Janataa24 NEWS DESK
300 ವರ್ಷದ ಇತಿಹಾಸವುಳ್ಳ ಹಳೆಯ ದರ್ಗಾಕ್ಕೆ ಮೂಲಸೌಕರ್ಯ ಒದಗಿಸಿ ಕೊಡುವವರು ಯಾರು./ಸೈಯದ್ ಅಹಮದ್.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಜಡೆಯ ಮತ್ತು ದಾಸಿಹಳ್ಳಿ ಪಾಳ್ಯ ನಡುವೆ ಇರುವ ಮುಸ್ಲಿಂ ಸಮುದಾಯದ ದರ್ಗಾಕೆ ಮೂಲ ಸೌಕರ್ಯವಿಲ್ಲದೆ ಭಕ್ತಾದಿಗಳು ಪರದಾಡುವ ಪರಿಸ್ಥಿತಿ ಬಂದಿದೆ,
ಇನ್ನು ಈ ದರ್ಗಾ 300 ವರ್ಷಗಳ ಹಿಂದೆ ಸ್ಥಾಪಿತವಾದ ದರ್ಗಾ ವಾಗಿದ್ದು ಈ ದರ್ಗಾ ಕೆ ಕಳೆದ 20 ವರ್ಷಗಳಿಂದ ಸಾವಿರಾರು ಭಕ್ತಾದಿಗಳ ಸಂಖ್ಯೆ ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಭಕ್ತಾದಿಗಳು ಯಾವುದೇ ಜಾತಿ ಧರ್ಮದ ತಾರತಮ್ಯವಿಲ್ಲದೆ ಬಂದು ಇಲ್ಲಿ ಈ ದರ್ಗಾದಲ್ಲಿ ಪೂಜೆ ಸಲ್ಲಿಸಿ ಹೋಗುತ್ತಾರೆ.
ಆದರೆ ಇಲ್ಲಿಯ ಸಮಸ್ಯೆ ಏನೆಂದರೆ ಸಾವಿರಾರು ಭಕ್ತಾದಿಗಳು ಬಂದು ಹೋಗುವ ಈ ದರ್ಗಾದಲ್ಲಿ ಯಾವುದೇ ತರಹದ ಮೂಲ ಸೌಕರ್ಯ ವಿಲ್ಲ ,ಆದರೆ ಇಲ್ಲಿ ಪೂಜಾ ಪುರಸ್ಕಾರಗಳಿಗೆ ಬರುವ ಭಕ್ತಾದಿಗಳ ಅಲ್ಪ ಮಟ್ಟದ ಕಾಣಿಕೆ ನೀಡುವುದರಿಂದ ಸ್ವಲ್ಪಮಟ್ಟಿಗಾದರೂ ಸ್ವಚ್ಛತೆಯಾಗಲಿ ಪೂಜಾ ವಿಧಿ ವಿಧಾನಗಳಾಗಲಿ ಬಹಳ ಮಟ್ಟಿಗೆ ನಡೆಯುತ್ತದೆ,
ಆದರೆ ಇದರ ಸುತ್ತಮುತ್ತ ಇರುವ ಎಲ್ಲಾ ಹಳ್ಳಿಗಳಿಗೂ ಇಲ್ಲಿನ ಮಹತ್ವದ ಬಗ್ಗೆ ಅರಿವು ಕೂಡ ಆಗಿದೆ.
ಆದರೆ ಇದಕ್ಕೆ ಯಾವುದೇ ಮೂಲಸೌಕರ್ಯಗಳಿಲ್ಲದೆ ಬರುವ ಭಕ್ತಾದಿಗಳಿಗೆ ತೊಂದರೆ ಆಗುತ್ತಿದೆ ಎಂದು ಇಲ್ಲಿನ ಮೇಲ್ವಿಚಾರಕರಾದ ಸೈಯದ್ ಅಹಮದ್ ಅವರು ಇಲ್ಲಿ ಬರುವ ಭಕ್ತಾದಿಗಳಿಗಾಗಿ ನಮ್ಮ ಮಾಧ್ಯಮದ ಮುಖಾಂತರ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವರದಿ
ತುರುವೇಕೆರೆ: ಮಂಜುನಾಥ್ ಕೆ