Tumakuru: ಸಿನಿಮೀಯ ರೀತಿಯಲ್ಲಿ ಆರೋಪಿಯ ಬೆನ್ನಟ್ಟಿ ಬಂಧಿಸಿದ ಕೊರಟಗೆರೆ ಪೊಲೀಸ್.

Janataa24 NEWS DESK

Tumakuru: Koratagere Police Chased and arrested the accused in a Cinematic Manner.

ತಮಕೂರು: ದಿನಾಂಕ:-20/06/2024 ರಂದು ಕೊರಟಗೆರೆ ಠಾಣಾ ವ್ಯಾಪ್ತಿಯಲ್ಲಿನ ಕೊರಟಗೆರೆ ಟೌನ್ ಡಿಸಿಸಿ ಬ್ಯಾಂಕ್ ಹತ್ತಿರ ಘಟನೆ ಸಂಭವಿಸಿದ ನಂತರ ಆರೋಪಿಯನ್ನು ಬೆನ್ನಟಿ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿ ಆರೋಪಿ ದಾಬಸ್‌ಪೇಟೆ. ನೆಲಮಂಗಲ ಮೂಲಕ ಬೆಂಗಳೂರು ತಲುಪಿದ್ದು ಆರೋಪಿ ಪತ್ತೆಗಾಗಿ ಅರೋಪಿತನ ವಾಹನ ನಂಬರ್ ನ್ನು ಅಲರ್ಟ ವಾರ್ನಿಂಗ್ ಸೆಂಟರ್ ಗೆ ನಮೂದಿಸಿದ್ದು ಅಲರ್ಟ ವಾರ್ನಿಂಗ್ ಸೆಂಟರ್‌ನ ಇಂಜಿನಿಯರ್ ಅಶೋಕ್ ರವರ ಸಹಕಾರದೊಂದಿಗೆ ಸುಮಾರು 01 ತಿಂಗಳಿನಿಂದ ಸದಾಶಿವನಗರ ಮತ್ತು ಎಂಎಸ್ ರಾಮಯ್ಯ ಆಸ್ಪತ್ರೆ ಹತ್ತಿರ ಕಾದು ಕುಳಿತ್ತಿದ್ದ ಕೊರಟಗೆರೆ ಪೊಲೀಸ್ ಠಾಣಾ ಸಿಪಿಸಿ 671 ಶ್ರೀ ದೊಡ್ಡಲಿಂಗಯ್ಯ ರವರಿಗೆ ಕಮಾಂಡ್ ಸೆಂಟರ್ ಬೆಂಗಳೂರು ರವರಿಂದ ಮಾಹಿತಿ ನೀಡಿದ್ದು ದಿನಾಂಕ:06/08/2024 ರಂದು ಸದಾಶಿವನಗರ ಟ್ರಾಫಿಕ್ ಜಂಕ್ಷನ್ ಬಳಿ ಆಸಾಮಿ ದ್ವಿಚಕ್ರ ವಾಹನದಲ್ಲಿ ಬಂದ ಆಸಾಮಿಯನ್ನು ಅಡ್ಡಗಟ್ಟಿ ನಿಲ್ಲಿಸದೆ ಇದ್ದಾಗ ಅವರ ಕಾಲನ್ನು ಹಿಡಿದು ಜಗ್ಗಿ ಸುಮಾರು 20 ಮೀಟರ್ ಎಳೆದು ಕೊಂಡು ಹೋಗಿರುತ್ತಾನೆ. ನಂತರ ಅಲ್ಲೆ ಇದ್ದ ಸದಾಶಿವನಗರ ಟ್ರಾಫಿಕ್ ಠಾಣಾ ಮಹಿಳಾ ಎಎಸ್‌ಐ ನಾಗಮ್ಮ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಶ್ರೀಧರ್ ರವರ ಸಹಕಾರದೊಂದಿಗೆ ಆರೋಪಿ ಬಂದಿಸಲಾಗಿರುತ್ತದೆ.

ಮೋಸ್ಟ್ ವಾಂಟೆಡ್ ಹೊಟ್ಟೆ ಮಂಜ ಎಂಬ ಕ್ರಿಮಿನಲ್ ನನ್ನ ಬೆಂಗಳೂರಿನಲ್ಲಿ ತನ್ನ ಜೀವವನ್ನು ಲೆಕ್ಕಿಸದೆ ಹೋರಾಟ ಮಾಡಿ ಕಳ್ಳನನ್ನು ಬಂಧಿಸಿದ ಕೊರಟಗೆರೆ ಪೊಲೀಸ್ ಠಾಣೆಯ ದೊಡ್ಡಲಿಂಗಯ್ಯ & ಮೋಹನ್ ಕುಮಾರ್ ರವರನ್ನು ಜಿಲ್ಲಾ ಪೊಲೀಸ್ ಅಧಿಕಾರಿ ಅಶೋಕ್ ಕೆ ಸಿ ರವರು ಕಚೇರಿಯಲ್ಲಿ ಕರೆದು ಅಭಿನಂದಿಸಿ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು.

