ಕೊರಟಗೆರೆ: ನವೀನ್ ಕುಮಾರ್

ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಮಾಜಿ ಶಾಸಕ ಗಂಗಹನುಮಯ್ಯನವರ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಗಂಗಹನುಮಯ್ಯನವರ ಹೆಸರಿನಲ್ಲಿ ಸಂಘವನ್ನು ಸ್ಥಾಪಿಸಿಕೊಂಡು ಸುಮಾರು 10 ತಂಡಗಳನ್ನು ರಚನೆ ಮಾಡಿಕೊಂಡು ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗಂಗಹನುಮಯ್ಯನವರ ಪರವಾಗಿ ಕೊರಟಗೆರೆ ಕ್ಷೇತ್ರದಾದ್ಯಂತ ಚುನಾವಣಾ ಅಭಿಯಾನವನ್ನು ಪ್ರವಾಸ ಮಾಡುತ್ತಾ ಪ್ರಚಾರಪಡಿಸುತ್ತಿದ್ದು ಕಂಡು ಬಂದಿತು.
ದಲಿತ ಮುಖಂಡರಾದ ಲಕ್ಷಮ್ಮ ಈರಣ್ಣನವರು ಮಾಧ್ಯಮ ಗಳೊಂದಿಗೆ ಮಾತನಾಡಿ ನಾವು ಮಾಜಿ ಶಾಸಕರಾದ ಗಂಗಹನುಮಯ್ಯನವರ ಅಭಿಮಾನಿಗಳಾಗಿದ್ದು ಅವರ ಶಾಸಕರಾಗಿದ್ದ ಅವಧಿಯಲ್ಲಿ ಹಲವಾರು ಜನಪರ ಕಾಳಜಿಯ ಕೆಲಸಗಳನ್ನು ಮಾಡಿದ್ದಾರೆ ಅವರು ಬಡ ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದು ಈ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಪಕ್ಷದ ಅಭ್ಯರ್ಥಿಯಾಗಿ ಸುಮಾರು 45 ಸಾವಿರ ಮತಗಳನ್ನು ಪಡೆದಿದ್ದವರು ಕ್ಷೇತ್ರದ ವ್ಯಾಪ್ತಿಯಲ್ಲಿ ತಾವು ಹಾಗೂ ತಮ್ಮ ಮಗ ಮಾರುತಿ ಗಂಗಹನುಮಯ್ಯನವರು ಉತ್ತಮ ಭಾಂಧವ್ಯ ಇಟ್ಟುಕೊಂಡಿದ್ದು ಕ್ಷೇತ್ರದಲ್ಲಿ ಎಲ್ಲ ಸಮುದಾಯದ ವಿಶ್ವಾಸ ಗಳಿಸಿದ್ದು ನಾವು ಕ್ಷೇತ್ರದ ವ್ಯಾಪ್ತಿಯಲ್ಲಿ ಗಂಗಹನುಮಯ್ಯನವರ ಪರವಾಗಿ ಮತಯಾಚಿಸುತ್ತಿರುವ ಸಂಧರ್ಭದಲ್ಲಿ ಎಲ್ಲಾ ಸಮುದಾಯದವರು ಗಂಗಹನುಮಯ್ಯನವರ ಕುಟುಂಬದ ಜೋತೆಗಿರುವುದು ತಿಳಿದುಬರುತ್ತಿದೆ ಹಾಗೂ ಈ ಹಿಂದೆ ಸ್ಪರ್ಧಿಸಿದ್ದಾಗಿಂದಿನಿಂದ ಇಲ್ಲಿಯವರೆಗೂ ನಿರಂತರವಾದ ಸಂಪರ್ಕ ಇಟ್ಟುಕೊಂಡಿದ್ದು ಅವರ ಕಷ್ಟ-ಸುಖದಲ್ಲಿ ಭಾಗಿಯಾಗುತ್ತಿದ್ದಾರೆಂದು ಮತದಾರ ಪ್ರಭುಗಳು ತಿಳಿಸುತ್ತಿದ್ದು ನಾವು ಹೊದಲ್ಲೆಲ್ಲ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಅರಸಪ್ಪ ಮಾತನಾಡಿ ಗಂಗಹನುಮಯ್ಯನವರ ಕುಟುಂಬದ ಭಾರತೀಯ ಜನತಾ ಪಕ್ಷಕ್ಕಾಗಿ ದುಡಿಯುತ್ತಿದ್ದು ತುಮಕೂರು ಜಿಲ್ಲೆಯಲ್ಲಿ ದಲಿತ ಸಮುದಾಯ ಮುಖಂಡತ್ವ ವಹಿಸಿದ್ದು ಬಿ.ಜೆ.ಪಿ ಜೊತೆಯಲ್ಲಿ ದಲಿತ ಸಮುದಾಯಗಳು ಗಟ್ಟಿಯಾಗಿ ಬೆಸೆದುಕೊಂಡಿದೆ ಎನ್ನುವುದನ್ನು ತೋರಿಸಿದ್ದಾರೆ ಗಂಗಹನುಮಯ್ಯನವರನ್ನು ಈ ಹಿಂದೆ ಮಧುಗಿರಿ ಕ್ಷೇತ್ರದಿಂದ ಗೆಲ್ಲಿಸಿದ್ದೆವು ಈಗಲೂ ಅವರಿಗೆ ಟಿಕೇಟ್ ನೀಡುತ್ತಾರೆ ನಮಗೆ ಭರವಸೆಯಿದೆ ಕುಟುಂಬದಲ್ಲಿ ಒಬ್ಬರಿಗೆ ಕೊರಟಗೆರೆ ಕ್ಷೇತ್ರದಿಂದ ಬಿ.ಜೆ.ಪಿ ಪಕ್ಷದಿಂದ ಟಿಕೇಟ್ ನೀಡುತ್ತಾರೆ ಅನುಮಾನ ಬೇಡ ನಾವು ಜನಪರ ಕಾಳಜಿ ಯುಳ್ಳ ಸರಳ ಸಜ್ಜನಿಕೆಯ ರಾಜಕಾರಣಿಗಳು ಆದ ಗಂಗಹನುಮಯ್ಯ ಅವರನ್ನು ಕೊರಟಗೆರೆ ಕ್ಷೇತ್ರದಲ್ಲಿ ಗೆಲ್ಲಿಸಿಯೇ ತೀರುತ್ತೇವೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಕಾಳಪ್ಪ, ಅರಸಪ್ಪ, ರಂಗರಾಜು, ಪದ್ಮರಾಮಣ್ಣ, ರಾಧ ಚಿನರಂಗಯ್ಯ, ಸೇರಿದಂತೆ ಇತರೇ ಮುಖಂಡುಗಳು ಉಪಸ್ಥಿತರಿದ್ದರು.