ಮೂರು ತಿಂಗಳಿಂದ ಶಿಕ್ಷಕರಿಗಿಲ್ಲ ಸಂಬಳ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಿಕ್ಷಕರು ಬಲಿ

Janataa24 NEWS DESK

IMG 20230518 WA0005


ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಡಿಯಲ್ಲಿ ಸರ್ವ ಶಿಕ್ಷಣ ಅಭಿಯಾನ ಅಡಿಯಲ್ಲಿ ಕರ್ತವ್ಯ ನಿರ್ವಸುತ್ತಿರುವ ಶಿಕ್ಷಕರಿಗೆ ಮೂರು ತಿಂಗಳ ವೇತನ ಆಗಿಲ್ಲ ಶಿಕ್ಷಕರ ಗೋಳು ವಿಚಾರಿಸೋರೆ ಇಲ್ಲ.



ಪಾವಗಡ: ಸರ್ವ ಶಿಕ್ಷಣ ಅಭಿಯಾನ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪಾಡು ಹೇಳತೀರದು.

ಕಳೆದ ಮೂರು ತಿಂಗಳಿಂದ ಸಂಬಳ ಇಲ್ಲ ಸಾಲದ ಇಎಂಐ ಕಟ್ಟಿಲ. ಮನೆ ಸಾಲ ಕಟ್ಟಿಲ್ಲ, ಮಕ್ಕಳ ಶಾಲೆ ಪ್ರಾರಂಭವಾಗುತ್ತಿದೆ ಹತ್ತಾರು ಸಮಸ್ಯೆಗಳು ಎದುರಿಸುತ್ತಿರುವ ಸರ್ವ ಶಿಕ್ಷಣ ಅಭಿಯಾನದ ಶಿಕ್ಷಕರು.


ತಾಲೂಕಿನಲ್ಲಿ ಸುಮಾರು 150 ರಿಂದ 200 ಶಿಕ್ಷಕರು ಈ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು ಈಗಾಗಲೇ ಎಸ್ ಎಸ್ ಎಲ್ ಪರೀಕ್ಷೆ 2023ನ ಲೋಕಸಭಾ ಚುನಾವಣೆ ಇತರೆ ಕೆಲಸಗಳು ಮಾಡಿ ಮುಗಿಸಿ ಬಂದಿದ್ದೇವೆ. ಆದರೂ ಮೂರು ತಿಂಗಳ ಸಂಬಳ ಇಲ್ಲದೆ ಬಹಳಷ್ಟು ಸಮಸ್ಯೆಗೆ ಈಡಾಗಿದ್ದೇವೆ ಎಂಬುದಾಗಿ ಶಿಕ್ಷಕರ ಅಳಲು ತೊಡಿಕೊಳ್ಳುತ್ತಿದ್ದಾರೆ.


ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವೇತನ ಆಗಿದೆ ಆದರೆ ಪಾವಗಡ ತಾಲೂಕಲ್ಲಿ ಮಾತ್ರ ಇಂಥ ಸಮಸ್ಯೆ ಎದುರಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಶಿಕ್ಷಕರ ಬ್ಯಾಂಕ್ ವ್ಯವಹಾರದ ಸಿಬಿಲ್(CIBIL) ಕಡಿಮೆ ಯಾಗಲು ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳೆ ಹೊಣೆಗಾರಿಕೆ.


ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತಂದರೆ ತಾಂತ್ರಿಕ ದೋಷದಿಂದ ಸಮಸ್ಯೆ ಉಂಟಾಗಿದೆ ಎಂಬುದಾಗಿ ಈಗಾಗಲೇ ಕಳೆದ ವಾರದಿಂದಲೂ ಹೇಳಿಕೊಂಡು ಬರುತ್ತಿದ್ದಾರೆ.ಈಗ ಆಗುತ್ತೆ ಇನ್ ಸ್ವಲ್ಪ ವೇಳೆಗೆ ಆಗುತ್ತೆ ಎಂಬುದಾಗಿ ಸಬೂಬು ಹೇಳಿಕೊಂಡು ಬರುತ್ತಿರುವ ಮೇಲಾಧಿಕಾರಿಗಳು.


ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಶಿಕ್ಷಕರ ವೇತನ ಮಾಡಿಕೊಂಡಲು ಮುಂದಾಗಬೇಕಾಗಿದೆ.

ವರದಿ

ಪಾವಗಡ: ಇಮ್ರಾನ್ ಉಲ್ಲಾ.

Leave a Reply

Your email address will not be published. Required fields are marked *