 

 

ಕುಖ್ಯಾತ ಆರೋಪಿ ಮಂಜೇಶ್@ಮಂಜ@ಚೌಟ್ರಿಮಂಜ@ಹೊಟ್ಟೆ ಮಂಜನ ಬಂಧನ.

 

 

ಮಂಜೇಶ್@ಮಂಜ@ಚೌಟ್ರಿಮಂಜ@ಹೊಟ್ಟೆ ಮಂಜ ಬಿನ್ ಲೇಟ್ ಸಿದ್ದಗಂಗಾಚಾರಿ 40 ವರ್ಷ. ತರಕಾರಿ ವ್ಯಾಪಾರ, ಬಸವಣ್ಣನ ದೇವಸ್ಥಾನ ಮತ್ತು ಸರ್ಕಾರಿ ಶಾಲೆ ಹತ್ತಿರ, ಹುರುಳಿಚಿಕ್ಕನಹಳ್ಳಿ ಗ್ರಾಮ, ಹೆಸರುಘಟ್ಟ ಹೋಬಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಸದರಿ ಆರೋಪಿಯು ಒಬ್ಬನೆ ದ್ವಿಚಕ್ರ ವಾಹನದಲ್ಲಿ ಬಂದು ವಯಸ್ಸಾದ ಹೆಂಗಸರಿಗೆ ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ಗಳ ಹತ್ತಿರ ವೃದ್ದಾಪ್ಯ ವೇತನ ಮತ್ತು ಪೆನ್‌ನ್ ಕೊಡಿಸುವುದಾಗಿ ನಂಬಿಸಿ ಅವರ ಆಧಾರ್ ಕಾರ್ಡ್. ರೇಷನ್ ಕಾರ್ಡ ಇತ್ಯಾದಿ ದಾಖಲಾತಿಗಳನ್ನು ಕೇಳಿ ಅವನ್ನು ಜೆರಾಕ್ಸ್ ಮಾಡಿಕೊಂಡು ಬರಲು ಆಸಾಮಿಯ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೋಗಿ ಹೆಂಗಸರ ಮೈ ಮೇಲೆ ಇದ್ದ ಆಭರಣ ಗಳನ್ನು ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಗಳಲ್ಲಿ ಇವುಗಳನ್ನು ನೋಡಿದರೆ ವೃದ್ಧಾಪ್ಯ ವೇತನ ಮತ್ತು ಪೆನ್‌ನ್ ಕೊಡುವುದಿಲ್ಲ ಎಂದು ಅವರ ಮೈ ಮೇಲೆ ಇದ್ದ ಆಭರಣಗಳನ್ನು ಬಿಚ್ಚಿಸಿಕೊಂಡು ಅಥವ ಬಲವಂತವಾಗಿ ಕಿತ್ತುಕೊಂಡು ಹೋಗುವ ಪ್ರವೃತ್ತಿ ಉಳ್ಳವನಾಗಿದ್ದು ಈ ಆಭರಣ ಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಗೋವ/ಮಂಗಳೂರು ಕಡೆಗಳಿಗೆ ಹೋಗಿ ಮೋಜು ಮಸ್ತಿ ಮಾಡುವ ಪ್ರವೃತ್ತಿ ಉಳ್ಳವವಾಗಿರುತ್ತಾನೆ.

ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ಮೇಲೆ ದಾಖಲಾದ 07 ಪ್ರಕರಣಗಳ ವಿವರ.

1. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 04 ಪ್ರಕರಣಗಳು ಮೊನಂ:56/2024 ಕಲಂ:420 IPC. 75/2024 ಕಲಂ:420 . :135/2024 ಕಲಂ:379 IPC & ಮೊನಂ:182/2024 ಕಲಂ:420 IPC.

2. ಹೆಣ್ಣೂರು ಠಾಣೆಯಲ್ಲಿ 229/2023 ಕಲಂ:420 ಐಪಿಸಿ.

3. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಮೊನಂ:21/2024 ಕಲಂ:420 ಐಪಿಸಿ.

4. ಕೋಳಾಲ ಪೊಲೀಸ್ ಠಾಣೆಯಲ್ಲಿ ಮೊನಂ:25/2024 ಕಲಂ:379 ಐಪಿಸಿ.

“ಒಟ್ಟಾರೆಯಾಗಿ ಆರೋಪಿ, 32 ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಆರೋಪಿಯಿಂದ ₹10 ಸಾವಿರ ನಗದು ಹಾಗೂ ₹6.75 ಲಕ್ಷ ಮೌಲ್ಯದ 135 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

Leave a Reply

Your email address will not be published. Required fields are marked *