Janataa24 NEWS DESK
Pavagada: ಖಾಸಗಿ ಕ್ಲಿನಿಕ್ ನರ್ಸಿಂಗ್ ಹೋಮ್ ಗಳಲ್ಲಿ ಆರೋಗ್ಯ ತಪಾಸಣಾ ದರ ಪಟ್ಟಿ ಹಾಕಬೇಕು.
ಪಾವಗಡ: ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರಿ ವಿರೋಧಿ ಸಂಸ್ಥೆಯ ತಾಲೂಕು ಅಧ್ಯಕ್ಷ ಇಮ್ರಾನ್ ಉಲ್ಲಾ ರವರ ನೇತೃತ್ವದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಮೂಲಕ ರಾಜ್ಯ ಆರೋಗ್ಯ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಕಳೆದ ಕೋವಿಡ್ ಇಂದ ಹಿಡಿದು ಇಲ್ಲಿವರೆಗೂ ಆರೋಗ್ಯ ವಿಚಾರದಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಹೆಚ್ಚುತ್ತಿದ್ದು ಪ್ರತಿ ಕುಟುಂಬದಲ್ಲಿಯೂ ಸಹ ಅನಾರೋಗ್ಯದಿಂದ ನರಳುತ್ತಿರುವ ಜನರು ಕಂಡು ಬರುತ್ತಿದ್ದಾರೆ.
ಜೊತೆಗೆ ತಾತ್ಕಾಲಿಕವಾದ ರೋಗಗಳು ಹೆಚ್ಚುತ್ತಿದ್ದು ರೋಗಿಗಳು ಹೆಚ್ಚಾಗುತ್ತಿದ್ದಾರೆ ಈಗಿನ ಜನಸಂಖ್ಯೆ ಹೆಚ್ಚಿದ್ದು ಇದಕ್ಕೆ ಸಮನಾದ ಸರ್ಕಾರಿ ಆಸ್ಪತ್ರೆ ಗಳು ಕಡಿಮೆ ಇರುವ ಕಾರಣ ರೋಗಿಗಳು ಖಾಸಗಿ ವೈದ್ಯರ ಮೇಲೆ ಅವಲಿಂಬಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಮನಗಂಡಿರುವ ಖಾಸಗಿ ವೈದ್ಯರುಗಳು ಕನಿಷ್ಠ 500 ರಿಂದ ಸಾವಿರ ರೂಗಳಿಗೂ ಹೆಚ್ಚು ಸಂದರ್ಶನ ಶುಲ್ಕ (ಈ ಹಣಕ್ಕೆ ಯಾವುದೇ ಔಷದ ಅಥವಾ ಮಾತ್ರೆ ನೀಡುವುದಿಲ್ಲ ) ವಸೂಲಿ ಮಾಡುವ ಮೂಲಕ ಹಗಲು ದರೋಡೆಯಲ್ಲಿ ತೊಡಗಿಕೊಂಡಿರುತ್ತಾರೆ ಅಲ್ಲದೆ ಸುಖ ಸುಮ್ಮನೆ ರೋಗಿಗಳಿಗೆ ಲ್ಯಾಬ್ ಟೆಸ್ಟ್ ಮಾಡುವ ಮೂಲಕವೂ ಸಹ ಹಣ ಮಾಡುವ ಪದ್ಧತಿಯನ್ನು ಮಾಡಿಕೊಂಡಿರುತ್ತಾರೆ.
ಇಂದಿನ ದಿನಗಳಲ್ಲಿ ಮಧ್ಯಮ ವರ್ಗದ ರೋಗಿಗಳು ವೈದ್ಯರ ಬಳಿ ಹೋಗಿ ಬಂದರೆ ವೈದ್ಯರ ಸಂದರ್ಶನ ಶುಲ್ಕ, ಲ್ಯಾಬ್ ಟೆಸ್ಟ್ ಹಾಗೂ ಮಾತ್ರೆಗಳಿಗೆ ಕನಿಷ್ಠ 2 ಸಾವಿರದಿಂದ 3000 ಸಾವಿರ ರೂಪಾಯಿಗಳನ್ನು ಗಳನ್ನು ನೀಡುವ ಪರಿಸ್ಥಿತಿ ಇದೆ, ಜೊತೆಗೆ ರೋಗ ವಾಸಿಯಾಗಲು ಕನಿಷ್ಟ ಎರಡು-ಮೂರು ಬಾರಿಯಾದರು ಹೋಗಿ ಖರ್ಚು ಮಾಡುವ ಪರಿಸ್ಥಿತಿ ಇದೆ ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ತಾತ್ಕಾಲಿಕ ರೋಗಿಯಾದರೆ ಒಂದು ತಿಂಗಳ ಸಂಪಾದನೆ ಖರ್ಚಾಗಿ ಬಿಡುತ್ತದೆ ನಂತರ ಜೀವನ ನಿರ್ವಹಣೆಗೆ ಸಾಲ ಮಾಡುವ ಪರಿಸ್ಥಿತಿಯಲ್ಲಿದ್ದಾರೆ
ಇಂದಿನ ದಿನದಲ್ಲಿ ಪ್ರತಿಯೊಂದು ವ್ಯವಹಾರಕ್ಕೆ ಸರ್ಕಾರ ದಿಂದ ಇಂತಿಷ್ಟು ಹಣ ಪಡೆಯಬೇಕೆಂದು ಕಾನೂನಾತ್ಮಕವಾಗಿ ನಿಗದಿ ಮಾಡಿರುತ್ತಾರೆ ಉದಾಹರಣೆ ಬಸ್ ಟಿಕೆಟ್ ದರ, ಟ್ಯಾಕ್ಸಿ, ಆಟೋರಿಕ್ಷಾ, ಚಲನಚಿತ್ರ ಮಂದಿರಗಳ ಟಿಕೆಟ್ ದರಗಳು, ದಿನಗೂಲಿ ನೌಕರರ ವೇತನ, ಶಾಲಾ ಕಾಲೇಜುಗಳ ಶಿಕ್ಷಣ ಶುಲ್ಕಗಳು ಹಾಗು ಇತರೆ ಸಾರ್ವಜನಿಕ ಸೌಲಭ್ಯಗಳಿಗೆ ಸಂಬಂಧಿಸಿದ ಸೇವೆಗಳಲ್ಲಿ ದರ ನಿಗದಿಪಡಿಸಲಾಗಿದೆ
ಅದೇ ರೀತಿ ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್ ಹಾಗೂ ಆಸ್ಪತ್ರೆಗಳಲ್ಲಿ ಸಂದರ್ಶನ ಶುಲ್ಕವನ್ನು ಮಧ್ಯಮ ವರ್ಗದ ಮತ್ತು ಬಡವರ ಕೈಗೆಟವಂತೆ ನಿಗದಿ ಪಡಿಸಲು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಈ ವೇಳೆ ಮಾನವ ಹಕ್ಕುಗಳನ್ನು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ . ಸದಸ್ಯರಾದ ಅಂಜಿ.
ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಎನ್. ನಾಗಮಣಿ.ಪಿ. ಶೋಭ ರಾಣಿ.ಲತಾ.ನೇತ್ರ. ಶೃತಿ ಕೀರ್ತಿ. ಸಂಸ್ಥೆಯ ಸದಸ್ಯರು ಇತರರಿದ್ದರು.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.