Janataa24 NEWS DESK
Ayudha Pooje: KSRTC ಬಸ್ ಪೂಜೆಗೆ 150₹ ಸಾಕು ಎಂದ ಸರ್ಕಾರ.
KSRTC ಚಾಲಕರ ಮತ್ತು ನಿರ್ವಾಹಕರು ಎಲ್ಲರೂ ತಮ್ಮ ವಾಹನಗಳಿಗೆ ಆಯುಧ ಪೂಜೆಯಂದು ಪೂಜೆ ಸಲ್ಲಿಸುತ್ತಾರೆ. ಸಾರಿಗೆ ಇಲಾಖೆಯು ಕೆಎಸ್‌ಆರ್‌ಟಿಸಿ ಬಸ್ ಗಳ ಪೂಜೆಗೆೆಂದು ಬರೀ 150 ರೂಪಾಯಿ ಹಣವನ್ನು ನೀಡಿದೆ. ಆಯುಧ ಪೂಜೆಯ ದಿನದಂದು ಒಂದು ಮಾರು ಹೂವಿನ ಬೆಲೆ ನೂರರಿಂದ 150 ರೂ ಇರುತ್ತದೆ ಎಂದ ಸಾರಿಗೆ ಇಲಾಖೆಯ ಸಿಬ್ಬಂದಿಗಳು, ಬಸ್ ಪೂಜೆಗೆ ಹಣ ನೀಡಲಾಗದಷ್ಟು ಮಟ್ಟಿಗೆ ಸಾರಿಗೆ ಇಲಾಖೆ ಬಡವಾಗಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.
ರಾಜ್ಯದಲ್ಲಿ ಆಯುಧ ಪೂಜೆ ಹತ್ತಿರ ಬಂದಿದೆ. ಎಲ್ಲರೂ ತಮ್ಮ ಆಯುಧಗಳು, ವಾಹನಗಳಿಗೆ ಆಯುಧ ಪೂಜೆಯ ದಿನ ಪೂಜೆ ನೆರವೇರಿಸುತ್ತಾರೆ. ರಾಜ್ಯದಲ್ಲಿರುವ ಸಾರಿಗೆ ಇಲಾಖೆಯು ಕೆಎಸ್‌ಆರ್‌ಟಿಸಿ ಬಸ್ ಗಳ ಪೂಜೆಗೆ ಡ್ರೈವರ್, ಕಂಡಕ್ಟರ್ ಗಳಿಗೆ ಪ್ರತಿ ವರ್ಷ ಆಯುಧ ಪೂಜೆಯಂದು ಬಸ್ ಗಳ ಪೂಜೆಗಾಗಿ ಹಣ ನೀಡುತ್ತೆ. ಆದರೇ, ಈ ವರ್ಷವೂ ಬಸ್ ಗಳ ಪೂಜೆಗಾಗಿ ಜುಜುಬಿ ಹಣ ನೀಡಿದೆ. ಸಾರಿಗೆ ಇಲಾಖೆಯು ನೀಡಿರುವ ಹಣದಲ್ಲಿ ಬಸ್ ಗಳ ಪೂಜೆ ಮಾಡಲು ಸಾಧ್ಯವಿಲ್ಲ ಎಂಬುದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಇಲಾಖೆಯ ಬಸ್ ಚಾಲಕರು, ನಿರ್ವಾಹಕರ ನೋವು. ಈ ಬಗ್ಗೆ ಆಯುಧ ಪೂಜೆಯಂದು ಕೆಎಸ್‌ಆರ್‌ಟಿಸಿ ಬಸ್ ಪೂಜೆಗಾಗಿ ಸರ್ಕಾರವು ಪ್ರತಿ ಬಸ್‌ಗೆ 150 ರೂಪಾಯಿ ನೀಡಿದೆ.
ಈ 150 ರೂಪಾಯಿ ಹಣದಲ್ಲಿ ಬಸ್‌ಗೆ ಹೂವಿನ ಹಾರ ಹಾಕಿ, ಪೂಜೆ ಮಾಡುವುದು ಹೇಗೆ ಎಂಬ ಪ್ರಶ್ನೆ ಬಸ್ ಚಾಲಕರು ಮತ್ತು ನಿರ್ವಾಹಕರದ್ದು. ಒಂದು ಮಾರು ಸೇವಂತಿಗೆ ಹೂವಿನ ರೇಟ್ 150 ರೂಪಾಯಿ ದಾಟಿರುತ್ತೆ. ಆಯುಧ ಪೂಜೆ ಹಬ್ಬದ ದಿನ ಒಂದು ಮಾರು ಸೇವಂತಿಗೆ ಹೂವಿನ ರೇಟ್ 200 ರೂಪಾಯಿಯಿಂದ 300 ರೂಪಾಯಿ ಇರುತ್ತೆ. ಇಂಥ ಸ್ಥಿತಿಯಲ್ಲಿ ಬರೀ 150 ರೂಪಾಯಿಯಲ್ಲಿ ಒಂದು ಬಸ್ ಪೂಜೆಯನ್ನು ಹೇಗೆ ಮಾಡೋದು ಎಂಬ ಪ್ರಶ್ನೆ ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರದ್ದಾಗಿದೆ.
ಆಯುಧ ಪೂಜೆಗೆ ಹಣ ನೀಡದೇ ಇರುವಷ್ಟು ಸಾರಿಗೆ ಇಲಾಖೆ ಬಡವಾಗಿದೆ. ಸಾರಿಗೆ ಸಚಿವರನ್ನ ನಾಲ್ಕು ಸಾರಿಗೆ ನಿಗಮಗಳ ನೌಕರರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
ವಿಭಾಗೀಯ ಕಾರ್ಯಾಗಾರಕ್ಕೆ ಸಾರಿಗೆ ಇಲಾಖೆಯು 2000 ರೂ ಬಿಡುಗಡೆ ಮಾಡಿದೆ. ಪ್ರಾದೇಶಿಕ ಕಾರ್ಯಾಗಾರಕ್ಕೆ 4000 ರೂಪಾಯಿ ಬಿಡುಗಡೆ ಮಾಡಿದೆ. ದುಬಾರಿ ದುನಿಯಾದಲ್ಲಿ ಇಷ್ಟು ಕಂಜೂಸು ಯಾಕೆ ಅಂತ ಪ್ರಶ್ನೆ ಸಾರಿಗೆ ಇಲಾಖೆಯ ನೌಕರರದ್ದಾಗಿದೆ. ಶಕ್ತಿ ಯೋಜನೆ ಬಂದ ಮೇಲೆ ಸಾರಿಗೆ ನಿಗಮ ಸಂಸ್ಥೆಗಳಿಗೆ ಸಾಕಷ್ಟು ಆದಾಯ ಬರುತ್ತಿದೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಹೆಚ್ಚಿನ ಜನರು ಓಡಾಟ ಮಾಡ್ತಿದ್ದಾರೆ. ಆದರೂ 150 ರೂಪಾಯಿಯನ್ನು ಆಯುಧ ಪೂಜೆ ಮತ್ತು ದಸರಾ ಹಬ್ಬಕ್ಕೆ ಹಣ ಬಿಡುಗಡೆ ಮಾಡಿದೆ. ಸಿಬ್ಬಂದಿನೇ ತಮ್ಮ ಕೈಯಿಂದ ಹಣ ಹಾಕಿ ಆಯುಧ ಪೂಜೆ ಹಬ್ಬ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.