Gubbi: ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ–ಎಸ್ ಆರ್ ಶ್ರೀನಿವಾಸ್.

Janataa24 NEWS DESK 

 

 

Gubbi: ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ–ಎಸ್ ಆರ್ ಶ್ರೀನಿವಾಸ್.


ಗುಬ್ಬಿ : ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡಿ ತಾಲೂಕಿಗೆ ಉತ್ತಮ ಫಲಿತಾಂಶ ನೀಡಿ ಎಂದು ಶಿಕ್ಷಕರಿಗೆ ಶಾಸಕ ಎಸ್ ಆರ್ ಶ್ರೀನಿವಾಸ್ ಕರೆ ನೀಡಿದರು.

 

ಪಟ್ಟಣದ ಎ,ವಿ,ಕೆ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಸಹಯೋಗದೊಂದಿಗೆ ನಡೆದ ಶಿಕ್ಷಕರ ದಿನಾಚರಣೆಯನ್ನುದೇಶಿಸಿ ಮಾತನಾಡಿದ ಅವರು ಭಾರತದ ಚರಿತ್ರೆಯ ಪುಟದಲ್ಲಿ ಮಹಿಳಾ ಶಿಕ್ಷಣದ ಪರ ದನಿ ಎತ್ತಿದ ಮೊದಲಿಗರಾಗಿ ಸಾವಿತ್ರಿಬಾಯಿ ಹೆಸರು ಗಳಿಸಿದ್ದಾರೆ. ಆಗ ಹಿಂದೂ ಸ್ತ್ರೀಯೊಬ್ಬಳು ವಿದ್ಯೆ ಕಲಿತು, ಶಿಕ್ಷಕಿಯಾಗಿ ಸಮಾಜ ಹಾಗೂ ಧರ್ಮವನ್ನು ಹಾಳು ಮಾಡುತ್ತಿದ್ದಾಳೆ ಎಂಬ ಆಪಾದನೆ ಹೊತ್ತುಕೊಂಡು ಎಷ್ಟೋ ಅಸಹಾಯಕ ಹೆಣ್ಣುಮಕ್ಕಳ ಬಾಳಿನಲ್ಲಿ ಜ್ಞಾನದ ದೀಪ ಬೆಳಗಿಸಿದ ಅಸಾಮಾನ್ಯ ಮಹಿಳೆ.

 

ಅದೇ ರೀತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಹ ತಮ್ಮ ಹುಟ್ಟಿದ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಗುತ್ತಿದೆ ತಾಲೋಕಿಗೆ ಬಿ,ಇ,ಓ ನಟರಾಜ್ ಬಂದ ಮೇಲೆ ಎಸ್ ಎಸ್ ಎಲ್ ಸಿ ಫಲಿತಾಂಶವೂ ಜಿಲ್ಲೆಯಲ್ಲಿಯೇ ಎರಡನೇ ಸ್ಥಾನದಲ್ಲಿದ್ದದ್ದು ಏಕಾಏಕಿ ಐದನೇ ಸ್ಥಾನಕ್ಕೆ ಕುಸಿದಿದೆ ಎಂದರೆ ಯಾವ ಕಾರಣಕ್ಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು

 

 

ಶಿಕ್ಷಣ ಕ್ಷೇತ್ರಕ್ಕೆ ವಿದೇಶದಲ್ಲಿ ಹಾಗೂ ಪಕ್ಕದ ತಮಿಳುನಾಡಿನಲ್ಲಿ ವಿಶೇಷ ಸ್ಥಾನಮಾನ ನೀಡಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಕೆಲಸ ಮಾಡುತ್ತಿದ್ದು, ಶಿಕ್ಷಕರ ನಿವೃತ್ತಿ ಅಂಚಿನಲ್ಲಿರುವ ಮಾಹಿತಿಯನ್ನು ಆರು ತಿಂಗಳು ಮುನ್ನವೇ ಮಾಹಿತಿ ಪಡೆದು ಸಮಯಕ್ಕೆ ಸರಿಯಾಗಿ ಶಿಕ್ಷಕರ ನೇಮಕ ಮಾಡುತ್ತಿದ್ದು, ಇದರಿಂದ ಶಿಕ್ಷಣದ ಗುಣಮಟ್ಟ ಉತ್ತಮವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಡುವಲ್ಲಿ ಮೃದು ಧೋರಣೆ ಅನುಸರಿಸುತ್ತಿರುವ ಕಾರಣ ಶಿಕ್ಷಣದಲ್ಲಿ ಹಿಂದೆ ಬೀಳಲು ಸಾಧ್ಯ.

