Janataa24 NEWS DESK

ಶಿಕ್ಷಕರು ಮಕ್ಕಳಿಗೆ ಓದಿನ ಜೊತೆಯಲ್ಲಿ ಜೀವನದ ಪಾಠವನ್ನು ಹೇಳಿಕೊಡಬೇಕು ಆಗಲೇ ಜೀವನದ ಹಂಗು ಕಲಿಯುವಂತೆ ಯಾಗುತ್ತದೆ:ಉಪ ಲೋಕಯುಕ್ತ ನ್ಯಾ ಕೆ.ಎನ್.ಫಣೀಂದ್ರರವರು.
ಪಾವಗಡ ಪಟ್ಟಣದ ಶತಮಾನ ಕಂಡ ಶಾಲೆಯಾದ ಸರ್ಕಾರಿ ಮಾದರಿ ಹಿರಿಯ ಬಾಲಕರ ಪಾಠ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಶೈಕ್ಷಣಿಕ ವರ್ಷದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮ ದತ್ತು ಪಡೆದಿರುವ ಶಾಲೆಗಳ ಸುಮಾರು 500 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಬ್ಯಾಗ್ ಮತ್ತಿತರ ಕಲಿಕಾ ಸಾಮಗ್ರಿಗಳ ವಿತರಣೆ ಹಾಗೂ ನೂತನ ಅಡಿಗೆ ಕೋಟೆಗೆ ಗುದ್ದಲಿ ಪೂಜೆ ನೆರೆವಹಿಸಿ ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ.
ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ಮಾಡಬೇಕಾದರೆ ಪೋಷಕರ ಗಿಂತ ಶಿಕ್ಷಕರ ಪಾತ್ರ ಅತಿ ಮುಖ್ಯವಾದದ್ದು.
ಮೂಲಭೂತ ಸೌಕರ್ಯ ಕೊರತೆಯ ಬಗ್ಗೆ ಅಲ್ಲಿನ ಸ್ಥಳೀಯ ಅಧಿಕಾರಿಗಳು ಮನದಟ್ಟು ಮಾಡಿದಾಗ ಮಾತ್ರ ಉತ್ತಮ ಶಾಲೆ, ಉತ್ತಮ ವಾತಾವರಣ ನಿರ್ಮಿಸಬಹುದು.
ಭ್ರಷ್ಟಾಚಾರ ತೊಲಗಿಸಲು ಪ್ರತಿಯೊಬ್ಬರು ನಿಷ್ಠೆ ಅವರ ಜವಾಬ್ದಾರಿ ಮರೆದರೆ ಆಗಲೇ ಭ್ರಷ್ಟಾಚಾರ ಎಂಬ ಪಿಡುಗು ತೊಲಗಿಸಲು ಸಾಧ್ಯ.
ಮಾಧ್ಯಮ ಎಂದರೆ ಬಹು ದೊಡ್ಡ ಜವಾಬ್ದಾರಿ ಉಳ್ಳ ಸಂಸ್ಥೆ ನ್ಯಾಯಾಂಗ ಶಾಸಕಾಂಗ ಹಾಗೂ ಕಾರ್ಯಾಂಗ ಇವುಗಳು ಮೂರು ಅಂಗಳ ತಪ್ಪುಗಳನ್ನು ಎತ್ತಿ ಹಿಡಿಯುವಂತಹ ಏಕೈಕ ಜವಾಬ್ದಾರಿ ಉಳ್ಳ ಸಂಸ್ಥೆ ಎಂದರೆ ಅದು ಮಾಧ್ಯಮ ಸಂಸ್ಥೆ ಮಾತ್ರ ಎಂದರು.
ಶತಮಾನ ಕಂಡ ಶಾಲೆಗೆ ಬಗ್ಗೆ ನಾನು ಸಂಪೂರ್ಣ ವೀಕ್ಷಣೆ ಮಾಡಿದ್ದೇನೆ ಬಹಳಷ್ಟು ಲೋಪಗಳು ಕಂಡುಬಂದಿವೆ. ಮಕ್ಕಳಿರುವಂತ ಪ್ರದೇಶ ಉತ್ತಮವಾಗಿರಬೇಕು ಹಾಗಾಗಿ ಸಂಬಂಧಪಟ್ಟ ಮೇಲೆ ಅಧಿಕಾರಿಗಳು ಸಂಪೂರ್ಣ ಕಟ್ಟಡ ಕೆಡವಿ ನೂತನಕ್ಕೆ ಕಟ್ಟಡ ನಿರ್ಮಾಣ ಮಾಡಲು ನಾನು ಮೇಲಾಧಿಕಾರಿಗಳು ಗಮನಕ್ಕೆ ತರುತ್ತೇನೆ ಎಂಬುದಾಗಿ ಸಭೆಯಲ್ಲಿ ತಿಳಿಸಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಜಪಾನಂದ ಸ್ವಾಮೀಜಿ ಅವರು ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ನೂತನ ಶೈಕ್ಷಣಿಕ ವರ್ಷದ ಅನ್ವಯ ತಾಲೂಕಿನ ಸರ್ಕಾರಿ 5 ಶಾಲೆಗಳು ದತ್ತು ಪಡೆದು ಅಲ್ಲಿನ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಬ್ಯಾಗು ಮತ್ತು ಇತರ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಿಕೊಂಡು ಬರಲಾಗುತ್ತಿದೆ.
ಸರ್ಕಾರ ಯಾವ್ಯಾವ ವಿಚಾರಕ್ಕೆ ಲಕ್ಷಾನುಗಟ್ಟಲೆ ವೆಚ್ಚ ಮಾಡುವ ರೀತಿಯಲ್ಲಿ . ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹತ್ತು ಹಲವು ತರದ ಕಾರ್ಯಕ್ರಮಗಳು ಹಮ್ಮಿಕೊಂಡು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಈ ವೇಳೆ ಗೌತಮ್ ರಾಜೇಂದ್ರ ಪೊಲೀಸ್ ಉಪ ಅಧೀಕ್ಷಕರು. ಕರ್ನಾಟಕ ಲೋಕಾಯುಕ್ತ. ಆರ್ ಮಂಜುನಾಥ್ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಶೈಕ್ಷಣಿಕ ಜಿಲ್ಲೆ. ಅಶ್ವಥ್ ನಾರಾಯಣ್ ಕ್ಷೇತ್ರ ಶಿಕ್ಷಣಾಧಿಕಾರಿಗಳು.ಮುಖ್ಯಶಿಕ್ಷಕ ಗಂಗಪ್ಪ. ಹಾಗೂ ಇತರೆ ಹಲವು ಮಂದಿ ಇದ್ದರು.
ವರದಿ
ಇಮ್ರಾನ್ ಉಲ್ಲಾ:ಪಾವಗಡ