Document

ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಗೆ ಖಂಡನೆ

ಬೆಳಗಾವಿ: ರವಿ ಬಿ ಕಾಂಬಳೆ

ಹುಕ್ಕೇರಿ: ನಿಪ್ಪಾಣಿಯಲ್ಲಿ ನಡೆದ ಮನೆ ಮನೆಗೆ ಬುದ್ದ ಬಸವ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಯಮಕನಮರಡಿ ಶಾಸಕರಾದ ಸತೀಶ್ ಜಾರಕಿಹೊಳಿ ಹಿಂದೂ ಪದ ಎಂಬ ಶಬ್ದವು ಇದು ಭಾರತ ದೇಶಕ್ಕೆ ಸಂಬಂಧವಿಲ್ಲದ ಪದ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಇಂದು ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಹುಕ್ಕೇರಿ ತಾಲೂಕಾ ವಿವಿಧ ಹಿಂದೂ ಪರ ಸಂಘಟನೆಗಳು ಸೇರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ ನಾಯಿಕ ಸತೀಶ್ ಜಾರಕಿಹೊಳಿ ಅವರು ಹಿಂದೂ ಪದದ ಬಗ್ಗೆ ಸವಿಸ್ತಾರವಾಗಿ ತಿಳಿದು ಮಾತಾಡಬೇಕು ಮತ್ತು ಈ ಶಬ್ದ ಬಳಿಸಿದ ಕಾರಣಕ್ಕೆ ಸತೀಶ್ ಜಾರಕಿಹೊಳಿ ಕ್ಷಮೆ ಕೇಳಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

WhatsApp Image 2022 11 09 at 2.17.07 PM

ಈ ಸಂದರ್ಭದಲ್ಲಿ ಅಜೀತ ಭಜಂತ್ರಿ, ಬೀರಪ್ಪಾ, ಬಣ್ಣಕ್ಕ ಗೋಳ್, ವಿನೋದ ಮರಡಿ, ವೈಭವ ಪವಾರ್, ದುಂಡಯ್ಯ ಮಠಪತಿ, ಹಲವಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

Document

Leave a Reply

Your email address will not be published. Required fields are marked *