Janataa24 NEWS DESK
Gubbi:ದಲಿತ ಪರ,ಪ್ರಗತಿಪರ ಸಂಘಟನೆಗಳ ಒಕ್ಕೂಟದದಿಂದ ಅಮಿತ್ ಶಾ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ.
ಗುಬ್ಬಿ : ದಲಿತ ವಿರೋಧಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಕುರಿತು ಹವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ದಲಿತಪರ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಿದರು.
ಅಮಿತ್ ಶಾ ವಿರುದ್ಧ ಘೋಷಣೆ ಕೂಗೂತ್ತಾ ಪಟ್ಟಣದ ಬಸ್ ನಿಲ್ದಾಣ ದಿಂದ ತಾಲ್ಲೂಕು ಆಡಳಿತ ಸೌಧದ ವರೆಗೆ ಪದಯಾತ್ರೆಯಲ್ಲಿ ಸಾಗಿ
ಅಮಿತ್ ಶಾ ಅವರ ಅಣಕು ಶವಯಾತ್ರೆ ನಡೆಸಿ ಕೋರ್ಟ್ ಸರ್ಕಲ್ ನಲ್ಲಿ ಮಾನವ ಸರಪಳಿ ರಚಿಸಿ ಅಮಿತ್ ಶಾ ಪ್ರತಿಕೃತಿ ದಹನ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು.
ಮಾಜಿ ಜಿಪಂ ಸದಸ್ಯ ಜಿ ಎಚ್ ಜಗನ್ನಾಥ್ ಮಾತನಾಡಿ ಅಮಿತ್ ಷಾ ಒಬ್ಬ ಕೊಲೆಗಡುಕನಾಗಿದ್ದು ಗೋದ್ರ ಹತ್ಯಾಕಾಂಡಕ್ಕೆ ಕಾರಣವಾಗಿದ್ದಾರೆ ಅಮಿತ್ ಶಾ ಅವರಿಗೆ ದಲಿತಪರ ಚಿಂತನೆಗಳಿಲ್ಲ ಇಲ್ಲಿವರೆಗೂ ಭಾರತದೇಶದಲ್ಲಿ ಪ್ರದಾನ ಮಂತ್ರಿಗಳಗಲಿ ಗೃಹ ಮಂತ್ರಿಗಳು ಅಂಬೇಡ್ಕರ್ ಬಗ್ಗೆ ಹಾವೇಳನಕಾರಿಯಾಗಿ ಮಾತನಾಡಿಲ್ಲ ಅಮಿತ್ ಷಾ ಒಬ್ಬ ಕೋಮುವಾದಿ ಈ ಕೊಡಲೇ ರಾಜೀನಾಮೆ ನಿಡಬೇಕೆಂದು ಒತ್ತಾಯಿಸಿದರು.
ದಲಿತ ಮುಖಂಡ ಕೋಡಿಯಾಲ ಮಹಾದೇವ್ ಮಾತನಾಡಿ ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ವ್ಯಸನ ಆಗಿದೆ. ಅಂಬೇಡ್ಕರ್ ಸ್ಮರಣೆ ಮಾಡುವ ಬದಲು ದೇವರನ್ನು ಜಪ ಮಾಡಿದರೆ ಏಳು ಜನ್ಮದಲ್ಲಿ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ನಮಗೆ ಮಹಾನ್ ಮಾನವತವಾದಿ ಡಾ. ಬಿ ಆರ್ ಅಂಬೇಡ್ಕರ್ ಅವರು ನಿಜವಾದ ದೇವರು
ಅಮಿತ್ ಶಾ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸತ್ತಿನಿಂದ ಹೊರಬಂದು ದೇವರ ಜಪಮಾಡಲಿ ಈ ಕೂಡಲೇ ರಾಷ್ಟ್ರಪತಿಗಳು ಅಮಿತ್ ಷಾ ರನ್ನು ಮಂತ್ರಿ ಸ್ಥಾನದಿಂದ ಅನರ್ಹಗೊಳಿಸಿ ಶಾಶ್ವತ ಗಡಿಪಾರು ಮಾಡಬೇಕೆಂದು ಕಿಡಿಕಾರಿದರು.
ದಲಿತ ಮುಖಂಡ ಚೇಳೂರು ಶಿವನಂಜಪ್ಪ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶ ಕಂಡ ದೇಶ ಕಂಡ ಮಹಾನ್ ಮಾನವತವಾದಿಯಾಗಿದ್ದು, ದಲಿತರು ಅಲ್ಪಸಂಖ್ಯಾತರು ಸರ್ವ ಜನಾಂಗಕ್ಕೂ ಸಂವಿಧಾನದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಿದ್ದಾರೆ. ಅವರ ಬಗ್ಗೆ ಅಮಿತ್ ಷಾ ಅವಹೇಳನ ಕಾರಿಗೆಯಾಗಿ ಹೇಳಿಕೆ ನೀಡಿರುವುದು ಕಂಡಡನಿಯ ಕೂಡಲೇ ರಾಜೀನಾಮೆ ನೀಡಬೇಕು ಇಲ್ಲದೆ ಹೋದರೆ ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ಯಲ್ಲಿ ನಿಟ್ಟೂರು ರಂಗಸ್ವಾಮಿ,ಕಡಬ ಶಂಕರ್, ಇಮ್ರಾನ್, ಸಚಿನ್ ಮಧು, ಗುರುರೇಣುಕಾರಧ್ಯ, ಕೆ ಆರ್ ವೆಂಕಟೇಶ್, ಮಂಜುನಾಥ್, ಫಣೀಂದ್ರಮುನಿ, ಹಮ್ರಾನ್,
ಕುಂದುರನಹಳ್ಳಿ ನಟರಾಜ್ ಸೇರಿದಂತೆಮಹಿಳೆಯರು ದಲಿತಪರ, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಸಹಸ್ರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.