Turuvekere: ಶ್ರೀ ಮುನೇಶ್ವರ ಶಿಕ್ಷಣ ಟ್ರಸ್ಟ್ ಉತ್ತಮ ಹಾಗೂ ಉನ್ನತ ಮಟ್ಟದ ಶಿಕ್ಷಣಕ್ಕೆ ಅಡಿಗಲ್ಲಾಗಿದೆ

Janataa24 NEWS DESK

Turuvekere: ಶ್ರೀ ಮುನೇಶ್ವರ ಶಿಕ್ಷಣ ಟ್ರಸ್ಟ್ ಉತ್ತಮ ಹಾಗೂ ಉನ್ನತ ಮಟ್ಟದ ಶಿಕ್ಷಣಕ್ಕೆ ಅಡಿಗಲ್ಲಾಗಿದೆ: ಪಾಲನಹಳ್ಳಿ ಸಿದ್ದರಾಜು ಸ್ವಾಮೀಜಿ.

ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚಿಮ್ಮನಹಳ್ಳಿ ಗ್ರಾಮದಲ್ಲಿ ಬಹಳ ವಿಶೇಷವಾಗಿ, ಅದ್ಭುತವಾದ, ವಿಶಿಷ್ಟವಾದ, ಕೆತ್ತನೆಯಿಂದ ನಿರ್ಮಿಸಲ್ಪಟ್ಟಿರುವ ಈ ಕ್ಷೇತ್ರ ಮುನೇಶ್ವರಸ್ವಾಮಿ ಹಾಗೂ ವಿವಿಧ ದೇವತೆಗಳ ದೇವಸ್ಥಾನಗಳು ದೇವತೆಗಳ ಹೆಸರಿಗೆ ತಕ್ಕ ಹಾಗೆ ಬೃಹತ್ ಗಾತ್ರದ ಕಲ್ಲಿನಿಂದ ವೈವಿಧ್ಯಮಯ ಕೆತ್ತನೆಯಿಂದ ಹೊಸ ದೇವಲೋಕಕ್ಕೆ ಪ್ರವೇಶ ಮಾಡಿದ್ದೇವೆ

ಅನ್ನುವ ರೀತಿ ತಲೆ ಎತ್ತಿ ನಿಂತಿರುವುದು ಈ ಬೃಹತ್ ಮಠ, ಈ ಮಠದ ಸಂಸ್ಥಾಪಕರಾದ ವೈ ಎ ಶಿವಪ್ಪನವರು ಶ್ರೀ ಮುನೇಶ್ವರ ಸ್ವಾಮಿ ಆರಾಧಕರಾಗಿದ್ದು ಇವರ ಮತ್ತೊಂದು ಕೊಡುಗೆ ತುರುವೇಕೆರೆ ತಾಲೂಕಿನ ಕರ್ನಾಟಕ ರಾಜ್ಯದ ಯಾವುದೇ ಭಾಗದಿಂದಲಾದರೂ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಉನ್ನತ ಮಟ್ಟದ ಶಿಕ್ಷಣ ನೀಡಲು ಪ್ರಿ ನರ್ಸರಿಯಿಂದ ಹತ್ತನೇ ತರಗತಿಯವರೆಗೂ ಸಿಬಿಎಸ್ಇ ಪಠ್ಯಕ್ರಮವನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಕರನ್ನು ನೇಮಿಸಿ ಶ್ರೀ ಮುನೇಶ್ವರ ಗುರುಕುಲ ವಿದ್ಯಾ ಮಂದಿರವನ್ನು ಈಗಾಗಲೇ ಸ್ಥಾಪಿಸಿ ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿದ್ಯಾಮಂದಿರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಈ ವಿದ್ಯಾಮಂದಿರ ಈಗಾಗಲೇ 10 ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿದ್ದು,ಕ್ಷೇತ್ರದ ಆವರಣದಲ್ಲಿ ಮುನಿಶ್ವರಸ್ವಾಮಿ ಮಹಾಸಂಸ್ಥಾನ ದಾಸೋಹ ಮಠ, ಮುನೀಶ್ವರ ಸ್ವಾಮಿ ಛಾರಿಟಿ ಮತ್ತು ಶೈಕ್ಷಣಿಕ ಟ್ರಸ್ಟ್, ಮುನೀಶ್ವರ ಗುರುಕುಲ ವಿದ್ಯಾಮಂದಿರ ದಶಮಾನೋತ್ಸವ ಮುನಿಶ್ರೀ ದೀಪ್ತಿ ರತ್ನ, ವಿಶೇಷ ಸಂಚಿಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ,ಅಪರ್ಣಾದೇವಿ ಪುಷ್ಕರಣೆ ಮತ್ತು ವಿದ್ಯಾರ್ಥಿ ನಿಲಯ ಶಿಲಾನ್ಯಾಸ ಸಮಾರಂಭವನ್ನು ನಡೆಸಲಾಯಿತು ಇದರ ಉದ್ಘಾಟನೆಯನ್ನು ಸೋಲೂರು ಹೋಬಳಿ,

