Janataa24 NEWS DESK
Turuvekere: ಜಿಲ್ಲಾ ಮತ್ತು ತಾಲೂಕು ಆಡಳಿತದ ಸಂಧಾನ,ದಲಿತ ಮುಖಂಡ ವೆಂಕಟರಾಮು ಅವರ ಚಾತುರ್ಯತೆ ಎರಡು ಸಮುದಾಯಗಳ ಬಿರುಕನ್ನು ಸರಿಪಡಿಸಿದೆ.
ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿ ಕುಣಿಕೇನಳ್ಳಿ ಗ್ರಾಮದಲ್ಲಿ ಕೆಲ ದಿನಗಳಿಂದ ಜಾತ್ರಾ ಮಹೋತ್ಸವದ ವಿಚಾರವಾಗಿ ದಲಿತ ಮತ್ತು ಸವರ್ಣೀಯರ ನಡುವೆ ಜಿದ್ದಾಜಿದ್ದಿ ನಡೆಯುತ್ತಿದ್ದು ಕೊನೆಗೂ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಇದರ ಜೊತೆಗೆ ತಾಲೂಕಿನ ಹಿರಿಯ ದಲಿತ ನಾಯಕ ವಿ ಟಿ ವೆಂಕಟರಾಮ ಇವರ ಮಧ್ಯೆ ಪ್ರವೇಶದಿಂದ ಬೂದಿ ಮುಚ್ಚಿದ ಕೆಂಡದಂತಾಗಿದ್ದ ಕುಣಿಕೇನಹಳ್ಳಿ ಗ್ರಾಮ ಕೊನೆಗೂ ಯಾವುದೇ ಗೊಂದಲಗಳಿಲ್ಲದೆ ನೀರಾಯಸವಾಗಿ ಕೊನೆಗೊಂಡಿದೆ,
ದಲಿತರು ದೇವಸ್ಥಾನ ಪ್ರವೇಶ ನಿರ್ಬಂಧ ಕುರಿತು ಕಳೆದ ಎರಡು ವರ್ಷಗಳ ಹಿಂದೆಯೇ ಕುಣಿಕೇನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಕೆಂಪಮ್ಮ ದೇವಿ ದೇವಾಲಯಕ್ಕೆ ದಲಿತರ ಪ್ರವೇಶ ನಿರ್ಬಂಧ ಇದೆ ಎಂದು ಕುಣಿಕೇನಹಳ್ಳಿ ಗ್ರಾಮದ ವಾಸಿಗಳಾದ ದಲಿತರು ತುರುವೇಕೆರೆ ದಂಡಾಧಿಕಾರಿಗಳಿಗೆ ಮನವಿ ನೀಡಿ ಪೊಲೀಸ್ ಬಿಗಿ ಬಂದೋ ಬಸ್ತಿನಿಂದ ಆ ದಿನ ದೇವಾಲಯ ಪ್ರವೇಶ ಮಾಡಿದ್ದರು, ಆದರೆ ಜಾತ್ರಾ ಮಹೋತ್ಸವದ ವಿಚಾರವಾಗಿ ಸವರ್ಣಿಯರು ದಲಿತರನ್ನು ತೇಜೋವಧೆ ಮಾಡಿ ಅಸ್ಪೃಶ್ಯತೆ ನೀತಿ ಅನುಸರಿಸಿದ್ದಾರೆ ಎಂದು ಕುಣಿಕೆನಲ್ಲಿ ಗ್ರಾಮದ ದಲಿತ ಮುಖಂಡ ಜಗದೀಶ್ ಅವರು ತಾಲೂಕು ದಂಡಾಧಿಕಾರಿಯವರಿಗೆ ದೂರು ಸಲ್ಲಿಸಿದ್ದರು, ಇದರ ಹಿನ್ನೆಲೆ ಕುಣಿಕೆನಲ್ಲಿ ಗ್ರಾಮಕ್ಕೆ ಕೆಎಸ್ಆರ್ಪಿ ತುಕಡಿ ಹಾಗೂ ಡಿ ಆರ್ ವ್ಯಾನ್ ಸಹಾ ನಿಯೋಜನೆ ಮಾಡಲಾಗಿತ್ತು, ಇದೆಲ್ಲದರ ನಡುವೆ ಇದೇ ತಿಂಗಳ 11ನೇ ತಾರೀಖಿನಂದು