Janataa24 NEWS DESK
Turuvekere: ಮಣೆಚಂಡೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಇವರ ವತಿಯಿಂದ, ಹೋಬಳಿ ಮಟ್ಟದ ಕ್ರೀಡಾಕೂಟ ಆಯೋಜನೆ.
ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ವ್ಯಾಪ್ತಿಗೆ ಬರುವ ಮಣೆಚಂಡೂರಿನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವತಿಯಿಂದ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಕೋಡಿ ನಾಗಸಂದ್ರ ಟಿ ಬಿ ಕ್ರಾಸ್ ಬಳಿ ಇರುವ ಎಸ್ ಬಿ ಜಿ ಕ್ರೀಡಾ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದು ಈ ಕ್ರೀಡಾಕೂಟಕ್ಕೆ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಕೃಪಾ ಆಶೀರ್ವಾದದೊಂದಿಗೆ ಕ್ರೀಡೆಗಳು ಪ್ರಾರಂಭಗೊಂಡವು.
ಈ ಕ್ರೀಡಾಕೂಟಕ್ಕೆ ತಾಲೂಕಿನ ಶಾಸಕರಾದ ಎಂ ಟಿ ಕೃಷ್ಣಪ್ಪ ಅವರು ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಕ್ರೀಡಾ ಜ್ಯೋತಿಯನ್ನು ಶಿಕ್ಷಣ ಇಲಾಖೆಯ ಸುರೇಶ್ ಅವರು ಸ್ವೀಕರಿಸಿದರು, ನಂತರ ಮಣೆಚಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಮ್ಮ ರಮೇಶ್ ರವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.
ಈ ಕ್ರೀಡಾಕೂಟದಲ್ಲಿ ಮಾಯಸಂದ್ರ ಹೋಬಳಿ ವ್ಯಾಪ್ತಿಗೆ ಬರುವ ಸುಮಾರು 13 ಶಾಲೆಗಳ ವಿದ್ಯಾರ್ಥಿಗಳು ಗುಂಪು ಕ್ರೀಡೆ ಮತ್ತು ಮೇಲಾಟಗಳ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಈ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದ ಮಣೆಚಂಡೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 8, 9 10,ನೇ ತರಗತಿಯ ವಿದ್ಯಾರ್ಥಿಗಳು ಗುಂಪು ಕ್ರೀಡೆಗಳಾದ ಕಬಡ್ಡಿ, ಶಟಲ್, ಎರಡರಲ್ಲೂ ಪ್ರಥಮ ಸ್ಥಾನ ಪಡೆದು ಜೊತೆಗೆ ಇದೇ ಶಾಲೆಯ 10 ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ವೈಭವಿ ವಿ ಬಿ ಅವರು ವೈಯಕ್ತಿಕ ಚಾಂಪಿಯನ್ ಪಡೆದರು,ಉಳಿದ ಕ್ರೀಡೆಯಲ್ಲಿ ದ್ವಿತೀಯ ದ್ವಿತೀಯ ಗೆಲುವನ್ನು ಸಾಧಿಸಿ ಇನ್ನು ಉಳಿದ ಶಾಲೆಗಳಿಂದ ಈ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ, ತೃತೀಯ, ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ, ಇನ್ನು ಈ ಕ್ರೀಡಾಕೂಟದಲ್ಲಿ ಆಯೋಜನೆ ಮಾಡಿರುವ ಶಾಲೆಯ ಪ್ರಾಂಶುಪಾಲರಾದ ಗದಗಯ ಹಿರೇಮಠ್ ಅವರು ಸ್ವಾಗತ ಕೋರಿದರು.
ಈ ಕ್ರೀಡಾಕೂಟದಲ್ಲಿ ತಾಲೂಕು ದೈಹಿಕ ಪರಿವಿಕ್ಷಕರಾದ ಸಿದ್ದಪ್ಪ ನಾಗಪ್ಪ ವಾಲೇಕರ್, ಹಾಗೂ ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಎಚ್ಎಸ್ ನಾಗರಾಜು ಹೆಗ್ಗಪ್ಪ ತಳವಾರ್, ಉಪಸ್ಥಿತರಿದ್ದು ದೈಹಿಕ ಶಿಕ್ಷಕರಾದ ಗುರುಪ್ರಸಾದ್ ಎಸ್ ಎಚ್, ಸಹಶಿಕ್ಷಕರುಗಳಾದ ಆರ್ ಮುಬಿನ್ತಾಜ್ (ಹಿಂದಿ ಶಿಕ್ಷಕರು), ಸಬೀನಾ ಬಾನು, ಶಿವಣ್ಣ ಎಂ, ವೇಣುಗೋಪಾಲ್ ಡಿ ಪಿ, ಚೇತನ್ ಕುಮಾರ್ ಎ ಎಂ,, ವಿನೋದ್ ಕುಮಾರ್ ಬಿ ಎಂ, ಶಿಲ್ಪಶ್ರೀ ಏ ಎಸ್, ಗೀತಾ ಎಲ್, ಮಣಿ ಟಿ. ಆಶಾರಾಣಿ (ಹಾಸ್ಟೆಲ್ ಸ್ಟಾಪ್ ನರ್ಸ್). ಹಾಗೂ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಾಯಸಂದ್ರ ಹೋಬಳಿಯ 13 ಶಾಲೆಯ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು, ಸಹ ಶಿಕ್ಷಕರು ಇನ್ನು ನೂರಾರು ವಿದ್ಯಾರ್ಥಿಗಳ ಒಳಗೊಂಡಂತೆ ಈ ಕ್ರೀಡಾ ಕೂಟಕ್ಕೆ ಸಾಕ್ಷಿಯಾದರು.
ವಿಶೇಷವಾಗಿ ಈ ಕ್ರೀಡಾಕೂಟದಲ್ಲಿ ಎಸ್ ಬಿ ಜಿ ಶಾಲೆಯ ದೈಹಿಕ ಶಿಕ್ಷಕರಾದ, ಗಿರಿಧರ್ ರವರು ಪಥ ಸಂಚಲನ ಕಾರ್ಯಕ್ರಮದ ನಿರೂಪಣೆಯನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟು, ಇವರಿಗೆ ದೈಹಿಕ ಶಿಕ್ಷಕರಾದ ಉದಯ್ ಕುಮಾರ್, ಮಹಾದೇವ್, ಹಾಗೂ ಎಸ್ ಬಿ ಜಿ ಶಾಲೆಯ ಮುಖ್ಯ ಶಿಕ್ಷಕರು, ಎಲ್ಲಾ ಸಹ ಶಿಕ್ಷಕ ವೃಂದದವರು, ಇದರ ಜೊತೆಗೆ ಮಣೆ ಚಂಡೂರು ಗ್ರಾಮ ಪಂಚಾಯಿತಿ, ಮತ್ತು ಸೊರವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಕ್ರೀಡಾಕೂಟಕ್ಕೆ ಹೆಚ್ಚಿನ ಸಹಕಾರ ನೀಡಿದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/