ಮಾಗಡಿ ತಾಲೂಕು, ರಾಮನಗರ ಜಿಲ್ಲೆಯ ಪಾಲನಹಳ್ಳಿ ಶ್ರೀ ಶನೇಶ್ವರ ಸ್ವಾಮಿ ಪುಣ್ಯಕ್ಷೇತ್ರದ ಮಠಧ್ಯಕ್ಷರಾದ ಶ್ರೀ ಸಿದ್ದರಾಜು ಸ್ವಾಮಿಗಳು, ಬೆಂಗಳೂರು ಅಮೃತ ಸಿಂಚನ ಆಧ್ಯಾತ್ಮಿಕ ವಿಶ್ವವಿದ್ಯಾಲಯ ಕುಲಾಧಿಪತಿಗಳಾದ ಡಾ. ಹರೀಶ್, ಆಧ್ಯಾತ್ಮಿಕ ಚಿಂತಕರಾದ, ವಿಜಯ್ ಪದ್ಮನಾಭ, ಮೈಸೂರು ಶಂಕರ ವಿಲಾಸ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲ ಪ್ರೊ. ವಿದ್ವಾನ್ ಶ್ರೀನಿವಾಸ್ ಮೂರ್ತಿ ಇನ್ನೂ ಅನೇಕ ಗಣ್ಯರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಪಾಲನಹಳ್ಳಿ ಶ್ರೀ ಶನೇಶ್ವರ ಸ್ವಾಮಿ ಕ್ಷೇತ್ರದ ಮಠಾಧೀಶರಾದ ಶ್ರೀ ಸಿದ್ದರಾಜ ಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿದ ಅವರು ಭಾರತೀಯ ಸನಾತನ ಧರ್ಮದಲ್ಲಿ ಗುರು ಪರಂಪರೆಗೆ ತನ್ನದೇಯಾದ ವಿಶೇಷವಾಗಿ ಸ್ಥಾನ ಇದೆ.

ಆದರೆ ಅದುನಿಕ ಜಗತ್ತಿನ ಸಂಸೃತಿಗೆ ಶಿಕ್ಷಣಕ್ಕೆ ಮಾರು ಹೋಗಿ ನಮ್ಮ ಮೂಲ ನೆಲೆಯ ಬೇರು ಅಲುಗಾಡುತ್ತಿದೆ. ಬ್ರಿಟೀಷರು ಭಾರತಕ್ಕೆ ಆಗಮಿಸಿದ ವೇಳೆ ಶಿಕ್ಷಣದಿಂದಾಗಿ ಸಮಾಜದಲ್ಲಿ ಒಡೆದು ಹಾಳುವಂತ ಶಿಕ್ಷಣವನ್ನು ಕಲಿಯುವಂತಾಗಿದೆ. ನಮ್ಮ ಹಿಂದಿನ ಗುರುಕುಲದ ಶಿಕ್ಷಣದಲ್ಲಿ ಎಲ್ಲರನ್ನು ಒಟ್ಟಾಗಿ ಸೇರಿಸುವಂತಹ ಶಿಕ್ಷಣ ನೀಡುತ್ತಿದ್ದರು. ಮುಂದಿನ ಪೀಳಿಗೆಗೆ ಸಂಸ್ಕಾರಯುತ ಮೌಲ್ಯಯುತ ಶಿಕ್ಷಣವನ್ನು ನೀಡಬೇಕಿದೆ, ಮುನೇಶ್ವರ ಕ್ಷೇತ್ರದ ಸಂಸ್ಥಾಪಕರಾದ ಶಿವಪ್ಪನವರು ನಗರದಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆಯದೆ ಚುಮ್ಮನಹಳ್ಳಿ ಮುನಿಶ್ವರ ಶಿಕ್ಷಣ ಟ್ರಸ್ಟ್ ಮೂಲಕ ಗ್ರಾಮೀಣ ಭಾಗದ ಜನರಿಗೆ ಉನ್ನತ ಗುಣ ಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.

ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳನ್ನು ತೆರೆಯುತ್ತಿದ್ದು ಶಿಕ್ಷಣ ಸಂಸ್ಥೆ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಅಮೃತ ಸಿಂಚನ ಆದ್ಯಾತಿಕ ವಿಶ್ವವಿದ್ಯಾಲಯ ಕುಲಾದಿಪತಿಗಳಾದ ಡಾ.ಹರೀಶ್, ಬೆಂಗಳೂರು ಆದ್ಯಾತಿಕ ಚಿಂತಕರು ಹಾಗೂ ಮೋದಿ ವಿಚಾರ್ ಮಂಚ್ ವಿಜಯ್ ಪದ್ನನಾಭ, ಮೈಸೂರು ಶಂಕರ ವಿಲಾಸ ಸಂಸೃತ ಪಾಠ ಶಾಲೆ ಪ್ರಾಂಶುಪಾಲ ಪ್ರೋ.ವಿದ್ವಾನ್ ಶ್ರೀನಿವಾಸ ಮೂರ್ತಿ ಹಾಗೂ ತುಮಕೂರು ಮುಖ್ಯ ಲೆಕ್ಕಾದಿಕಾರಿ ಕೆ.ಸಿ.ನರಸಿಂಹಮೂರ್ತಿ ರವರನ್ನು ಮುನಿಶ್ರೀ ದೀಪ್ತಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ 65ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಮುನಿಶ್ವರ ಕ್ಷೇತ್ರ ಸಂಸ್ಥಾಪಕ ಶಿವಪ್ಪರನ್ನು ಶಾಲಾ ಸಿಬ್ಬಂದಿ ಹಾಗೂ ವಿವಿದ ಗಣ್ಯರು ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದ ನಂತರ ತುಮಕೂರಿನ ಮಾರುತಿ ಕಲಾ ಸಂಘದಿoದ ದಕ್ಷಯಜ್ಞ ಎಂಬ ಪೌರಾಣಿಕ ನಾಟಕ ಪ್ರದರ್ಶನ ನೆಡೆಯಿತು.

ಈ ಕಾರ್ಯಕ್ರಮದಲ್ಲಿ ಸಾರಿಗೆ ಇಲಾಕೆ ಚಿನ್ನಸ್ವಾಮಿ, ರಂಗ ಕಲಾವಿದ ಡಾ. ಲಕ್ಷ್ಮಣ ದಾಸ್, ಮುಖಂಡರಾದ ಮುರುಳಿಧರ್, ಸೋಮಶೇಖರ್, ಮಹಾಲಿಂಗಪ್ಪ, ಸಿ.ಎ.ರಂಗಯ್ಯ, ಗಂಗಣ್ಣ, ಎಸ್.ಡಿ.ಪ್ರಜ್ವಲ್, ರಂಗಸ್ವಾಮಿ, ಎಂ.ವಿ.ನಾಗಣ್ಣ ಮುನಿಶ್ವರ ಟ್ರಸ್ಟ್ ಪದಾದಿಕಾರಿಗಳು, ಶಾಲಾ ಪ್ರಾಂಶುಪಾಲರು, ಸಿಬ್ಬಂದಿ ವರ್ಗ , ಪೋಷಕರು, ಮಕ್ಕಳು, ಭಕ್ತಾದಿಗಳು ಇದ್ದರು.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Leave a Reply

Your email address will not be published. Required fields are marked *