Janataa24 NEWS DESK

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷದ ಮಹತ್ವದ ಘೋಷನೆಗಳಲ್ಲಿ ಬಹು ಮುಖ್ಯವಾದ ಯೋಜನೆಯಾದ “ಶಕ್ತಿ” ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಇಂದಿನಿಂದ ಪ್ರಾರಂಭವಾಯಿತು.
ಬಾದಾಮಿ ಮತಕ್ಷೇತ್ರದ ಶಾಸಕ ಯುವಮುಖಂಡ ಭೀಮಸೇನ ಚಿಮ್ಮನಕಟ್ಟಿ ಯವರು ಇಂದು ಕೆ.ಎಸ್. ಆರ್. ಟಿ. ಸಿ ಬಸ್ ಚಾಲನೆ ಮಾಡುವುದರ ಮೂಲಕ”” ಶಕ್ತಿ” ಯೋಜನೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕೆ. ಪಿ. ಸಿ ಸಿ. ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಮಹೇಶ್. ಎಸ್. ಹೊಸಗೌಡರ
ಮಹಿಳಾ ಪ್ರಯಾಣಿಕರಿಗೆ ಸಿಹಿ ಹಂಚಿ ಅವರ ಉಚಿತ ಪ್ರಯಾಣಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಆರ್. ಎಫ್. ಭಗವಾನ, ಕೆ. ಪಿ. ಸಿ. ಸಿ. ರಾಜ್ಯ ಮಾಧ್ಯಮ ವಕ್ತಾರ ಮಹಾಂತೇಶ್ ಹಟ್ಟಿ, ಎಂ. ಡಿ. ಎಲಿಗಾರ,,ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಹೊಸಮನಿ, ಕಾಂಗ್ರೆಸ್ ನ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆ ಶೈಲಾ ಚಟ್ಟರಕಿ,ಅನುಪಮಾ ಆನಂದ ದೊಡಮನಿ,,ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಿಂಗಪ್ಪ ಪೂಜೇರಿ ಸೇರಿದಂತೆ ಹಲವು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ವರದಿ
ಬಾಗಲಕೋಟೆ: ರಾಜೇಶ್. ಎಸ್. ದೇಸಾಯಿ