SIIMA 2025: ಸೈಮಾ ನಲ್ಲಿ ಮತ್ತೆ ಕನ್ನಡಿಗರಿಗೆ ಅವಮಾನ ವೇದಿಕೆಯ ಮೇಲೆ ಸಿಡಿದೆದ್ದ ನಟ ದುನಿಯಾ ವಿಜಯ್

Janataa24 NEWS DESK 

SIIMA 2025: ಸೈಮಾ ನಲ್ಲಿ ಮತ್ತೆ ಕನ್ನಡಿಗರಿಗೆ ಅವಮಾನ ವೇದಿಕೆಯ ಮೇಲೆ ಸಿಡಿದೆದ್ದ ನಟ ದುನಿಯಾ ವಿಜಯ್.

 

SIIMA 2025: Actor Duniya Vijay, who insulted Kannadigas again on stage at SIIMA

 

ಪ್ರತಿಷ್ಠಿತ SIIMA-2025 ಅವಾರ್ಡ್​ ಕಾರ್ಯಕ್ರಮದಲ್ಲಿ ಕನ್ನಡದ ನಟರಿಗೆ ಅವಮಾನ ಮಾಡಿದ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ದುನಿಯಾ ವಿಜಯ್ ವೇದಿಕೆಯಲ್ಲೇ ಕೋಪಗೊಂಡು, ಆಯೋಜಕರಿಗೆ ಖಡಕ್ ಸಂದೇಶ ಸಾರಿದ್ದಾರೆ.

SIIMA AWARDS 2025

ದುಬೈ ಸೈಮಾ ಅವಾರ್ಡ್-ಕಾರ್ಯಕ್ರಮ ನಿನ್ನೆ ರಾತ್ರಿ ನಡೆಯಿತು. ಈ ವೇಳೆ ಕನ್ನಡದ ನಟರನ್ನು ಕಡೆಗಣಿಸಲಾಗಿದೆ ಅನ್ನೋದು ದುನಿಯಾ ವಿಜಯ್ ಆರೋಪ. ಯಾರೂ ಇಲ್ಲದಿದ್ದಾಗ, ಕಾರ್ಯಕ್ರಮ ಮುಗಿಯುವ ಹಂತದಲ್ಲಿ ಸ್ಟೇಜ್​​ಗೆ ಕರೆದು ಕನ್ನಡಿಗರಿಗೆ ಅವಾರ್ಡ್ಸ್ ಕೊಡೋದು ಎಷ್ಟು ಸರಿ?

 

ಕನ್ನಡ ಮೇಲಿದೆ ಅದನ್ನ ಕೆಳಗಿಳಿಸೋ ಪ್ರಯತ್ನ ಮಾಡಬೇಡಿ. ಮುಂದಿನ ಕಾರ್ಯಕ್ರಮದಲ್ಲಿ ಈ ರೀತಿ ಮಾಡಬೇಡಿ. ಹೀಗಾದ್ರೆ ಇನ್ಮುಂದೆ ನಾವ್ಯಾರೂ ಬರೋದಿಲ್ಲ. ಪ್ರತಿ ಬಾರಿ ಕನ್ನಡವನ್ನ ಕೆಳಗಿಳಿಸಿ ಬೇರೆ ಭಾಷೆಯ ಯಾವ ಸ್ಟಾರ್ ಇಲ್ಲದಿದ್ದಾಗ ನಮ್ಮನ್ನ ವೇದಿಕೆಗೆ ಕರೆಯೋದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.

 

ದುನಿಯಾ ವಿಜಯ್ (Duniya Vijay) ಕನ್ನಡ ಪರ ದನಿಗೆ ದುಬೈ ಕನ್ನಡಿಗರಿಂದ ಬಹುಪರಾಕ್ ಹೇಳಿದ್ದಾರೆ. ವಿಜಯ್ ನಂತರ ಕಿಚ್ಚ ಸುದೀಪ್​​ಗೆ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಅಲ್ಲಿ ಯಾರೂ ಇರಲಿಲ್ಲ. ಸುದೀಪ್ ಪರವಾಗಿ‌ ವಿ.ನಾಗೇಂದ್ರ ಪ್ರಸಾದ್ ಸ್ವೀಕರಿಸಿದಾಗಲೂ ಯಾರೂ ಇರಲಿಲ್ಲ. ದುನಿಯಾ ವಿಜಯ್ ಅವರಿಗೆ ‘ಭೀಮ’ ಸಿನಿಮಾಕ್ಕಾಗಿ ಅತ್ಯುತ್ತಮ ನಿರ್ದೇಶಕ ಕ್ರಿಟಿಕ್ಸ್ ಅವಾರ್ಡ್ ಘೋಷಣೆಯಾಯ್ತು. ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಹೋದ ದುನಿಯಾ ವಿಜಯ್ ಅಲ್ಲಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

 

ಸೈಮಾ ಕಾರ್ಯಕ್ರಮ ಸಾಮಾನ್ಯವಾಗಿ ಎರಡು ದಿನ ನಡೆಯುತ್ತದೆ. ಪ್ರತಿದಿನ ಎರಡು ಭಾಷೆಯ ಚಿತ್ರರಂಗದವರಿಗೆ ಪ್ರಶಸ್ತಿ ನೀಡಲಾಗುತ್ತದೆ. ನಿನ್ನೆಯ ದಿನ ಕನ್ನಡ ಮತ್ತು ತೆಲುಗು ನಟ, ನಟಿಯರಿಗೆ ಪ್ರಶಸ್ತಿ ನೀಡಲಾಗುತ್ತದೆ. ನಟ ಸುದೀಪ್​ಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿತ್ತು. ಆದರೆ ಆಯೋಜಕರು ತೆಲುಗು ಸಿನಿಮಾದವರಿಗೆ ಮೊದಲ ಆದ್ಯತೆ ನೀಡಿದರು. ಮೊದಲಿಗೆ ತೆಲುಗು ಸಿನಿಮಾ ನಟರಿಗೆ ಪ್ರಶಸ್ತಿ ನೀಡಿದರು. ಪ್ರಶಸ್ತಿ ವಿತರಣೆ ಮುಗಿಯವ ವೇಳೆಗೆ ಸಾಕಷ್ಟ ಸಮಯ ಮೀರಿ ಹೋಗಿತ್ತು. ಪರಿಣಾಮ ಎಲ್ಲಾ ಸೆಲೆಬ್ರಿಟಿಗಳು ಅಲ್ಲಿಂದ ನಿರ್ಗಮಿಸಿದ್ದರು. ವೇದಿಕೆಯ ಮುಂಭಾಗ ಖಾಲಿ ಇದ್ದಾಗ, ಕನ್ನಡದ ನಟರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿರೋದೇ ದುನಿಯಾ ವಿಜಯ್ ಕೋಪಕ್ಕೆ ಕಾರಣವಾಗಿದೆ.

 

ಇದು ಹೊಸದಲ್ಲ..!

ಕಳೆದ ಬಾರಿ ಸೈಮಾ ಪ್ರಶಸ್ತಿ ಸಮಾರಂಭ ನಡೆದಾಗಲೂ ಕನ್ನಡದ ನಟ, ನಟಿಯರಿಗೆ ಅವಮಾನ ಆಗಿತ್ತು. ಸೂಕ್ತ ವಸತಿ, ಪ್ರಯಾಣ ಸೌಲಭ್ಯಗಳನ್ನು ನೀಡಲಾಗಿರಲಿಲ್ಲ. ಈ ಬಾರಿ ಎಲ್ಲವೂ ಸರಿ ಹೋಗಲಿದೆ ಎಂಬ ನಿರೀಕ್ಷೆ ಇತ್ತು.  ಅದೀಗ ಹುಸಿಯಾಗಿದೆ.

ಈ ಎಲ್ಲಾ ಅವಮಾನಗಳ ಅರಿವಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಹಿಂದೆಯ ಸೈಮಾ ಅವಾರ್ಡ್ ಕಾರ್ಯಕ್ರಮದ ವಿರುದ್ಧ ಸಿಡಿದೆದ್ದಿದ್ದರು ಮತ್ತು ನಾನು ಯಾವುದೇ ಇಂತಹ ಕನ್ನಡಿಗರಿಗೆ ಅಗೌರವ ತೋರುವ ಅವಾರ್ಡ್ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಎಂದು ನೇರವಾಗಿ ಹೇಳಿದ್ದರು ಇಂದು ಅದೇ ಮಾತನ್ನ ನಟ ದುನಿಯಾ ವಿಜಯ್ ಸೈಮಾ ವೇದಿಕೆಯಲ್ಲಿ ತಮ್ಮ  ನೋವನ್ನು ಹೊರಹಾಕಿದ್ದಾರೆ.

 

ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಆಯಾ ಭಾಷೆಯ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡುವ ಸಮಾರಂಭ ಇದಾಗಿದೆ.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

 

Leave a Reply

Your email address will not be published. Required fields are marked *