Janataa24 NEWS DESK
Turuvekere: ಭಾರತೀಯ ವಾಯು ಸೇನಾ ನಿವೃತ್ತ ಅಧಿಕಾರಿ ಮಾಯಸಂದ್ರ ತಿಮ್ಮಾಚಾರಿ ನಿಧನ.
ತುರುವೇಕೆರೆ: ಭಾರತೀಯ ವಾಯು ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ತಾಲೂಕಿನ ಮಾಯಸಂದ್ರ ಗ್ರಾಮದ ತಿಮ್ಮಚಾರಿ (75) ರವರು ಇಂದು ಸೋಮವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹಿರಿಯರು ಹಾಗೂ ವಾಯು ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಹೆಗ್ಗಳಿಕೆ ಇವರದ್ದಾಗಿದ್ದು, ಮಧ್ಯಾಹ್ನ ಊಟದ ನಂತರ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ ಬಳಿಕ ಕುಟುಂಬಸ್ಥರು ಶ್ರೀ ಆದಿಚುಂಚನಗಿರಿ ಸಂಶೋಧನಾ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆಯೇ ಶ್ರೀಯುತರು  ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು, ಓರ್ವ ಧರ್ಮಪತ್ನಿ,ಓರ್ವ ಮಗ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದು, ನಾಳೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಮಾಯಸಂದ್ರ ಗ್ರಾಮದಲ್ಲಿಯೇ  ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದವರಿಂದ ಮಾಹಿತಿಗಳು ತಿಳಿಸಿವೆ.
ಮೃತರ ಅಗಲಿಕೆಗೆ, ತಾಲೂಕಿನ ಹಾಲಿ ಮತ್ತು ಮಾಜಿ ಶಾಸಕರು, ಸ್ಥಳೀಯ ಮಾಯಸಂದ್ರ ಹೋಬಳಿ ಕ.ಸಾ.ಪ. ಮತ್ತು ಹಿರಿಯ ನಾಗರಿಕ ವೇದಿಕೆ, ಸರ್ಕಾರಿ ನೌಕರರು, ನಿವೃತ್ತ ನೌಕರರು, ಸ್ಥಳೀಯ ಜನಪ್ರತಿನಿಧಿಗಳು, ತಾಲೂಕಿನ ಪ್ರಮುಖ ಜನ ಪ್ರತಿನಿಧಿಗಳು, ಗ್ರಾಮಸ್ಥರು ಸೇರಿದಂತೆ ಮುಂತಾದವರು ಸಂತಾಪ ಸೂಚಿಸಿದ್ದಾರೆ.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/pavagada-theft-of-gold-worth-4-lakhs/