Janataa24 NEWS DESK
Accident: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಮುಖಾಮುಖಿ ಡಿಕ್ಕಿ-ಪ್ರಾಣಪಾಯದಿಂದ ಪಾರಾದ ಪ್ರಯಾಣಿಕರು.
ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ವ್ಯಾಪ್ತಿಗೆ ಬರುವ ತೂಬಿನ ಕಟ್ಟೆ ಗ್ರಾಮದ ಬಳಿ ಎರಡು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿರುವ ಮಾಹಿತಿಯೊಂದಿಗೆ ವಾಹನಗಳು ಮುಖಾಮುಖಿಯಾಗಿರುವ ಘಟನೆ ನಡೆದಿದೆ.
ಸಂಜೆ ಸರಿಸುಮಾರು ನಾಲ್ಕು ಮೂವತ್ತರಿಂದ ಐದು ಗಂಟೆಯ ಸಮಯದಲ್ಲಿ ಮೈಸೂರಿನಿಂದ ತುಮಕೂರಿನ ಕಡೆ ಚಲಿಸುತ್ತಿದ್ದ ಬಸ್ ತೂಬಿನ ಕಟ್ಟೆ ಗ್ರಾಮದ ಬಳಿ ಅದೇ ರಸ್ತೆಯಲ್ಲಿ ತುಮಕೂರಿನಿಂದ ಮೈಸೂರಿನೆಡೆಗೆ ಚಲಿಸುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಎರಡು ವಾಹನವು ಮುಖಮುಖಿ ಡಿಕ್ಕಿಯಾಗಿದ್ದು, ಎರಡು ಬಸ್ಗಳ ಮುಂದಿನ ಒಂದೊಂದು ಭಾಗ ಸಂಪೂರ್ಣ ನುಚ್ಚು ಗುಜ್ಜಾಗಿದೆ, ಸದ್ಯಕ್ಕೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ಆದರೆ ಮೈಸೂರು ಕಡೆಯಿಂದ ಬರುತ್ತಿದ್ದ ಬಸ್ ನ ಚಾಲಕನಿಗೆ ಗಾಯಗಳಾಗಿದ್ದು ಮತ್ತು ತುಮಕೂರು ಕಡೆಯಿಂದ ಬರುತ್ತಿದ್ದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬ ಮಾಹಿತಿ ತುಮಕೂರು ಕಡೆಯಿಂದ ಬರುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನ ನಿರ್ವಹಾಕರಿಂದ ಮಾಹಿತಿ ಸಿಕ್ಕಿದ್ದು.
ಸದ್ಯಕ್ಕೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಆದರೆ ಗಾಯಗಳಾಗಿರುವ ಬಸ್ ಚಾಲಕ ಮತ್ತು ಪ್ರಯಾಣಿಸುತ್ತಿದ್ದ ಪುಟ್ಟ ಮಗುವನ್ನು ಆಂಬುಲೆನ್ಸ್ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ ಎಂಬ ಮಾಹಿತಿ ಸಾರ್ವಜನಿಕರಿಂದ ಲಭ್ಯವಾಗಿದೆ ,ಇನ್ನು ಸ್ಥಳಕ್ಕೆ ತುರುವೇಕೆರೆ ಪೊಲೀಸ್ ಠಾಣೆಯ ಉಪ ವಿಭಾಗವಾದ ಮಾಯಸಂದ್ರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದೇ ವೇಳೆ ಸುಮಾರು ಅರ್ಧ ಕಿ.ಮೀಗಳಷ್ಟು ಈ ವಾಹನಗಳು ಡಿಕ್ಕಿ ಯಿಂದಾಗಿ ಸಾಲುಗಟ್ಟಿ ವಿವಿಧ ವಾಹನಗಳು ಅಲ್ಲೇ ಸಮಯ ಕಳೆಯುವಂತಾಗಿದೆ. ಜೊತೆಗೆ ಸಾರ್ವಜನಿಕರು ಕೂಡ ಈ ಸ್ಥಳದಲ್ಲಿ ಜಮಾಯಿಸಿದ್ದಾರೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.instagram.com/janataa24?igsh=aXM0Ym9zb2Y2YTRn
https://www.janataa24.com/pavagada-nss-students-can-learn-rural-values/