Janataa24 NEWS DESK
Turuvekere: ಪಟ್ಟಣ ಪಂಚಾಯ್ತಿಯಲ್ಲಿ ಸರ್ಕಾರಿ ಸ್ವತ್ತು ಉಳ್ಳವರ ಪಾಲಿಗೆ, ಭ್ರಷ್ಟಾಚಾರ ರುದ್ರ ನರ್ತನ.!ಡಿಎಸ್ಎಸ್ ಸಂಚಾಲಕ ಕೃಷ್ಣ ಮಾದಿಗ ನೇರ ಆರೋಪ.
ತುರುವೇಕೆರೆ: ತಾಲೂಕಿನ ಬಾಣಸಂದ್ರ ರಸ್ತೆಯಲ್ಲಿರುವ ಪಟ್ಟಣ ಪಂಚಾಯಿತಿ ಮುಂಭಾಗ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಂಚಾಲಕೃಷ್ಣ ಮಾದಿಗ ಆರ್‌ಟಿಐ ಕಾರ್ಯಕರ್ತ ಮೋಹನ್ ರವರಿಂದ ಜಂಟಿ ಪತ್ರಿಕಾಗೋಷ್ಠಿ ನಡೆಸಲಾಯಿತು,
ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿಗಳು ಮತ್ತು ಕೆಲ ಸದಸ್ಯರ ಹಣದ ವ್ಯಾಮೋಹದಿಂದ ಸರ್ಕಾರಿ ಸ್ವತ್ತು, ಉಳ್ಳವರ ಪಾಲಾಗಿದೆ ಜೊತೆಗೆ ಭ್ರಷ್ಟಾಚಾರ ಎನ್ನುವುದು ರುದ್ರ ನರ್ತನ ಮಾಡುತ್ತಿದೆ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿಗೆ ಜೊತೆಗೆ ಏನು ಅರಿಯದ ಕೆಲ ಸಾರ್ವಜನಿಕರ ಸ್ವತ್ತನ್ನು ಹಣದ ವ್ಯಾಮೋಹಕ್ಕೆ ಬಿದ್ದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯನ್ನೊಳಗೊಂಡಂತೆ ಕೆಲ ಸದಸ್ಯರ ಕುಮ್ಮಕ್ಕಿನಿಂದ ಉಳ್ಳವರ ಪಾಲಿಗೆ ಖಾತೆ ಮಾಡಿದ್ದು, ಪಟ್ಟಣದ ವಿವಿಧಡೆ ಸರ್ಕಾರಿ ಸ್ವತ್ತನ್ನು ಯಾವುದೇ ಹರಾಜು ಪ್ರಕ್ರಿಯೆ ಇಲ್ಲದೆ ಜಿಲ್ಲಾಧಿಕಾರಿಗಳ ಅನುಮತಿ ಗಳಿಲ್ಲದೆ ಉಳ್ಳವರಿಗೆ ಖಾತೆ ಮಾಡಿದ್ದಾರೆ ಎಂದರು.
ಇದೆ ವೇಳೆ ಮೋಹನ್ ಕುಮಾರ್ ಮಾತನಾಡಿ ಸರ್ಕಾರಿ ಸ್ವತ್ತನ್ನು ಅಧಿಕಾರಿಗಳು ಕೆಲ ಸದಸ್ಯರು ಸೇರಿ ಉಳ್ಳವರ ಹೆಸರಿಗೆ ಖಾತೆ ಮಾಡಿರುವ ಬಗ್ಗೆ, ಸರ್ಕಾರಿ ಗಲ್ಲಿಯ ಜಾಗವನ್ನು ಕಟ್ಟಡ ನಿರ್ಮಿಸಲು ಅನುಮತಿ ನೀಡಿರುವ ಬಗ್ಗೆ, ಪಟ್ಟಣ ಪಂಚಾಯಿತಿಗೆ ಸೇರಿದ ಲಕ್ಷಾಂತರ ರೂಗಳನ್ನು ಕಬಳಿಸಲು ಉನ್ನಾರ ಮಾಡಿರುವ ಕುರಿತು, ಇನ್ನು ಹಲವು ಭ್ರಷ್ಟಾಚಾರಗಳ ಮಾಹಿತಿಯನ್ನು ಈಗಾಗಲೇ ಮಾಹಿತಿ ಹಕ್ಕಿನಡಿ ಪಡೆದಿದ್ದು ಲೋಕಾಯುಕ್ತರಿಗೂ ಇದರ ಬಗ್ಗೆ ದೂರನ್ನು ಸಹ ನೀಡಿದ್ದು ಇಂದು ಸಂಜೆ ಜಿಲ್ಲಾಧಿಕಾರಿಯವರಿಗೆ ಈಮೇಲ್ ಮೂಲಕ ದೂರನ್ನು ಸಲ್ಲಿಸಿ, ನಂತರ ನೇರವಾಗಿ ಪಟ್ಟಣ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅವ್ಯವಾರಗಳನ್ನು ಉನ್ನತ ಮಟ್ಟದ ಅಧಿಕಾರಿಗಳಿರುವ ಸಮಿತಿಯನ್ನು ರಚನೆ ಮಾಡಿ ತನಿಖೆ ನಡೆಸಿ ಈ ಭ್ರಷ್ಟಾಚಾರದಲ್ಲಿ ಯಾರೆಲ್ಲಾ ಅಧಿಕಾರಿಗಳು ಸದಸ್ಯರು ಭಾಗಿಯಾಗಿದ್ದಾರೋ ಅವರ ಮೇಲೆ ಸೂಕ್ತವಾದ ಕಾನೂನು ಕ್ರಮ ಜರುಗಿಸಬೇಕು ಇದಲ್ಲದೆ ಪಟ್ಟಣ ಪಂಚಾಯಿತಿಗೆ ಭ್ರಷ್ಟಾಚಾರ ಕುರಿತು ಮಾಹಿತಿಯನ್ನು ನೀಡಲು ಅರ್ಜಿ ಕೂಡ ಹಾಕಿದ್ದರು ಸಹ ಯಾವುದೇ ಹಿಂಬರಹ ನೀಡದೆ, ಮಾಹಿತಿಯನ್ನು ನೀಡದೆ ಕೇವಲ ಕಾಟಾಚಾರಕ್ಕೆ ಅರ್ಜಿಯನ್ನು ಪಡೆದುಕೊಂಡು ಮೂಲೆಗೆ ಬಿಸಾಡುವುದು ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ಕೆಲಸವಾಗಿದೆ, ಇನ್ನು ಮುಂದುವರೆದು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದೆಲ್ಲಾ ಕೆಲ ಸದಸ್ಯರ ಮುಖಾಂತರ ದೂರವಾಣಿ ಕರೆ ಮಾಡಿ ಧಮಕಿ ಕೂಡ ಹಾಕಿದ್ದಾರೆ ಈಗಾಗಲೇ ದೂರವಾಣಿ ಮೂಲಕ ಕರೆ ಮಾಡಿ ನನ್ನನ್ನು ಬೆದರಿಸುವ ಎಲ್ಲಾ ರೆಕಾರ್ಡ್ಗಳನ್ನು ಸೀಡಿಮಾಡಿ ಜಿಲ್ಲಾ ಎಸ್ ಪಿ ಅವರಿಗೆ ದೂರು ಕೂಡ ಸಲ್ಲಿಸಿದ್ದು ಅದರ ತನಿಖೆ ಈಗಾಗಲೇ ನಡೆಯುತ್ತಿದ್ದು, ಇದರ ವಿವರ ಮುಂದಿನ ದಿನಗಳಲ್ಲಿ ನಿಮಗೆ ತಿಳಿಯಲಿದೆ, ಕೂಡಲೆ ತಾಲೂಕು ದಂಡಾಧಿಕಾರಿಯವರು ಇದರ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸಿ ತಪ್ಪಿತಸ್ಥರಿಗೆ 15 ದಿವಸದೊಳಗಾಗಿ ಕಾನೂನು ಕ್ರಮ ಜರುಗಿಸದಿದ್ದರೆ ಪಟ್ಟಣ ಪಂಚಾಯಿತಿಯ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ಕರ್ನಾಟಕ ರಕ್ಷಣಾ ವೇದಿಕೆ, ಹಾಗೂ ವಿವಿಧಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಪ್ರಧಾನ ಕಾರ್ಯದರ್ಶಿ ರುದ್ರೇಶ್, ತಾಲೂಕು ಆರ್‌ಟಿಐ ಅಧ್ಯಕ್ಷ ದೊರೆಸ್ವಾಮಿ, ಕನ್ನಡದ ಕಂದ ವೆಂಕಟೇಶ್, ಕರ್ನಾಟಕ ರಕ್ಷಣಾ ವೇದಿಕೆಯ ಮುನಿಯೂರು ಮಂಜುನಾಥ್, ಹರೀಶ್ ,ದೇವರಾಜು, ಇನ್ನು ಹಲವರು ಇದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.