Tumkur: ಪೈಪ್ ಮುಖಾಂತರ ನೀರು ಕೊಂಡೊಯ್ಯಲು ನಾವು ಬಿಡುವುದಿಲ್ಲ,

 Janataa24 NEWS DESK

 

Tumkur: ಪೈಪ್ ಮುಖಾಂತರ ನೀರು ಕೊಂಡೊಯ್ಯಲು ನಾವು ಬಿಡುವುದಿಲ್ಲ, ಕಾಮಗಾರಿ ನಿಲ್ಲಿಸದಿದ್ದರೆ ವಿಧಾನಸೌಧ ಛಲೋ, ಮಾಜಿ ಶಾಸಕ ಮಸಾಲ ಜಯರಾಮ್ ಹೇಳಿಕೆ.

ತುರುವೇಕೆರೆ:ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿ ಇರುವ ಫಾರಂ ಹೌಸ್ ನಲ್ಲಿ ಮಾಜಿ ಶಾಸಕ ಮಸಾಲ ಜಯರಾಮ್ ಪತ್ರಿಕಾ ಮಾಧ್ಯಮಗೋಷ್ಠಿ ನಡೆಸಿದರು, ಇದೇ ವೇಳೆ ಮಾತನಾಡಿದ ಅವರು ತುಮಕೂರು ಜಿಲ್ಲೆಯಿಂದ ಕುಣಿಗಲ್ ಗೆ ನೀರು ಕೊಂಡೊಯ್ಯುವ ಸಂಬಂಧ ಈಗಾಗಲೇ ಹಲವು ಹೋರಾಟವನ್ನು ನಾವು ಮಾಡಿದ್ದೇವೆ.

ಕುಣಿಗಲ್ ಗೆ ಮೀಸಲಿಟ್ಟಿರುವ 3 ಟಿಎಂಸಿ(TMC) ನೀರು ತೆಗೆದುಕೊಂಡು ಹೋಗಲು ನಾವು ಯಾವುದೇ ವಿರೋಧ ವ್ಯಕ್ತಪಡಿಸಲ್ಲ, ಆದರೆ 12 ಅಡಿ ವಿನ್ಯಾಸವುಳ್ಳ ಪೈಪ್ ಮೂಲಕ ನೀರನ್ನು ಕೊಂಡೊಯ್ಯಲು ಈಗಾಗಲೇ ಶ್ರೀರಂಗ ಎಕ್ಸ್ಪ್ರೆಸ್ ಲಿಂಕ್ ಕೆನಾಲ್(Express link Canal) ಇವರು ಕಾಮಗಾರಿ ನಡೆಸುತ್ತಿದ್ದು 12 ಅಡಿ ವಿನ್ಯಾಸದ ಪೈಪ್ ಮೂಲಕ ನೀರು ಕೊಂಡೊಯ್ಯಲು ನಾವುಗಳು ಬಿಡುವುದಿಲ್ಲ, ರೈತರ ಮತ್ತು ಜನಪ್ರತಿನಿಧಿಗಳ ವಿರೋಧವಿದ್ದರೂ ಕಾಮಗಾರಿಯನ್ನು ಸ್ಥಗಿತಗೊಳಿಸದೆ, ಕಾಮಗಾರಿಗೆ ಚಾಲನೆ ನೀಡಿರುವುದು ಈ ಸರ್ಕಾರದ ಬಂಡತನ ತೋರುತ್ತಿದೆ.

ಮುಂದುವರೆದು ಮಾತನಾಡಿದ ಅವರು ಈ ಕಾಮಗಾರಿಯನ್ನು ಸ್ಥಗಿತಗೊಳಿಸದಿದ್ದರೆ ವಿಧಾನಸೌಧ ಛಲೋ ನಡೆಸಬೇಕಾಗುತ್ತದೆ, , ರೈತರು ಹಾಗೂ ಕನ್ನಡಪರ ಸಂಘಟನೆಗಳು, ಜನಪ್ರತಿನಿಧಿಗಳು, ಈ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲೆಯ ಮಂತ್ರಿಗಳು ಕೂಡಲೇ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ರೈತರ ಮತ್ತು ಜನಪ್ರತಿನಿಧಿಗಳ ವಿರೋಧದ ನಡುವೆಯೂ ಈ ಕಾಮಗಾರಿ ನಡೆಯಬಾರದು ಎಂದು ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಇದೆ ಸಂದರ್ಭದಲ್ಲಿ ಮುಖಂಡರುಗಳಾದ, ಮುಖಂಡರುಗಳಾದ ವಿ ಬಿ ಸುರೇಶ್, ರಂಗೇಗೌಡ, ಪಾಂಡು, ಹೊಣಕೆರೆ ಸಂದೇಶ್, ಸೋಮಶೇಖರ್, ರಘು, ಉಮೇಶ್, ಹಲವರು ಉಪಸ್ಥಿತರಿದ್ದರು.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://www.janataa24.com/the-teachers-who-teach-tumkur-are-a-thorn-in-the-side-of-the-students/

 

https://youtu.be/pjhX2PBmvwc?si=IJ7m1fIT1nhbeTE1

Leave a Reply

Your email address will not be published. Required fields are marked *