Hosadurga: ಕೊ*ಲೆ ಪ್ರಕರಣ –24 ಗಂಟೆಯೊಳಗೆ 7 ಆರೋಪಿಗಳು ಬಂದನ.

Janataa24 NEWS DESK

Hosadurga: ಕೊ*ಲೆ ಪ್ರಕರಣ –24 ಗಂಟೆಯೊಳಗೆ 7 ಆರೋಪಿಗಳು ಬಂದನ.

 

hosadurga ಕೊಲೆ ಪ್ರಕರಣ –24 ಗಂಟೆಯೊಳಗೆ 7 ಆರೋಪಿಗಳು ಬಂದನ.

ಹೊಸದುರ್ಗ ತಾಲೂಕಿನ ಹುಣುವಿನಡು ಗ್ರಾಮದಲ್ಲಿ ಮನೆಯ ಸ್ನಾನದ ಗೃಹದಲ್ಲಿಯೇ ರಾಜೇಂದ್ರ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ 7 ಮಂದಿ ಆರೋಪಿಗಳನ್ನು 24 ಗಂಟೆಯಲ್ಲಿಯೇ ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

 

 

1) ಸಾಗರ್‌. ಅರ್, ದಾಸೀಕಟ್ಟೆ ಗ್ರಾಮ ಹೊಳಲ್ಕೆರೆ ತಾಲ್ಲೂಕ್‌ ಚಿತ್ರದುರ್ಗ ಜಿಲ್ಲೆ

2)ಕಿರಣ್‌ ಕುಮಾರ್ ಆರ್, ಕಬ್ಬಳ ಗ್ರಾಮ( ಎನ್.ಜಿ.ಹಳ್ಳಿ ಹತ್ತಿರ ) ಹೊಸದುರ್ಗ ತಾಲ್ಲೂಕ್‌ ಚಿತ್ರದುರ್ಗ ಜಿಲ್ಲೆ

3) ಅಭಿಷೇಕ್, ದಾಸೀಕಟ್ಟೆ ಗ್ರಾಮ, ಹೊಳಲ್ಕೆರೆ ತಾಲ್ಲೂಕ್ ಚಿತ್ರದುರ್ಗ ಜಿಲ್ಲೆ

4)ಕೃಷ್ಣಪ್ಪ , ಹುಣವಿನೋಡು ಗ್ರಾಮ, ಹೊಸದುರ್ಗ ತಾಲ್ಲೂಕ್ 5)ಕರಿಯಪ್ಪ, ಹುಣವಿನೋಡುಗ್ರಾಮ ಹೊಸದುರ್ಗ ತಾಲ್ಲೂಕ್.

6)ಸಂಜಯ್‌, ಕಲ್ಲೇಶ್ವರ ಬಡಾವಣೆ ಹೊಸದುರ್ಗ ಟೌನ್.

7)ಯಶವಂತ ದುರ್ಗಮ್ಮನದೇವಸ್ಥಾನದ ಮುಂಭಾಗ, ಹೊಸದುರ್ಗ ಟೌನ್ ಬಂಧಿತರು ಎಂದು ಗುರುತಿಸಲಾಗಿದೆ.

ಇವರನ್ನು ವಶಕ್ಕೆ ಪಡೆದು ಅವರಿಂದ ಒಂದು ಕಾರು ಮತ್ತು ಬೈಕ್ ಅನ್ನು ವಸಪಡಿಸಿಕೊಂಡಿದ್ದಾರೆ.

 

 

Tiptur: ಘಟನೆ ಹಿನ್ನೆಲೆ.

