Janataa24 NEWS DESK
ಪಾವಗಡ
ಪಾವಗಡ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಪರ ಪತ್ನಿ ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಮಹಿಳೆಯರಿಂದ ಅಭೂತಪೂರ್ವ ಸ್ಫಂದನೆ.

ಮಾದ್ಯಮ ಬಳಿ ಮಾತನಾಡಿ ಇದೇ ಮೊದಲ ಬಾರಿ ರಾಜಕೀಯ ಪ್ರಚಾರಕ್ಕೆ ಬಂದಿದ್ದೆನೆ ಈಗಾಗಲೇ ತಾಲೂಕಿನ ಬಹಳಷ್ಟು ಗ್ರಾಮಗಳಲ್ಲಿ ಮನೆ ಮನೆಗೆ ಹೋಗಿ ನಮ್ಮ ಪತಿ ಹೆಚ್.ವಿ.ವೆಂಕಟೇಶ್ ರವರ ಪರ ಮತ ಕೇಳುತ್ತಿದ್ದೆನೆ.
ಎಲ್ಲರೂ ಮನೆ ಮಗಳ ರೀತಿಯಲ್ಲಿ ಮನೆಗೆ ಕರೆದು ಉತ್ತಮ ಸ್ಫಂದನೆ ನೀಡುತ್ತಿದ್ದಾರೆ.
ನನ್ನ ಪತಿ ಗೆದ್ದರೆ ಮಹಿಳೆಯರಿಗೆ ಗಾರ್ಮೆಂಟ್ಸ್, ನಿರುದ್ಯೋಗ ಸಮಸ್ಯೆ ನಿವಾರಣೆ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ಶಶಿಕಲಾ ವೆಂಕಟೇಶ್ .
ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತಯಾಚನೆ ಮಾಡುತ್ತಿದ್ದು ಎಲ್ಲಿ ಹೋದರೂ ಕ್ಷೇತ್ರದ ಜನತೆ ಅಭೂತಪೂರ್ವ ಸ್ವಾಗತ ಕೋರಿ ಆಶೀರ್ವಾದ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಪತ್ನಿ ಶಶಿಕಲಾ ವೆಂಕಟೇಶ್ ತಿಳಿಸಿದರು.
ಸೋಮವಾರ ಪಟ್ಟಣದ 17ನೇ ವಾರ್ಡ್ನಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಕ್ಷೇತ್ರದ ಜನತೆ ನನ್ನನ್ನ ಮನೆ ಮಗಳಂತೆ ಕಂಡು ಅರಿಶಿಣ ಕುಂಕುಮ ನೀಡಿ ಬೆಂಬಲ ಸೂಚಿಸುತ್ತಿದ್ದು ನನ್ನ ತವರು ಮನೆಗೆ ಬಂದAತಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ನನ್ನ ಪತಿ ಪಾವಗಡದಿಂದ ಶಾಸಕರಾಗಿ ಆಯ್ಕೆಯಾದರೆ ಮಹಿಳೆಯರಿಗೆ ಗಾರ್ಮೆಂಟ್ಸ್, ಇಂಜಿನಿಯರಿAಗ್, ಡಿಪ್ಲೋಮಾ ಕಾಲೇಜು ತಂದು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಶ್ರಮಿಸುತ್ತಾರೆ.
ಕಾಂಗ್ರೆಸ್ ಪಕ್ಷ ಬಡವರ ಏಳಿಗೆಗಾಗಿ ಜಾರಿಗೆ ತಂದAತಹ ಎಲ್ಲಾ ಯೋಜನೆಗಳು ಜನಪರವಾಗಿದ್ದು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವಂತೆ ಗೃಹಜ್ಯೋತಿ, ಗೃಹಲಕ್ಷಿ, ತಲಾ 10 ಕೆ.ಜಿ.ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೇರಿದಂತೆ ಇನ್ನೂ ಅನೇಕ ಯೋಜನೆಗಳು ಜಾರಿಯಾಗಲಿವೆ ಎಂದರು.
ನನ್ನ ಪತಿ ಕುಟುಂಬ ಕ್ಕಿಂತ ಸಮಾಜ ಸೇವೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ. ಕಷ್ಟ ಅಂತ ಬಂದವರಿಗೆ ಸಹಾಯಹಸ್ತ ಚಾಚಿ ಧೈರ್ಯ ತುಂಬಿದ್ದು ನಾನು ಕಣ್ಣಾರೆ ಕಂಡಿದ್ದೇನೆ. 2013ರ ಚುನಾವಣೆಯಲ್ಲಿ ನನ್ನ ಪತಿ ಪರಾಭವಗೊಂಡಿದ್ದರು. ಈ ಬಾರಿ ಕ್ಷೇತ್ರದ ಜನತೆ ನಮ್ಮ ಕೈ ಹಿಡಿಯಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಧನಲಕ್ಷಿ. ಮಾಜಿ ಅಧ್ಯಕ್ಷೆ ಸುಮಾ ಅನಿಲ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಉಷಾರಾಣಿ, ಎನ್.ಟಿ.ಲತಾ, ಸುಶೀಲಮ್ಮ, ಸುಮಂಗಳಮ್ಮ, ಮತ್ತಿತರರು ಇದ್ದರು.
ವರದಿ
ಪಾವಗಡ:ಇಮ್ರಾನ್ ಉಲ್ಲಾ.