Tiptur: 70ನೇ ಕನ್ನಡ ರಾಜ್ಯೋತ್ಸವ ಹಾಗೂ ಕಲ್ಪತರು ನಾಡ ಹಬ್ಬ ಕಲ್ಪೋತ್ಸವ ಆಚರಣೆ ಸಿದ್ಧತೆಗೆ ಪೂರ್ಭಾವಿ ಸಭೆ.

JANATAA24 NEWS DESK 

 

 

Tiptur: 70ನೇ ಕನ್ನಡ ರಾಜ್ಯೋತ್ಸವ ಹಾಗೂ ಕಲ್ಪತರು ನಾಡ ಹಬ್ಬ ಕಲ್ಪೋತ್ಸವ ಆಚರಣೆ ಸಿದ್ಧತೆಗೆ ಪೂರ್ಭಾವಿ ಸಭೆ.

Tiptur

ತಿಪಟೂರು: ಸಾಂಸ್ಕೃತಿಕ ತವರು ತಿಪಟೂರಿನಲ್ಲಿ ಈ ಬಾರಿ ಕಲ್ಪೋತ್ಸವನ್ನು ಅದ್ಧೂರಿಯಾಗಿ, ಅರ್ಥ ಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದ್ದು

 

ಎಲ್ಲಾ ವರ್ಗದ ಜನರೂ ಪಕ್ಷಾತೀತವಾಗಿ ಸಹಕರಿಸಿ, ಭಾಗವಹಿಸುವಂತೆ ಅಧ್ಯಕ್ಷ ವಹಿಸಿದ ಶಾಸಕ ಕೆ. ಷಡಕ್ಷರಿ ಯವರ ಪತ್ರಿಕಾಗೋಷ್ಠಿ.

 

Tiptur: ನಗರದ ಆಡಳಿತ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.

 

 

ಅಧ್ಯಕ್ಷತೆ ವಹಿಸಿದ ಶಾಸಕ ಕೆ. ಷಡಕ್ಷರಿ ಕರೆದಿದ್ದ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಗರೀಕರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ ನವಂಬರ್ 19, 20 ಮತ್ತು 21 ರಂದು ನಡೆಯುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಸಂಪೂರ್ಣ ಭಾಗಿಯಾಗುವುದಾಗಿ ತಿಳಿಸಿದರು.

ಕಲ್ಪತರು ನಾಡೆಂದೇ ಹೆಸರಾಗಿರುವ ತಿಪಟೂರಿನಲ್ಲಿ ಈ ಹಿಂದೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ರಂಗಭೂಮಿ, ನೃತ್ಯ, ಕಲೆಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿತ್ತು. ಎರಡು ಮೂರು ದಶಕಗಳಿಂದ ಅದು ಮಂದಗತಿಯಲ್ಲಿ ಸಾಗುತ್ತಾ, ಕ್ರಮೇಣ ಮರೆಯಾಗುತ್ತಿದೆ ಅನಿಸುತ್ತಿದೆ ಎಂದು ಕಲ್ಪತರು ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಚಟುವಟಿಕೆ ನೆನೆದರು.

ಪುನಃ ನಮ್ಮೂರು ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗುವ ಮೂಲಕ ಪುನಶ್ಚೇತನಗೊಳ್ಳಬೇಕು. ಕಲ್ಪೋತ್ಸವ ನಮ್ಮೂರ ಹಬ್ಬವಾಗುವ ಮೂಲಕ ಎಲ್ಲಾ ವರ್ಗದ ಜನರೂ ಒಂದೆಡೆ ಬೆರೆತು, ಕಲೆತು, ನಲಿಯುವ ಮೂಲಕ ಸೌಹಾರ್ಧತೆಯ ವಾತಾವರಣ ಉಂಟಾಗಬೇಕು. ನಶಿಸಿ ಹೋಗುತ್ತಿರುವ ಗ್ರಾಮೀಣ ಜಾನಪದ ಕಲೆಗಳ ಪೋಷಣೆ ಮತ್ತು ಪೋಷಣೆಯ ಅಗತ್ಯ ಹೆಚ್ಚಬೇಕು ಎಂದರು.