 

ರಾಜೇಂದ್ರನು ಕಳೆದ 10 ತಿಂಗಳುಗಳ ಹಿಂದೆ ಮದುವೆಯಗಿದ್ದ ಕಿರಣಾ ಎಂಬ ಯುವತಿಯನ್ನು ಮದುವೆಯಾಗಿದ್ದ. ಇದಕ್ಕೆ ಆಕೆಯ ಸಹೋದರನಾದ ಸಾಗರ ಮತ್ತು ಕುಟುಂಬದವರ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ (ಜೂನ್. 24) ರಾಜೇಂದ್ರನ ಮನೆಯೊಳಗೆ ಏಕಾಏಕಿ ನುಗ್ಗಿ ಕಿರಾಣಳ ತಂಟೆಗೆ ಬರಬೇಡ ಎಂತ ಹೇಳಿದ್ದರೂ ಅವಳ ಅವಳ ಸುದ್ದಿಗೆ ಬರುತ್ತೀಯ ಎಂತ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಮನೆಯ ಬಾತ್ ರೂಂ ನಲ್ಲಿ ಸ್ನಾನ ಮಾಡುತ್ತಿದ್ದ ರಾಜೇಂದ್ರನಿಗೆ ಸಾಗರ ಮತ್ತು ಅತನ ಜೊತೆಯಲ್ಲಿದ್ದ ಇಬ್ಬರು ಸೇರಿಕೊಂಡು ಕಬ್ಬಿಣದ ಮುಚ್ಚುಗಳಿಂದ ರಾಜೇದ್ರನ ಮುಖಕ್ಕೆ ತಲೆಗೆ ಎದೆಗೆ ಹೊಟ್ಟಿಗೆ ಕೈ ಕಾಲುಗಳಿಗೆ ಹೊಡೆದು ಬರ್ಬರವಾಗಿ ಕೊಚ್ಚಿಕೊಲೆ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ‌ ರಾಜೇಂದ್ರನ ತಾಯಿ ಸುಜಾತಾ ಆವರು ಹೊಸದುರ್ಗ ಠಾಣೆಯಲ್ಲಿ ದೂರು ನೀಡಿದ್ದರು.

 

 

ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಎಸ್.ಪಿ. ರಂಜಿತ್ ಕುಮಾರ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಕುಮಾರಸ್ವಾಮಿ ಎಸ್ ಜೆ ಮಾರ್ಗದರ್ಶನದಲ್ಲಿ, ಶಿವಕುಮಾರ ಟಿ ಎಂ ಡಿ.ವೈ.ಎಸ್.ಪಿ ಹಿರಿಯೂರುರವರ ಉಸ್ತುವಾರಿಯಲ್ಲಿ ಪಿ.ಐ ರಮೇಶ್ ಕೆ ಟಿ. ಹೊಸದುರ್ಗರವರ ನೇತೃತ್ವದಲ್ಲಿ ಹೊಸದುರ್ಗ ಪೊಲೀಸ್ ಠಾಣೆ, ಬೀಮನಗೌಡ ಪಾಟೀಲ್ ಪಿ ಎಸ್ ಐ, ಮಹೇಶ್ ಕುಮಾರ ಪಿ ಎಸ್ ಐ, ಶ್ರೀರಾಂಪರ ಠಾಣೆಯ ಶ್ರೀಶೈಲ ಪಿ ಎಸ್ ಐ ಹಾಗೂ ಸಿಬ್ಬಂದಿಯವರು ಮತ್ತು ತಾಂತ್ರಿಕ ಸಿಬ್ಬಂದಿಯವರ ತಂಡವನ್ನು ರಚಿಸಿದ್ದರು. ಈ ಕಾರ್ಯಾಚರಣೆ

ಮಾಡಿದ ತಂಡಕ್ಕೆ ಎಸ್.ಪಿ. ರಂಜಿತ್ ಕುಮಾರ ಬಂಡಾರು ಅವರು ಶ್ಲಾಘಿಸಿರುತ್ತಾರೆ.

ವರದಿ:ಮಂಜುನಾಥ್ ಡಿ ತಿಪಟೂರು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Leave a Reply

Your email address will not be published. Required fields are marked *