Janataa24 NEWS DESK
Gubbi: ವಾಲ್ಮೀಕಿ ನಿಗಮದ ಹಣವನ್ನು ಅನ್ಯ ರಾಜ್ಯಗಳಿಗೆ ವರ್ಗಾವಣೆ– ಶಾಸಕ MTK ಕಿಡಿ

ಗುಬ್ಬಿ: ರಾಜ್ಯದಲ್ಲಿ ನಡೆದಿರುವ ವಾಲ್ಮೀಕಿ ನಿಗಮದ ಹಗರಣ ಹಣವನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮತ್ತು ಮೂಡಾ ಹಗರಣ ರಾಜ್ಯ ಸರ್ಕಾರದ ಸಾಧನೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಎಂ ಟಿ ಕೃಷ್ಣಪ್ಪ ಕಿಡಿ ಕಾರಿದರು.
ಪಟ್ಟಣದ ತಾಲೂಕು ಪಂಚಾಯಿತಿಯ ಶಾಸಕರ ಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸಭೆಯ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರವು ಅಧಿಕಾರದ ಚುಕ್ಕಾಣೆ ಹಿಡಿದು ವರ್ಷ ಕಳೆದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಸಿದ್ದರಾಮಯ್ಯನವರು ನೇತೃತ್ವ ಕಾಂಗ್ರೆಸ್ ಸರ್ಕಾರದಲ್ಲಿ ಸಾಲು ಸಾಲು ಪ್ರಮಾಣದ ಭ್ರಷ್ಟಾಚಾರಗಳು ನಡೆದಿವೆ. ಕರ್ನಾಟಕ ಸರ್ಕಾರದ ವಾಲ್ಮೀಕಿ ನಿಗಮದ ಹಣವನ್ನು ಬೇರೆ ಬೇರೆ ರಾಜ್ಯಗಳ ಚುನಾವಣೆ ಗಳಿಗೆ ಸೊಪ್ಪು ಮಾರಾಟ ಮಾಡಿದಂತೆ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಅದೇ ರೀತಿಯಲ್ಲಿ ಮೈಸೂರಿನ ಮೂಡಾ ಹಗರಣದಲ್ಲಿಯೂ ಸಾಕಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ
ಸಿದ್ದರಾಮಯ್ಯನವರು ವೇದಿಕೆಗಳಲ್ಲಿ ನಾನು ಅಹಿಂದ ನಾಯಕ ಎಂದು ಉದ್ದೂದ್ದ ಭಾಷಣ ಮಾಡುತ್ತಾರೆ. ಎಂದ ಅವರು ಮೂಡ ಹಗರಣದ ವಿರುದ್ಧ ಬೆಂಗಳೂರಿಂದ ಮೈಸೂರಿಂದ ವರೆಗೂ ಏಳು ದಿನಗಳ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.