Janataa24 NEWS DESK
Pavagada: ರಸ್ತೆ ಅಪಘಾತ, ಓರ್ವ ಯುವಕ ಸ್ಥಳದಲ್ಲೇ ಸಾವು.
ಪಾವಗಡ: ತಾಲ್ಲೂಕಿನ ನಿಡಗಲ್ ಹೋಬಳಿಯ ಕರೆಕ್ಯಾತನಹಳ್ಳಿ ಸ್ವಾರಮ್ಮ ದೇವಸ್ಥಾನದ ಸಮೀಪದ ಶಿರಾ ಮುಖ್ಯ ರಸ್ತಯಲ್ಲಿ ಅಪಘಾತದಲ್ಲಿ ಮೃತಪಟ್ಟ ಘಟನೆ ಮಧ್ಯಾಹ್ನ ನಡೆದಿದೆ…
ಪಾವಗಡ ತಾಲ್ಲೂಕಿನ ಅರಸೀಕೆರೆ ಗ್ರಾಮದ ಸುಮಾರು 25 ವರ್ಷದ ಕುಮಾರ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ತಂದೆ ತಿಮ್ಮಣ್ಣ ಎಂದು ತಿಳಿದು ಬಂದಿದೆ. ಸಮಾಜದ ಈತ ಜೆಸಿಬಿ ಡ್ರೈವರ್ ಕೆಲಸ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ..ಶ್ರಾವಣ ಶನಿವಾರ ಪಾವಗಡ ಪಟ್ಟಣದ ಶನಿಮಹಾತ್ಮ ಸ್ವಾಮಿ ದರ್ಶನಕ್ಕೆ ಬಂದು ವಾಪಸ್ ತನ್ನೂರಿಗೆ ಹೋಗುವಾಗ ಮಧ್ಯಾಹ್ನ ಈ ಘಟನೆ ನಡೆದಿದೆ…
ದುರಾದೃಷ್ಟವಶಾತ್ ಇತ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನದ ಚಕ್ರ ಪಂಕ್ಚರ್ ಆಗಿದೆ ಬೆನ್ನೆಲ್ಲೆ ರಸ್ತೆಗೆ ಬಿದ್ದಿದ್ದಾನೆ…ಹಿಂಬದಿಯಿಂದ ಮತ್ಯಾವುದೋ ದೊಡ್ಡ ವಾಹನ ಇತನ ತಲೆಮೇಲೆ ಹತ್ತಿಸಿಕೊಂಡು ಹಾದು ಹೋಗಿದೆ…ಪರಿಣಾಮ ಸ್ಥಳದಲ್ಲೇ ಹಸುನೀಗಿದ್ದಾನೆ…
ತಲೆ ಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ…
ಘಟನೆ ಮಾಹಿತಿ ಪಡೆದ ಅರಸೀಕೆರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಾರಾಸಿಂಗ್ ಮತ್ತು ಸಿಬ್ಬಂಧಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/