Janataa24 NEWS DESK
Gubbi: ಕೆಸರುಗದ್ದೆ ಯಂತಾದ ಮುಸಕೊಂಡ್ಲಿ ಗ್ರಾಮ
ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಇಡೀ ಶಾಪ.
ಗುಬ್ಬಿ : ತಾಲೂಕಿನ ನಿಟ್ಟೂರು ಹೋಬಳಿ ಕೊಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಸಕೊಂಡ್ಲಿ ಗ್ರಾಮವು ತಾಲೂಕಿನ ಗಡಿ ಮತ್ತು ಗಣಿ ಬಾದಿತ ಪ್ರದೇಶವಾಗಿದ್ದು ಗ್ರಾಮದ ಸಂಪೂರ್ಣ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ-ಶಾಪ ಹಾಕಿದ ಘಟನೆ ನಡೆಯಿತು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಮುಸ ಕೊಂಡ್ಲಿ ಗ್ರಾಮವು ಮೂಲಭೂತ ಸೌಲಭ್ಯಗಳಾದ ರಸ್ತೆ ಚರಂಡಿ ಬೀದಿ ದೀಪ ಗಳಿಂದವಂಚಿತವಾಗಿದ್ದು ಗ್ರಾಮಸ್ಥರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಜೆಜೆ ಎಂ ಕಾಮಗಾರಿಗಾಗಿ ಗ್ರಾಮದಲ್ಲಿದ್ದ ಸಿಸಿ ರಸ್ತೆಯನ್ನು ಹೊಡೆದು ಪೈಪ್ ಲೈನ್ ಮಾಡಿ ಸಿಸಿ ರಸ್ತೆಗೆ ಸಿಮೆಂಟ್ ಬಳಸದೆ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದಾರೆ.
ಗ್ರಾಮಸ್ಥರು ರಸ್ತೆ ಚರಂಡಿ ಇಲ್ಲದೆ ರಸ್ತೆಯಲ್ಲಿ ಓಡಾಡಲು ತುಂಬಾ ಅಸಹಾಯಕವಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಕೊಂಡ್ಲಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮಸ್ಥರಾದ ಯೋಗೇಶ್ ಮಾತನಾಡಿ ಹೊಸ ಕೊಂಡ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ನಮ್ಮ ಗ್ರಾಮಕ್ಕೆ ತಾಲೂಕಿನ ಯಾವುದೇ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಈ ಗ್ರಾಮದ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ.
ಸುಮಾರು ವರ್ಷಗಳಿಂದ ನಮ್ಮ ಗ್ರಾಮದ ರಸ್ತೆಗಳು, ಚರಂಡಿ ವ್ಯವಸ್ಥೆ ವಿದ್ಯುತ್ ದೀಪದ ವ್ಯವಸ್ಥೆ ನೆನೆಗುದಿಗೆ ಬಿದ್ದಿವೆ.
ಮಳೆ ಬಂದರೆ ವೃದ್ಧರು ಮಕ್ಕಳು ಮನೆಯಿಂದ ಹೊರಬರಲು ಅರಸಹಾಸ ಪಡುವ ಪರಿಸ್ಥಿತಿ ಉಂಟಾಗುತ್ತಿದೆ ರಸ್ತೆಗಳಲ್ಲಿ ವಾಹನಗಳಂತೂ ಸಂಚರಿಸಲು ಸಾಧ್ಯವಾಗುವುದಿಲ್ಲ ಎರಡು ದಿನಗಳಿಂದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವನ್ನು ತೋಡಿಕೊಂಡರು.
ಗ್ರಾಮಸ್ತೆ ಲಕ್ಷ್ಮಮ್ಮ ಮಾತನಾಡಿ ಗ್ರಾಮದ ರಸ್ತೆಗಳು ಅಭಿವೃದ್ಧಿ ಕಾಣದೆ ನಿನಗೂಡಿಗೆ ಬಿದ್ದಿವೆ ಸೂಕ್ತ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಇಲ್ಲದೆ ಡೆಂಗ್ಯೂ ನಂತಹ ಅನೇಕ ಮಾರಕ ರೋಗಗಳು ಅರಳುವ ಭೀತಿಯಲ್ಲಿ ಗ್ರಾಮಸ್ಥರು ಇದ್ದೇವೆ.
ಮೂಲಭೂತ ಸೌಕರ್ಯಗಳಾದ ರಸ್ತೆ ಚರಂಡಿ ವಿದ್ಯುತ್ ಕಾಣದೆ ಗ್ರಾಮಸ್ಥರು ಅಸಹಾಯಕರಾಗಿದ್ದೇವೆ ಕೂಡಲೇ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ ಹೋದರೆ ಸಂಬಂಧಪಟ್ಟ ಇಲಾಖೆ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿ ಕವಿತ :
ಮಳೆ ಬಂದ ಕಾರಣ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ.
ವಿದ್ಯಾರ್ಥಿ ಧನುಷ್ :
ಶಾಲೆಯ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು ಸೋಮವಾರ ಶಾಲೆಗೆ ತೆರಳು ಹೋಗಿ ರಸ್ತೆಯಲ್ಲಿ ಕಾಲು ಜಾರಿ ಬಿದ್ದು ಶಾಲೆಯ ಸಮವಸ್ತ್ರ ಮತ್ತು ಶಾಲೆಯ ಪುಸ್ತಕಗಳು ಸಂಪೂರ್ಣವಾಗಿ ಹಾಳಾಗಿವೆ ಸ್ಥಳೀಯ ದವಾಖಾನೆಗೆ ತೆರಳಿ ಚಿಕಿತ್ಸೆ ಪಡೆದಿದ್ದೇನೆ.
ಹೇಳಿಕೆ: ಪಂಚಾಯತಿ ಅಭಿವೃದ್ಧಿ ಅಧಿಕಾರಿ
ಕೊಂಡ್ಲಿ ಸುತ್ತಮುತ್ತ ಗಣಿ ಪ್ರದೇಶವಾದ್ದರಿಂದ ಇಲ್ಲಿನ ಭೌಗೋಳಿಕ ಮಣ್ಣಿನ ಲಕ್ಷಣದ ಸಮಸ್ಯೆಯಿಂದಾಗಿ ಈ ರೀತಿ ಘಟನೆ ನಡೆದಿದೆ ಮುಂದಿನ ಮೂರು ದಿನಗಳಲ್ಲಿ ತ್ವರಿತ ಕಾಮಗಾರಿ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.
ಹೇಳಿಕೆ: ಕ್ಷೇತ್ರ ಶಿಕ್ಷಣಾಧಿಕಾರಿ.
ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರ ಬಳಿ ರಸ್ತೆ ವಿಚಾರವಾಗಿ ಚರ್ಚಿಸಿದ್ದೇನೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಬಾರದಂತೆ ಕಾಳಜಿ ವಹಿಸುತ್ತೇನೆ.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/bengaluru-action-to-solve-parking-parameshwar/