 

 

ಇದುವರೆಗೂ ರಾಜ್ಯದಲ್ಲಿ 60 ರಿಂದ 70 ಸಾವಿರ ಅತಿಥಿ ಶಿಕ್ಷಕರ ಮೂಲಕ ವಿದ್ಯೆ ಕೊಡಿಸಿತ್ತಿದ್ದೇವೆ. ಯಾವ ಕಾರಣಕ್ಕೆ ಎಸ್ ಎಸ್ ಎಲ್ ಸಿ ಫಲಿತಾಂಶ ಕುಸಿಯಲು ಸಾಧ್ಯ ಎಂಬುದನ್ನು ಅವಲೋಕಿಸಿ ಮೊದಲಿನಿಂದ ಫಲಿತಾಂಶವನ್ನು ತರುವ ಪ್ರಯತ್ನ ಆಗಬೇಕು. ಫಲಿತಾಂಶ ಕೇವಲ ಶಾಲೆಗೆ, ಶಿಕ್ಷಕರಿಗೆ, ತಾಲೂಕಿಗೆ ಅಲ್ಲದೆ ನಮ್ಮಗಳಿಗೂ ತಲೆ ತಗ್ಗಿಸುವಂತಾಗಿದೆ. ಹಾಗಾಗಿ ಈ ಬಾರಿ ಉತ್ತಮ ಫಲಿತಾಂಶವನ್ನು ತಂದು ಕೊಡುವಂತೆ ಶಿಕ್ಷಕರಿಗೆ ಕರೆ ನೀಡಿದರು.

 

ಹಾಸ್ಯ ಕಲಾವಿದೆ ಸುಧಾ ಬರಗೂರು ಮಾತನಾಡಿ ಶಿಕ್ಷಕರಿಗೆ ತಮ್ಮ ವೃತ್ತಿಯ ಬಗ್ಗೆ ಅಕ್ಕ ಪಕ್ಕದವರ ಬಳಿ ಹೇಳಿಕೊಳ್ಳಲು ಹಂಚಿಕ್ಕೊಳ್ಳುತ್ತಿದ್ದು, ಇದರಿಂದ ಹೊರಗೆ ಬಂದು ತಾವು ಮಾಡುವ ವೃತ್ತಿಯ ಬಗ್ಗೆ ಹೆಮ್ಮೆ ಇರಬೇಕು. ಸರ್ಕಾರಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಲ್ಲಿ ಇರುವ ಮುಗ್ಧತೆ ಬೇರೆ ಶಾಲೆಗಳ ಮಕ್ಕಳಲ್ಲಿ ಇರುವುದಿಲ್ಲ, ನಾನು ಮಹಿಳೆಯಾಗಿ ವೃತ್ತಿ ಬಗ್ಗೆ ಹಂಚಿಕೊಳ್ಳದೇ ಇದ್ದ ಕಾರಣ ಕಳೆದ 25 ವರ್ಷಗಳಿಂದ ಹಾಸ್ಯ ಭಾಷಣವನ್ನು ಮಾಡುತ್ತಾ ಬಂದಿದ್ದೇನೆ.

 

 

ಎಲ್ಲಾ ವೃತ್ತಿಗಳಿಗಿಂತ ಶಿಕ್ಷಣ ವೃತ್ತಿಯು ಹೆಚ್ಚು ಮನ್ನಣೆ ಪಡೆಯಲು ಸಾಧ್ಯ, ಯಾವುದೇ ವ್ಯಕ್ತಿಯು ಉನ್ನತ ಹುದ್ದೆಗಳಲ್ಲಿ ಸೇವೆ ಮಾಡುತ್ತಿದ್ದಾನೆ ಎಂದರೆ ಅದು ಶಿಕ್ಷಣದಿಂದ ಎಂಬುದನ್ನು ಹೆಮ್ಮೆ ಪಡಬೇಕು. ತಮ್ಮ ವಿದ್ಯಾರ್ಥಿಗಳ ಮೇಲೆ ಗೌರವ ವಿಲ್ಲದೆ ತಾತ್ಸಾರ ಮನೋಭಾವ ಸಲ್ಲಿಸಿದರೆ ಅವರು ಎಂದಿಗೂ ಉದ್ಧಾರವಾಗುವುದಿಲ್ಲ, ಯಾರೇ ಏನೇ ಮಾಡಿದರೂ ತಾವು ಮಾಡುವ ಕೆಲಸದ ಮೇಲೆ ವಿಶ್ವಾಸ ನಂಬಿಕೆ ಇರಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.

 

ಇದೇ ವೇಳೆ ವಿವಿಧ ಶಿಕ್ಷಕರಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ ನಡೆಸಲಾಯಿತು.

 

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಆರತಿ ಬಿ. ಇ,ಓ ಶಿವಪ್ರಕಾಶ್, ಪ.ಪಂ ಅಧ್ಯಕ್ಷೆ ಆಯಿಷಾ ತಾಸೀನ್ , ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್, ಕಸಾಪ ಅಧ್ಯಕ್ಷ ಯತೀಶ್, ಬಿಆರ್ ಸಿ ಮಧುಸೂಧನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್, ಪ.ಪಂ ಸದಸ್ಯರು, ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.

 

 

ವರದಿ: ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Leave a Reply

Your email address will not be published. Required fields are marked *