ಪಾವಗಡ: ಇಮ್ರಾನ್ ಉಲ್ಲಾ

ಪಾವಗಡ ಪಟ್ಟಣದ ಪುರಸಭೆಯ ವ್ಯಾಪ್ತಿಯ ವಾರ್ಡಗಳಲ್ಲಿ 2021-22ನೇ ಸಾಲಿನ ನಗರೋತ್ತಾನ 04 ಯೋಜನೆಯ ಅನುದಾನದಲ್ಲಿ ಗುದ್ದಲಿ ಪೂಜೆ ನೆರೆವೇರಿಸಿ ನಂತರ ಮಾಧ್ಯಮದವರ ಬಳಿ ಮಾತನಾಡಿದ ಶಾಸಕ ವೆಂಕಟರವಣಪ್ಪ, ಇಂದು ಶನಿ ಮಹಾತ್ಮ ವೃತ್ತದಿಂದ ಕಣಿವೆ ನರಸಿಂಹ ಸ್ವಾಮಿ ದೇವಸ್ಥಾನದ ವರೆಗೆ 30 ಲಕ್ಷ ವೆಚ್ಚದ ಬೀದಿ ದೀಪ, ಸಿಸಿ ರಸ್ತೆ,ಚರಂಡಿಗಳು,ಟಾರ್ ರೋಡ್ ಇತರೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಕಳೇದ ಮೂರು ದಿನಗಳಿದ ಸುಮಾರು ಹತ್ತು ಕೋಟಿ ವೆಚ್ಚದಲ್ಲಿ 23 ವಾರ್ಡ್ ಗಳಲ್ಲಿ ನಗರೋತ್ತಾನ ಯೋಜನೆಯಡಿ ಪಾವಗಡ ಪಟ್ಟಣದ 17,16,18,19,23,22,20 ಮತ್ತು 15ನೇ ವಾರ್ಡ್ ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ. ಸಿಸಿ ರಸ್ತೆ, ಒಳಚರಂಡಿ, ನೂತನ ರಸ್ತೆಗೆ ಡಾಂಬರೀಕರಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರೆವರಿಸಿದ್ದೇನೆ ಎಂದರು.
ವಾರ್ಡ್ ಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಜನರು ನನ್ನ ಗಮನಕ್ಕೆ ತರಲಾಗಿದೆ ಪುರಸಭೆಯ ಸದಸ್ಯರ ಗಮನಕ್ಕೆ ಮತ್ತು ಅಧಿಕಾರಿಗಳು ಗಮನಕ್ಕೆ ತಂದು ತಕ್ಷಣ ಸಮಸ್ಯೆ ಬಗೆಹರಿಸಲು ತಿಳಿಸಿದ್ದೇನೆಂದರು.
ಕೊಳಚೆ ನಿರ್ಮೂಲನೆ ಆಡಿಯಲ್ಲಿ ನಿರ್ಮಾಣ ವಾಗುತ್ತಿರುವ ಮನೆಗಳು ಕೆಲವೊಂದು ತಡವಾಗುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಗುತ್ತಿಗೆದಾರ ಬದಲಾವಣೆ ಅಗಿರುವ ಹಿನ್ನೆಲೆಯಲ್ಲಿ ತಡವಾಗಿವೆ ತಕ್ಷಣವೇ ಸಂಬಂಧ ಪಟ್ಟಂತಹ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.
17 ನೇ ವಾರ್ಡ ಗೆ ಗುದ್ದಲಿ ಪೂಜೆಗೆ ಬಂದಂತಹ ಶಾಸಕರಿಗೆ ಕಾಂಗ್ರೆಸ್ ಯುವ ಮುಖಂಡ ವೆಂಕಟಮ್ಮನಹಳ್ಳಿಯ ನಾನಿ ಯವರು ಶಾಸಕರಿಗೆ ಅದ್ದೂರಿಯಾಗಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.
ಈ ವೇಳೆ ಪುರಸಭೆ ಅದ್ಯಕ್ಷೆ ಧನಲಕ್ಷ್ಮಿ,ಪುರಸಭೆ ಉಪಾಧ್ಯಕ್ಷ ಶಶಿಕಲಾ,ಮಾಜಿ ಪುರಸಭೆ ಅಧ್ಯಕ್ಷ ವೀಣಾ ಅಂಜನ್ ಕುಮಾರ್,ಮಾಜಿ ಪುರಸಭೆ ಅಧ್ಯಕ್ಷ ಸುಮಾ ಅನಿಲ್,ಎ.ಶಂಕರ್ ರೆಡ್ಡಿ.ಮಾಜಿ ಪುರಸಭೆ ಸದಸ್ಯ ಫಜ್ಲುಸಾಬ್,
ಪುರಸಭೆ ಸದಸ್ಯರಾದ ಸುದೇಶ್ ಬಾಬು,ಪ್ರಮೋದ್ ಕುಮಾರ್,ರಾಜೇಶ್,ಮಹಮದ್ ಇಮ್ರಾನ್,ನಿಸಾರ್ ಅಹಮದ್,ಅಲಿ,ವಿಜಯ್,ರಾಮಾಂಜಿನಪ್ಪ,ರಿಜ್ವಾನ್.ಷ ಬಾಬು ಇತರರು ಇದ್ದರು.