Janataa24 NEWS DESK
Lokayukta : 25 ಲಕ್ಷ ಲಂಚ ಪಡೆಯುವಾಗ ಮುಡಾ ಕಮಿಷನರ್ ಲೋಕಾಯುಕ್ತ ಬಲೆಗೆ.

ಮಂಗಳೂರು: ಲಂಚ ಪಡೆಯುತ್ತಿರುವ ಭ್ರಷ್ಟ ಅಧಿಕಾರಿಗಳ ಬೆನ್ನಿಗೆ ಬಿದ್ದು ಲೋಕಾಯುಕ್ತ ಪ್ರತಿನಿತ್ಯ ಭ್ರಷ್ಟರನ್ನು ಎಡೆಮುರಿ ಕಟ್ಟುತ್ತಿದೆ ಮತ್ತು ಲಂಚ ಮುಕ್ತ ವ್ಯವಸ್ಥೆಗಾಗಿ ಶ್ರಮಿಸುತ್ತಿದೆ.
ಸಾರ್ವಜನಿಕರ ಬಳಿ 25 ಲಕ್ಷ ರೂಪಾಯಿ ಲಂಚ ಪಡೆಯುವಾಗ ಮಂಗಳೂರು(Mangalore) ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ರೆಡ್-ಹ್ಯಾಂಡ್ ಆಗಿ ಲೋಕಾಯುಕ್ತ(Lokayukta) ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ಶನಿವಾರ ಬೆಳಕಿದೆ ಬಂದಿದೆ. ಟಿಡಿಆರ್ ಸಮಸ್ಯೆ ಮುಕ್ತಾಯಗೊಳಿಸಲು 25 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಹಣ ಸ್ವೀಕರಿಸುತ್ತಿದ್ದಾಗ ಆಯುಕ್ತನ ಕಡೆ ಲೋಕಾಯುಕ್ತ ಬಲೆಗೆ ಬೀಸಿದ್ದಾರೆ.ಮುಡಾ ಕಮಿಷನರ್ ಮನ್ಸೂರ್ ಅಲಿ ಅವರನ್ನು ಲೋಕಾಯುಕ್ತ ಪೊಲೀಸರು ಸೆರೆ ಹಿಡಿದು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿಚೆಲುವರಾಜ್, ಇನ್ಸ್ಪೆಕ್ಟರ್ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದ ಕಾರ್ಯಾಚರಣೆ ನಡೆಸಿದ್ದು ಮಧ್ಯವರ್ತಿ ಸಲೀಂ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಸಾಗರ್ ರಿಯಾಲಿಟಿ ಪ್ರಮೋಟರ್ಸ್ನ ಮಾಲೀಕ ಗಿರಿಧರ್ ಶೆಟ್ಟಿಯಿಂದ ದಲ್ಲಾಳಿ ಸಲೀಂ ಮೂಲಕ ಆಯುಕ್ತ ಮನ್ಸೂರ್ ಆಲಿ ಲಂಚ ಪಡೆಯುತ್ತಿದ್ದರು. ಇತ್ತೀಚೆಗೆ ಕುಡುಪು ಗ್ರಾಮದಲ್ಲಿ ಗಿರಿಧರ್ ಶೆಟ್ಟಿ ಜಾಗ ಖರೀದಿ ಮಾಡಿದ್ದರು. ಜಮೀನಿಗೆ ಟಿಡಿಆರ್ ನೀಡಲು ಮುಡಾ ಇಲಾಖೆಗೆ ಫೈಲ್ ವರ್ಗಾವಣೆಯಾಗಿತ್ತು. ಆದರೆ ಲಂಚಕ್ಕಾಗಿ ಮುಡಾ ಆಯುಕ್ತ ಫೈಲ್ ಅನ್ನು ಪೆಂಡಿಂಗ್ ಇಟ್ಟಿದ್ದರು. ನಂತರ ಗಿರಿಧರ್ ಶೆಟ್ಟಿ ಬಳಿ ನೇರವಾಗಿ 25 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ ದಲ್ಲಾಳಿ ಸಲೀಂ ಮೂಲಕ 25 ಲಕ್ಷ ರೂ. ಲಂಚ ಸ್ವೀಕಾರ ಮಾಡುವಾಗ ದಲ್ಲಾಳಿ ಸಲೀಂ ಮತ್ತು ಕಮಿಷನರ್ ಮನ್ಸೂರ್ ಸಿಕ್ಕಿಬಿದ್ದಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿhttps://chat.whatsapp.com/Jf6jZ0gyQAEA5GBRpHnkrvSubscribe YouTubehttps://youtube.com/@janataa24?si=XsFcych2GMH0O6GvKSRTC : ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಾರಿಗೆ ಬಸ್ಸಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