ಮೂರು ದಿನಗಳ ಕಾರ್ಯಕ್ರಮದಲ್ಲಿ ಬೆಳಗಿನಿಂದ ಸಂಜೆಯವರಿಗೆ ಶಾಲಾ ಮಕ್ಕಳಿಗೆ, ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ, ನೌಕರರಿಗೆ ನಾನಾ ಸ್ಪರ್ಧೆಗಳು. ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಇದರ ಜೊತೆಗೆ ಎರಡು ದಿನ ನಮ್ಮೂರ ಆಸಕ್ತ ಜನರಿಗೆ ಹೆಲಿಕ್ಯಾಪ್ಟರ್ ರೈಡ್ ವ್ಯವಸ್ಥೆ ಮಾಡಿದ್ದೇವೆ. ಎಂದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಡಾ. ಜಿ ಎಸ್ ಶ್ರೀಧರ್ ಮಾತನಾಡಿ ಈ ಬಾರಿ ಕಲ್ಪೋತ್ಸವದಲ್ಲಿ ನೀಡಲಾಗುವ ಕಲ್ಪತರು ರತ್ನ ಪ್ರಶಸ್ತಿಗೆ ಚಲನಚಿತ್ರ ಹಿರಿಯ ನಟಿ ಉಮಾಶ್ರೀ ಅವರಿಗೆ ನೀಡಲಾಗುತ್ತಿದೆ. ಪ್ರತಿ ನಿತ್ಯ ಸಂಜೆ ಖ್ಯಾತ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಗೆ ತೆಂಗು ಮತ್ತು ಕೃಷಿ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸಿದೆ. ಮಹಿಳೆಯರ ಬೈಕ್ ರ್ಯಾಲಿ, ಪಂಜಿನ ಮೆರವಣಿಗೆ, ಸಾಕು ಪ್ರಾಣಿಗಳ ಪ್ರದರ್ಶನ ಈ ಬಾರಿ ವಿಶೇಷ ಎಂದ ಅವರು ಅಕ್ಟೋಬರ್‌ 23 ರಂದು ಕಲ್ಪೋತ್ಸವ ಲೊಗೋ ಬಿಡುಗಡೆ ಮಾಡಲಾಗುವುದು ಎಂದರು.

ಕಾರ್ಯದರ್ಶಿ ತಿಪಟೂರು ಕೃಷ್ಣ ಮಾತನಾಡಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಮತ್ತು ಎಲ್ಲರೂ ಭಾಗಿಯಾಗಲು ಸ್ವಾಗತ ಸಮಿತಿ ಜೊತೆಗೆ ನಾನಾ ಉಪ ಸಮಿತಿಗಳನ್ನು ರಚಿಸಲಾಗಿದ್ದು ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಆಸಕ್ತ ನಾಗರೀಕರು ಹಾಗೂ ಸರ್ಕಾರಿ ನೌಕರರು ಸಮಿತಿಯಲ್ಲಿರುತ್ತಾರೆ. ಸಭೆಗಳನ್ನು ಕರೆದು ಕಾರ್ಯಕ್ರಮಗಳು ನಿರ್ವಿಘ್ನವಾಗಿ ನಡೆಯುವಂತೆ ಸಮಿತಿಗೆ ಸೂಚಿಸಲಾಗುತ್ತಿದೆ ಎಂದರು. ಈ ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ತಾಲೂಕು ದಂಡಾಧಿಕಾರಿ ಮೋಹನ್ ಕುಮಾರ್, ಹಾಗೂ ಹಲವು ಸರ್ಕಾರಿ ಅಧಿಕಾರಿಗಳು, ಇತರೆ ಸಂಘ ಸಂಸ್ಥೆಯ ಮತ್ತಿದರು ಉಪಸ್ಥಿತರಿದ್ದರು.

ವರದಿ: ಮಂಜುನಾಥ್ ಡಿ, ತಿಪಟೂರು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Leave a Reply

Your email address will not be published. Required fields are marked *