ಗ್ರಾಮ ದೇವತೆ ಶ್ರೀ ಕೆಂಪಮ್ಮ ದೇವಿ ಹಾಗೂ ಮುಜರಾಯಿ ಇಲಾಖೆಗೆ ಸೇರಿರುವ ಶ್ರೀರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವವನ್ನೂ ಆಚರಿಸಲು ಎಂಟು ಹಳ್ಳಿಯ ಗ್ರಾಮಸ್ಥರು ಸಜ್ಜಾಗಿದ್ದರು, ಜೊತೆಗೆ ಜಾತ್ರೆ ದಿನಾಂಕವನ್ನು ನಿಗದಿಪಡಿಸಲು ಸಾರುವ ಸಮಯದಲ್ಲಿ ದಲಿತ ಮನೆಗಳಿರುವ ಕಡೆಗಳಲ್ಲಿ ಅವರಿಗೆ ವಿಷಯವನ್ನು ಸಾರಿರುವುದಿಲ್ಲ ಹಾಗೂ ಪ್ರತಿ ವರ್ಷದಂತೆ ವಿಚಾರ ಸಾರುವ ವ್ಯಕ್ತಿಯನ್ನು ಬಿಟ್ಟು ಬೇರೆ ವ್ಯಕ್ತಿಯಿಂದ ಸಾರಿಸಿದರು ಈ ಸಂಬಂಧ ನಮ್ಮನ್ನು ಬಿಟ್ಟು ಜಾತ್ರೆ ಮಾಡುತ್ತಿದ್ದಾರೆ ಎಂದು ತಾಲೂಕು ಆಡಳಿತಕ್ಕೆ ದೂರು ನೀಡಿ ನಮ್ಮನ್ನು ಜಾತ್ರಾ ಮಹೋತ್ಸವಕ್ಕೆ ಸಮಿತಿಯನ್ನು ರಚನೆ ಮಾಡಿ ದಲಿತರನ್ನು ಸಮಿತಿಯ ಸದಸ್ಯರನ್ನಾಗಿ ಮಾಡಿಕೊಂಡು
ಜಾತ್ರೆ ನಡೆಸುವಂತೆ ತಾಲೂಕು ದಂಡಾಧಿಕಾರಿಯವರಿಗೆ ಮನವಿ ಸಲ್ಲಿಸಿದರು, ತಕ್ಷಣ ತಹಸಿಲ್ದಾರ್ ಕುಂ, ಹಿ, ಅಹಮದ್ ರವರ ಅಧ್ಯಕ್ಷತೆಯಲ್ಲಿ ಮೊದಲನೇ ಬಾರಿ ತಾಲೂಕು ಕಚೇರಿಯಲ್ಲಿ ಸಭೆ ನಡೆಸಿ ಅಸ್ಪೃಶ್ಯತೆ ಆಚರಣೆ ಮಾಡುವುದು ಅಪರಾಧ ಎಂದು ತಿಳುವಳಿಕೆ ನೀಡಿದ್ದರು ಸಹ ಯಾವುದೇ ಪ್ರಯೋಜನವಾಗದೆ
ಎರಡನೇ ಬಾರಿ ಮತ್ತೆ ತಾಲೂಕು ಆಡಳಿತ ಪೊಲೀಸ್ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಜಾತ್ರಾ ಒಳಪಡುವ ಗ್ರಾಮಗಳ ಗ್ರಾಮಸ್ಥರನು ಸೇರಿಸಿಕೊಂಡು ಕುಣಿಕೇನಹಳ್ಳಿ ಗ್ರಾಮದ ದೇವಸ್ಥಾನದ ಆವರಣದಲ್ಲಿ ಶಾಂತಿ ಸಭೆ ನಡೆಸಲಾಯಿತು ಕೊನೆಗೆ ಶಾಂತಿ ಸಭೆಯಲ್ಲಿ
ಕಮಿಟಿ ಮಾಡುವ ತೀರ್ಮಾನಕ್ಕೆ ಬರಲಾಯಿತು . ದಲಿತರು ಸಹ ಕಮಿಟಿಯಲ್ಲಿ ಇರುವಂತೆ ತಹಶೀಲ್ದಾರ್ ತಿಳಿಸಿದರು ಆದರೂ ಅಧಿಕಾರಿಗಳ ಮುಂದೆ ಸವರ್ಣಿಯರು ದಲಿತರ ಸದಸ್ಯತ್ವಕ್ಕೆ ವಿರೋಧ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ತಹಶೀಲ್ದಾರ್ ಮಧ್ಯ ಪ್ರವೇಶಿಸಿ ಜಾತ್ರೆಯ ಶಾಂತಿ ಸಭೆ ಇನ್ನೊಮ್ಮೆ ನಡೆಸುವಂತೆ ಮುಂದೂಡಿದರು, ಅದರಂತೆ ಗುರುವಾರದಂದು ಬೆಳಗ್ಗೆ ತಹಶೀಲ್ದಾರ್ ಕುಂ ಈ, ಅಹಮದ್ ರವರು ಜಿಲ್ಲಾ ಆಡಳಿತದಿಂದ ತುಮಕೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ ಎಸ್ ಅಬ್ದುಲ್ ಖಾದರ್. ತಿಪಟೂರು ಉಪ ವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀರವರು, ತುರುವೇಕೆರೆ ನಿರೀಕ್ಷಕ ಲೋಹಿತ್ ಕುಮಾರ್, ಉಪನಿರೀಕ್ಷಕರಾದ ಸಂಗಮೇಶ್ ಮೇಟಿ, ಸಮಾಜ ಕಲ್ಯಾಣ ಇಲಾಖೆಯ ಶ್ರೀಧರ್ ಮೂರ್ತಿಯವರು ಹಾಗೂ ಬಿಗಿಯಾದ ಪೊಲೀಸ್ ಬಂದೋ ಬಸ್ತ್ ಸಮೇತ ಸದರಿ ಗ್ರಾಮದ ಶ್ರೀ ಕೆಂಪಮ್ಮ ದೇವಿ ದೇವಾಲಯದ ಆವರಣದಲ್ಲಿ ಶಾಂತಿ ಸಭೆ ನಡೆಸಿದರು ಸವರ್ಣಿಯರು ಹಾಗೂ ದಲಿತರ ಮಧ್ಯೆ ಇರುವ ಬಿರುಕನ್ನು ಸರಿಪಡಿಸಲು ಹರಸಾಹಸ ಪಟ್ಟರು ಮೂಡನಂಬಿಕೆ ಅಸ್ಪೃಶ್ಯತೆ ಆಚರಣೆಗೆ ಕಾನೂನು ಬಾಹಿರ ಎಂದು ಹೇಳಿ ದಲಿತರನ್ನು ಸಮಿತಿಯಲ್ಲಿ ಸೇರಿಸಿಕೊಂಡು ಜಾತ್ರೆಯನ್ನು ಆಚರಿಸುವಂತೆ ತಹಶೀಲ್ದಾರ್ ಮನವಿ ಮಾಡಿದರು,
ಆದರೂ ಕೆಲ ಕಾಲ ಗೊಂದಲ ವಾತಾವರಣ ಸೃಷ್ಟಿಯಾಯಿತು
ಸವರ್ಣಿಯರಿಂದ ವಿರೋಧವಾಯಿತು ಮತ್ತೆ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಕಾನೂನು ವ್ಯವಸ್ಥೆ ಹೇಗೆ ಎಂದು ಕಾನೂನು ಅರಿವು ಹೇಳಿ ದಲಿತರ ಶೋಷಣೆ ಯಾದರೆ ಎಲ್ಲರನ್ನೂ ಬಂಧಿಸುವ ಖಡಕ್ ಸಂದೇಶ ನೀಡಿದರು
ಆದರೂ ಸವರ್ಣಿಯರು ಸಮಿತಿಗೆ ದಲಿತರನ್ನು ಸೇರಿಸಿಕೊಂಡು ಜಾತ್ರೆ ನಡೆಸುವ ಒಪ್ಪಿಗೆ ಸೂಚಿಸಲಿಲ್ಲ ಕೊನೆಗೆ ತುರುವೇಕೆರೆ ತಾಲೂಕಿನ ಹಿರಿಯ ದಲಿತ ಮುಖಂಡ ವಿ ಟಿ ವೆಂಕಟರಾಮು ಅವರ ತಂಡ ಸ್ಥಳದಲ್ಲಿ ಆಗುತ್ತಿರುವ ಎರಡು ಸಮುದಾಯಗಳ ಮಾತಿನ ಚಕ ಮಕಿ ಆಗುತ್ತಿರುವುದನ್ನು ಗಮನಿಸಿ ದಲಿತ ಮುಖಂಡ ವೆಂಕಟರಾಮು ಅವರ ತಂಡ ಸವರ್ಣಿಯರಿಗೆ ಅಸ್ಪೃಶ್ಯತೆಯಿಂದ ಗ್ರಾಮಗಳಿಗೆ ಯಾವೆಲ್ಲ ತೊಂದರೆಗಳು ಆಗಬಹುದು ಎಂಬುದನ್ನ ಮನದಟ್ಟು ಮಾಡಿ ಕೊನೆಗೂ ದಲಿತರನ್ನು ಕೂಡ ಸಮಿತಿಯಲ್ಲಿ ಜಾತ್ರಾ ಸಮಿತಿಯಲ್ಲಿ ಸೇರಿಸಿಕೊಂಡು ಒಗ್ಗಟ್ಟಾಗಿ ಜಾತ್ರಾ ಮಹೋತ್ಸವವನ್ನು ಆಚರಿಸುತ್ತೇವೆ ಎಂದು ತಾಲೂಕು ಆಡಳಿತದ ದಂಡಾಧಿಕಾರಿಯಾದ ಕುಂ ಹಿ ಅಹಮದ್, ತುರುವೇಕೆರೆ ಪೊಲೀಸ್ ನಿರೀಕ್ಷಕರಾದ ಲೋಹಿತ್ ಕುಮಾರ್ ಅವರ ಮುಂದೆ ಹಿರಿಯ ದಲಿತ ಮುಖಂಡ ವೆಂಕಟರಾಮು ಇವರ ಮುಖಂಡತ್ವದಲ್ಲಿ ಸವರ್ಣಿಯರು ಒಪ್ಪಿಗೆ ಸೂಚಿಸಿದರು, ಅದರಂತೆ ಸ್ಥಳದಲ್ಲಿಯೇ ಸವರ್ಣಿಯರಿಂದ 13 ಜನ ಸದಸ್ಯರು, ದಲಿತ ಜನಾಂಗದಿಂದ ಏಳು ಜನರನ್ನು ಆಯ್ಕೆ ಮಾಡಿ ತಾಲೂಕು ಆಡಳಿತದ ಅಧಿಕಾರಿಯೊಬ್ಬರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲು ಹೆಸರುಗಳನ್ನು ಓದಲಾಯಿತು
ಹಾಗೂ ಜಾತ್ರೆಯನ್ನು ದಂಡಿನ ಶಿವರದ ಶ್ರೀ ಹೊನ್ನಮ್ಮ ಜಾತ್ರಾ ಮಹೋತ್ಸವ ಮುಗಿದ ನಂತರ ನಿಗದಿಪಡಿಸುವಂತೆ ತೀರ್ಮಾನ ಮಾಡಿದರು, ಅಂತೂ ಇಂತೂ ಶಾಂತಿ ಸಭೆ ಯಶಸ್ವಿಯಾಗಿ ನಡೆಯಿತು
ಇದಕ್ಕೆಲ್ಲ ಶ್ರಮವಹಿಸಿದ ದಲಿತ ಮುಖಂಡ ವಿ ಟಿ ವೆಂಕಟರಾಮು, ತಿಪಟೂರು ಉಪ ವಿಭಾಗಾಧಿಕಾರಿ ಶ್ರೀಮತಿ ಸಪ್ತ ಶ್ರೀ, ತಾಲೂಕು
ದಂಡಾಧಿಕಾರಿ ಅಹಮದ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅಬ್ದುಲ್ ಖಾದರ್, ತುರುವೇಕೆರೆ ಪೊಲೀಸ್ ನಿರೀಕ್ಷಕರಾದ ಲೋಹಿತ್ ಕುಮಾರ್, ಅವರಿಗೆ ಸುತ್ತಮುತ್ತಲಿನ ಗ್ರಾಮಸ್ಥರುಗಳು ಕೃತಜ್ಞತೆ ಸಲ್ಲಿಸಿದರು, ಅಂತೂ ಇಂತೂ ಬೂದಿ ಮುಚ್ಚಿದ ಕೆಂಡದಂತಾಗಿದ್ದ ಕುಣಿಕೆನಲ್ಲಿ ಗ್ರಾಮ ತಣ್ಣನೆ ಮಳೆ ಬಂದಂತೆ ಎರಡು ಸಮುದಾಯಗಳ ನಡುವೆ ಇದ್ದ ಬಿರುಕು ಶಮನವಾಗಿದೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.