ಮಧುಗಿರಿ:ಅಭಿದ್

ಶ್ರೀ. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಮಧುಗಿರಿ ತಾಲೂಕು ಘಟಕದ ವತಿಯಿಂದ “ರಾಷ್ಟ್ರಪತಿ ಪದಕ ವಿಜೇತರಾದ ಶ್ರೀ ವೆಂಕಟೇಶ್ ನಾಯ್ಡು “ ರವರನ್ನು, ತಾಲೂಕು ಅಧ್ಯಕ್ಷರಾದ ಪಾಂಡುರಂಗಯ್ಯನವರ ಅಧ್ಯಕ್ಷತೆಯಲ್ಲಿ ಮತ್ತು ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಅಭಿದ್ ಹಾಗೂ ಶ್ರೀ. ನಾರಸೀಯಪ್ಪ ಸಂಜೀವ್ ಪುರ ಸಹಯೋಗದೊಂದಿಗೆ ಶುಭ ಕೋರಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಘಟಕದ ಗೌರವಾಧ್ಯಕ್ಷರಾದ ಮುಜಾಮಿಲ್, ನಗರ ಘಟಕ ಅಧ್ಯಕ್ಷರಾದ ಶಂಕರ್. ಪಿ.ಹಾಗೂ ಅಲ್ಪಸಂಖ್ಯಾತರ ಘಟಕದ ನಗರ ಅಧ್ಯಕ್ಷ ಮುಬಾರಕ್ ಆಟೋ ಚಾಲಕ ಸಂಘದ ಅಧ್ಯಕ್ಷರಾದ ನಟರಾಜ ರವರು, ಉಪಾಧ್ಯಕ್ಷರಾದ ಅರುಣ್ ಕುಮಾರ್, ವಕೀಲರಾದಂತ ಶಿವಕುಮಾರ್ ತೆರಿಯೂರು, ಹಾಗೂ ಶ್ರೀನಿವಾಸ್ ರವರು, ಹಾಗೂ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು…
