Janataa24 NEWS DESK
Turuvekere: ಸಹಕಾರ ಸಂಘಗಳಿಂದ ಮಹಿಳಾ ಸಬಲೀಕರಣ– ಶ್ರೀಮತಿ ಆನಂದ ಮದನ್ ಕುಮಾರ್.
ತುರುವೇಕೆರೆ: ಸಹಕಾರ ಸಂಘಗಳಿಂದ ಮಹಿಳಾ ಸಬಲೀಕರಣ ಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಮಾಯಸಂದ್ರ ಮಹಿಳಾ ವಿವಿದೊದ್ದೇಶ ಸಹಕಾರ ಸಂಘ (ರಿ) ಅಧ್ಯಕ್ಷರಾದ ಶ್ರೀಮತಿ ಆನಂದ ಮದನ್ ಕುಮಾರ್ ಹೇಳಿದರು.
ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು, ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಸಹಕಾರ ಸಂಘಗಳಿಂದ ಮಹಿಳಾ ಸಬಲೀಕರಣದ ಜೊತೆಗೆ ಆರ್ಥಿಕವಾಗಿ ಸಬಲರಾಗುವುದು ಸಹ ಸಂತಸದ ವಿಚಾರವಾಗಿದೆ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರ ಸಂಘ, ಸ್ತ್ರೀಶಕ್ತಿ ಸಂಘಗಳು ನೆರವಾಗುತ್ತಿವೆ ಎಂದರು.
ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಲೀಲಾವತಿ ಗಿಡ್ಡಯ್ಯನವರು ಮಾತನಾಡಿ, ಸಹಕಾರ ಕ್ಷೇತ್ರವು ಒಂದಿಲ್ಲೊಂದು ರೀತಿಯಲ್ಲಿ ಜನಸಾಮಾನ್ಯರನ್ನು ಕೈ ಹಿಡಿದು ಮೇಲೆ ಎತ್ತುತ್ತಿದೆ. ಸಹಕಾರ ಎಂಬ ಶಬ್ದವೇ ಅಭಯವಾಗಿದ್ದು. ಸಹಕಾರ ಸಂಘದ ಮತ್ತು ಸ್ತ್ರೀ ಶಕ್ತಿ ಸಂಘಗಳಿಂದ ಮಹಿಳಾ ಸಬಲೀಕರಣ ಅತಿ ಹೆಚ್ಚು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪ್ರಸ್ತುತ ಸಾಲಿನ ವಾರ್ಷಿಕ ವರದಿ, ಆಡಿಟ್ ವರದಿ, ಆರ್ಥಿಕ ತಖ್ತೆ ಸೇರಿದಂತೆ 2025 26 ನೇ ಸಾಲಿನ ಅಂದಾಜು ಆಯಾ ವ್ಯಯ ಮಂಜೂರು ವಿಚಾರ ಲೆಕ್ಕಪರಿಶೋಧನೆಗೆ ಲೆಕ್ಕ ಪರಿಶೋಧಕರ ಆಯ್ಕೆ ಮಾಡುವ ವಿಚಾರವನ್ನು ಪ್ರಸ್ತಾಪಿಸಿ ಸಭೆಯನ್ನು ಯಶಸ್ವಿಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ, ಶ್ರೀಮತಿ ಆಶಾಜಿನಚಂದು. ಗೀತಾಂಜಲಿ ವಿಫಲ್ ಜೈನ್. ಶೈಲಾಪ್ರಸಾದ್ ಜೈನ್. ವಿಜಯ ವಸಂತರಾಜ್ ಜೈನ್. ಲಕ್ಷ್ಮಮ್ಮ ನರಸಿಂಹಯ್ಯ. ಸಹನಾ ಸತ್ಯಾನಂದ ರಾವ್. ಅಂಜಲಿ ಭಾನುಪ್ರಕಾಶ್. ಪೂರ್ಣಿಮಾ ಮಹಾವೀರ್. ಶ್ರೀದೇವಿ ಉಪಾಧ್ಯ ಅಭಿನಂದನ್. ಮೀನಾ ನಾಗೇಂದ್ರ. ಕೋಮಲ ಸಂತೋಷ್ ಸೇರಿದಂತೆ ಸಂಘದ ಮುಂತಾದ ಸದಸ್ಯರು ಗ್ರಾಮಸ್ಥರು ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.