Interpol: ಮೆಡಿಕೇರ್ ಹೆಸರಲ್ಲಿ ಡ್ರಗ್ಸ್ ಉತ್ಪಾದನಾ ಘಟಕ,9 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ.
Janataa24 NEWS DESK

ಹೈದರಾಬಾದ್: ತೆಲಂಗಾಣದಲ್ಲಿ ಮೆಡಿಕೇರ್ ಹೆಷರಿನ ಡ್ರಗ್ಸ್ ಉತ್ಪಾದನಾ ಘಟಕ ಬಂದ್. ಇಂಟರ್‌ಪೋಲ್ ಎಚ್ಚರಿಕೆಯ ಬೆನ್ನಲ್ಲೇ ಡ್ರಗ್ಸ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ (DCA) ಮತ್ತು ಅಬಕಾರಿ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಉತ್ಪಾದಿಸಿದ 8.99 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತೆಲಂಗಾಣದ ಸಂಗಾರೆಡ್ಡಿಯ ಬೊಲ್ಲಾರಂ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದೆ.
ಹೈದರಾಬಾದ್‌ನ ಹೊರವಲಯದಲ್ಲಿರುವ ಐಡಿಎ ಬೊಲ್ಲಾರಂನಲ್ಲಿರುವ ಪಿಎಸ್‌ಎನ್ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಕಸ್ತೂರ್ ರೆಡ್ಡಿ ನೆಮಲ್ಲಪುಡಿ ಎಂಬಾತ ಯೂರೋಪ್‌ಗೆ 3- ಎಂಎಂಸಿ ಮಾದಕ ವಸ್ತುವನ್ನು ಅಕ್ರಮವಾಗಿ ಉತ್ಪಾದಿಸಿ ರಫ್ತು ಮಾಡಲು ಮುಂದಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತೆಲಂಗಾಣದ ಡಿಸಿಎ(DCA) ಮತ್ತು ಅಬಕಾರಿ(Excise) ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಉತ್ಪಾದಿಸಿದ್ದ 8.99 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್(Drugs) ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಬಳಿಕ ಆ ಉತ್ಪಾದನಾ ಘಟಕವನ್ನು ಸೀಜ್ ಮಾಡಿದ್ದಾರೆ.
https://www.janataa24.com/sonu-srinivas-gowda-sonu-srinivas-gowda-is-in-legal-troublesonu-sriniva
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube 
https://youtube.com/@janataa24?si=XsFcych2GMH0O6Gv