ಹಾಲು ಕಲಬೆರಿಕೆ ಮಾಡಿದವರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ: ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ.

ಹಾಲು ಕಲಬೆರಿಕೆ ಮಾಡಿದವರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟಿಸಲಾಯಿತು.

Janataa24 NEWS DESK

VideoCapture 20230525 164758






ಮಧುಗಿರಿ: ನಂದಿನಿ ಹಾಲನ್ನು ಕಲಬೆರಿಕೆ ಮಾಡಿ ರೈತರಿಗೆ ಹಾಗೂ ಹಾಲು ಉತ್ಪಾದಕರಿಗೆ ವಂಚಿಸುತ್ತಿದ್ದವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ. ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.



ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ನೂರಾರು ರೈತರು ತಮ್ಮ ರಾಸುಗಳೊಂದಿಗೆ ಮೆರವಣಿಗೆ ನಡೆಸಿ ನಂತರ (ಡಿ ವೈ ಎಸ್ ಪಿ )ಪೊಲೀಸ್ ಉಪಾಧ್ಯಕ್ಷಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.



ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ ಮಾತನಾಡಿ ಕಳೆದ ಆರು ತಿಂಗಳ ಗಳಿಂದ ಮಧುಗಿರಿ ತಾಲೂಕಿನ ರೈತರಿಗೆ ವಂಚಿಸಿ ಕಳಪೆ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡಿದ ಟ್ಯಾಂಕರ್ ಚಾಲಕ ಹಾಗೂ ಸಹಾಯಕರನ್ನು ತನಿಖೆಗೆ ಒಳಪಡಿಸಿ ಈ ಕೃತ್ಯದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಬಯಲಿಗಳಿದು ರೈತರಿಗೆ ಆಗಿರುವ ಸುಮಾರು 1.5 ಕೋಟಿ ರೂಗಳಷ್ಟು ನಷ್ಟವನ್ನು ವಸೂಲಿ ಮಾಡಬೇಕೆಂದು ಆಗ್ರಹಿಸಿದರು.



ತುಮುಲ್ ಮಾಜಿ ಅಧ್ಯಕ್ಷ ಬಿ ನಾಗೇಶ್ ಬಾಬು ಮಾತನಾಡಿ ಈ ಇಂದಿನಿಂದಲೂ ಮದುಗಿರಿ ತಾಲೂಕಿನಲ್ಲಿ ಹಾಲಿನ ಗುಣಮಟ್ಟ ಉತ್ತಮ ದರ್ಜೆಯಿಂದ ಕೂಡಿತ್ತು. ಆದರೆ ಕಳೆದ ಆರು ತಿಂಗಳಿಂದ ಕೆಲವರು ಹಾಲಿಗೆ ನೀರು ಹಾಗು ಉಪ್ಪನ್ನು ಬೆರೆಸಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಮಸಿ ಬೆಳೆಯಲು ಪ್ರಯತ್ನಿಸಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿಸತರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ನೀಡುವಂತೆ ಒತ್ತಾಯಿಸಿದರು.



ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್ ಗಂಗಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿ ನಾರಾಯಣ ರೆಡ್ಡಿ. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಇಂದಿರಾ ದಿನೇನಾಯ್ಕ್, ಮಾಜಿ ಸದಸ್ಯ ಸುವರ್ಣಮ್ಮ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದಾಪುರ ರಂಗಶಾಮಣ್ಣ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ ಕೃಷ್ಣಾರೆಡ್ಡಿ. ದಬ್ಬೇಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾರತಿ ಸಿದ್ದೇಶ್, ಪುರಸಭಾ ಮಾಜಿ ಅಧ್ಯಕ್ಷ ಆಯುಬ್, ಸದಸ್ಯರುಗಳಾದ ಎಸ್. ಪಿ. ಟಿ ರಾಮಣ್ಣ, ಮುಖಂಡರಾದ ತುಂಗೋಟಿ ರಾಮಣ್ಣ, ಜೀಪಂ ಮಾಜಿ ಸದಸ್ಯ ಚೌಡಪ್ಪ, ಕರವೇ ಪಾಂಡುರಂಗಯ್ಯ, ಚಿಕ್ಕಮಾಲೂರು ಶಿವಕುಮಾ ರ್ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಮ್ಮ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರೈತರು ಹಾಜರಿದ್ದರು.

ವರದಿ

ಮಧುಗಿರಿ: ಆಬಿದ್

Leave a Reply

Your email address will not be published. Required fields are marked *