Janataa24 NEWS DESK
Turuvekere: ದಲಿತ ಯುವ ಮುಖಂಡ ದೊರೆಸ್ವಾಮಿ ಹೋರಾಟದ ಫಲ ಅಂಬೇಡ್ಕರ್ ಭವನಕ್ಕೆ ಸ್ಥಳ ನಿಗದಿ.
ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸೂಳೆಕೆರೆ ಗ್ರಾಮದಲ್ಲಿ ಅಂಬೇಡ್ಕರ್ ಭವನಕ್ಕೆ ಜಾಗ ನೀಡಲು ಅದೆಷ್ಟೋ ಬಾರಿ ಗ್ರಾಮ ಪಂಚಾಯಿತಿಗೆ ಆರ್ಟಿಐ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಪ್ರೇರಣೆಯೊಂದಿಗೆ ದಲಿತ ಯುವ ಮುಖಂಡನಾದ ದೊರೆಸ್ವಾಮಿ ಎಂಬುವರು ಸುಮಾರು ತಿಂಗಳುಗಳಿಂದಲೂ ಮನವಿಯನ್ನು ಸಲ್ಲಿಸಿ ಪ್ರತಿಭಟಿಸಿ ಜೊತೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಂಚಾಲಕರಾದ ಕೃಷ್ಣಸ್ವಾಮಿ ಅವರ ಆದೇಶದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಗೆ ಮನವಿ ಕೂಡ ಸಲ್ಲಿಸಿದ್ದರು.
ಇದರ ಹಿನ್ನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಅವರು ಸರ್ವ ಸದಸ್ಯರ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಅಂಬೇಡ್ಕರ್ ಭವನಕ್ಕೆ ಜಾಗ ನೀಡುವ ಕುರಿತು ಚರ್ಚಿಸಿ ಕೊನೆಗೂ ಸೂಳೆಕೆರೆ ಗ್ರಾಮದ ದೊಡ್ಡಮ್ಮ ದೇವಸ್ಥಾನದ ಹಿಂಭಾಗ ಸುಮಾರು 50ಕ್ಕೆ 50 ಅಡಿ ಜಾಗವನ್ನು ಗುರುತಿಸಿ ನಾಮಫಲಕವನ್ನು ಅಳವಡಿಸುವುದರ ಮೂಲಕ ಅಧ್ಯಕ್ಷರಾದ ಕಿರಣ್ ಕುಮಾರ್ ಅವರು ಸಮಾನತೆಯನ್ನು ಎತ್ತಿ ಹಿಡಿದಿದ್ದಾರೆ, ನಾಮಫಲಕ ಅಳವಡಿಕೆಯ ಸಂದರ್ಭದಲ್ಲಿ ಡಿಎಸ್ಎಸ್ ಅಂಬೇಡ್ಕರ್ ವಾದ ಸಂಚಾಲಕರಾದ ಕೃಷ್ಣ ಮಾದಿಗ ಮಾತನಾಡಿ ಒಬ್ಬ ದಲಿತ ಯುವ ಮುಖಂಡನ ಹೋರಾಟದ ಫಲ ಇಂದು ಈ ಅಂಬೇಡ್ಕರ್ ಜಾಗ ಗುರುತಿಸಲು ಸಾಧ್ಯವಾಗಿದೆ ಜೊತೆಗೆ ಯಾವುದೇ ಅಸಮಾನತೆಯನ್ನು ತೋರದೆ ಸಮಾನತೆಯ ಮನಸುಳ್ಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಿರಣ್ ಕುಮಾರ್ ಅವರ ಇಂತಹ ಅಭಿವೃದ್ಧಿಯ ಚಿಂತನೆ ತಾರತಮ್ಯವಿಲ್ಲದ ನಡೆ ಇರುವಂತಹ ವ್ಯಕ್ತಿ ಪ್ರತಿ ಎಂದು ಗ್ರಾಮ ಪಂಚಾಯಿತಿಯಲ್ಲಿ ಇದ್ದರೆ ಎಲ್ಲಾ ಸಮುದಾಯಕ್ಕೂ ಸಮಾನತೆಯನ್ನ ದೊರಕಿಸುವಂತಹ ಮನಸ್ಸುಳ್ಳ ಅಧ್ಯಕ್ಷರಾಗಿದ್ದಾರೆ.
ಜೊತೆಗೆ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಗೋಪಿನಾಥ್ ಕಾರ್ಯದರ್ಶಿ ಮಂಜುನಾಥ್ ಕರ ವಸೂಲಿಗಾರ ರಂಗನಾಥ್ ಇಂತಹ ಅಧಿಕಾರಿಗಳು ಸಹ ಇಂತಹ ಯಾವುದೇ ಸಮುದಾಯದ ತಾರತಮ್ಯವಿಲ್ಲದೆ ಅತಿ ವೇಗವಾಗಿ ಅಂಬೇಡ್ಕರ್ ಭವನಕ್ಕೆ ಜಾಗ ಗುರುತಿಸಲು ಕಾರಣಿಕರ್ತರಾಗಿದ್ದಾರೆ ಎಂದರು, ಸಮುದಾಯಕ್ಕೆ ಅಂಬೇಡ್ಕರ್ ಭವನ ಸ್ಥಳ ಗುರುತಿಸಲ್ಪಟ್ಟ ಹಿನ್ನೆಲೆ ಗ್ರಾಮಸ್ಥರ ಮೊಗದಲಿ ಸಂತಸ ಮನೆ ಮಾಡಿದೆ.ಇದೇ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಅವರಿಗೆ ಶಾಲು ಹೊದಿಸಿ ಸ್ಥಳದಲ್ಲಿಯೇ ಅಭಿನಂದಿಸಿದರು.
ನಾಮಪಲಕ ಅಳವಡಿಸುವ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಹಾಗೂ ದಲಿತ ಹಿರಿಯ ಪ್ರಮುಖ ಮುಖಂಡರಾದ ಚಂದ್ರಯ್ಯ,ಆರ್ಟಿಐ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಕಾರ್ಯಕರ್ತ ಮೋಹನ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ದಲಿತ ಮುಖಂಡ ಮುನಿಯೂರು ಮಂಜುನಾಥ್ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.