹೊಂದಿರುವ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಮಾಡಿರುವ ಕಲ್ಪತರು ಸೆಂಟ್ರಲ್ ಸ್ಕೂಲ್ ಶಾಲೆಯ ಹತ್ತು ವರ್ಷ ಐದನೇ ತರಗತಿ ಪುಟ್ಟ ಬಾಲಕಿ ಲೇಖನ ಎಆರ್ ರವರಿಗೆ ಅದ್ದೂರಿ ಸನ್ಮಾನ ಹಾಗೂ ಕಲ್ಪತ ರತ್ನ ಪ್ರಶಸ್ತಿ ನೀಡಲಾಗುವುದು. ಜಾನಪದ ಗಾಯನಕ್ಕೂ ಅವಕಾಶ ಕಲ್ಪಿಸಲಾಗಿದೆ.
ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಸಕಲಸಿದ್ಧತೆ ನಡೆಸಲಾಗಿದೆ ಎಂದು ಕೇರಾ ಸಂಘದ ಹಾಗೂ ಪ್ರಿಂಟ್ ಮೀಡಿಯಾ ಸಂಘದ ವತಿಯಿಂದ ಹಾಸನ ಸರ್ಕಲ್ ಶಿವಕುಮಾರ್ ವೃತ್ತದ ನಂದಿನಿ ಡೈರಿ ಆವರಣದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಡಾ! ಭಾಸ್ಕರ್ ಚಾರ್ ತಿಳಿಸಿದರು.
೭೦ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಲಾಗುವುದು. ಹಾಗೂ ಪತ್ರಿಕಾ ರಂಗದಲ್ಲೂ ಸಹ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಗುವುದು.
ಕೇರಾ ಸಂಘದ ಜಿಲ್ಲಾಧ್ಯಕ್ಷರಾದ ಡಾ. ಭಾಸ್ಕರ್ ಮಾತನಾಡಿ ಕನ್ನಡ ರಾಜ್ಯೋತ್ಸವ ಪ್ರತಿ ವರ್ಷ ಆಚರಿಸುತ್ತಿದ್ದು ಈ ವರ್ಷವೂ ಸಹ ಬಾರಿ ವಿಜೃಂಭಣೆಯಿಂದ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ. ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ. ವಿಶೇಷ ಮುಖ್ಯ ಅತಿಥಿಗಳಿಗೆ ಹಾಗೂ ಪತ್ರಕರ್ತರಿಗೂ ಸನ್ಮಾನಿಸಲಾಗುವುದು.
ಕನ್ನಡ ರಾಜ್ಯೋತ್ಸವದಲ್ಲಿ ಜಾನಪದ ಮುಂತಾದ ಜಾನಪದ ಗಾಯನಗಳಿಗೂ ಅವಕಾಶ ನೀಡುವ ಕೆಲಸ ಮಾಡೋಣ ನಮ್ಮ ಸ್ಥಳಿಯ ಜಾನಪದ ಮತ್ತು ನೆಲ ಮೂಲ ಸಂಸ್ಕೃತಿಯನ್ನು ಉಳಿಸಲು ಪ್ರೋತ್ಸಾಹ ನೀಡೋಣ ಎಂದರು.
ಸಂಘದ ಅಧ್ಯಕ್ಷರಾದ ರಾಜು ಟಿ ಬೆಣ್ಣೇನಹಳ್ಳಿ, ಸರ್ವೆ ಚಾರ್ ಉಪಾಧ್ಯಕ್ಷರು, ಶಂಕ್ರಪ್ಪ ಬಳ್ಳೆ ಕಟ್ಟೆ ಗೌರವಾಧ್ಯಕ್ಷರು, ಡಾ! ವೆಂಕಟೇಶ್ ಎಲ್. ಎಂ. ಗೌರವ ಸಲಹೆಗಾರರು, ಧರಣೇಶ್ ಕುಪ್ಪಾಳು ಪ್ರಧಾನ ಕಾರ್ಯದರ್ಶಿ, ಶುಭ ವಿಶ್ವಕರ್ಮ ಖಜಾಂಚಿ, ಮನು ಪ್ರಧಾನ ಕಾರ್ಯದರ್ಶಿ, ಮಂಜುನಾಥ್ ಗುರಗದ ಹಳ್ಳಿ, ಸಹ ಕಾರ್ಯದರ್ಶಿ, ಮಂಜುನಾಥ್ ಡಿ ಹಾಲ್ಕುರಿಕೆ ಸಹ ಕಾರ್ಯದರ್ಶಿ, ತಾಂಡವಮೂರ್ತಿ ನಿರ್ದೇಶಕರು, ತ್ರಿವೇಣಿ ಸುಂದರ್, ಸೂರಜ್ ಹಿರೇಮಠ , ರಘು, ಟಿಂಬರ್ ಕಿರಣ್, ಚನ್ನವೀರ ಗೌಡ, ಹಾಗೂ ಸಂಘದ ಪದಾಧಿಕಾರಿಗಳು ಜನಪ್ರತಿನಿಧಿಗಳು, ಹಾಗೂ ನಾನ ಇಲಾಖೆ ಅಧಿಕಾರಿಗಳು, ತಾಲೂಕಿನ ಮಾಧ್ಯಮ ಮಿತ್ರರು, ಕಟ್ಟಡ ಕಾರ್ಮಿಕ ಸಂಘಮತ್ತು ಆಟೋ ಸಂಘದವರು ವಿವಿಧ ಸಂಘ ಸಂಸ್ಥೆಗಳು ಹಾಗೂ ಕನ್ನಡಾಭಿಮಾನಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇರಾ ಸಂಘ ಹಾಗೂ ಪ್ರಿಂಟ್ ಮೀಡಿಯಾ ಪತ್ರಿಕಾ ಸಂಘದ ಮಾಧ್ಯಮ ಮಿತ್ರರು ಮನವಿ ಮಾಡಲಾಯಿತು.
ವರದಿ: ಮಂಜುನಾಥ್ ಡಿ ತಿಪಟೂರು
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.