ಬೆಂಗಳೂರು: ಪುಲ್ವಾಮ ಹತ್ಯೆಗೆ ಸಂಭ್ರಮಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ ಫಯಾಜ್ ಗೆ 5 ವರ್ಷ ಜೈಲು ಖಾಯಂ

2019ನೆ ಇಸವಿ ಫೆಬ್ರವರಿ 14ರಂದು ಜೈಶ್ ಎ ಮೊಹ್ಮಮದ್ ಸಂಘಟನೆಯ ಆತ್ಮಹತ್ಯೆ ದಳದ ವಾಹನವೊಂದು ಭಾರತೀಯ ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನಕ್ಕೆ ಡಿಕ್ಕಿಯಾದ ಪರಿಣಾಮವಾಗಿ 40 ಜನ ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರು

762871 pulwama terror attack

2019ನೆ ಇಸವಿ ಫೆಬ್ರವರಿ 14ರಂದು ಜೈಶ್ ಎ ಮೊಹ್ಮಮದ್ ಸಂಘಟನೆಯ ಆತ್ಮಹತ್ಯೆ ದಳದ ವಾಹನವೊಂದು ಭಾರತೀಯ ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನಕ್ಕೆ ಡಿಕ್ಕಿಯಾದ ಪರಿಣಾಮವಾಗಿ 40 ಜನ ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರು.


ಈ ಸಂದರ್ಭದಲ್ಲಿ ಇಡೀ ಭಾರತ ದೇಶವೆ ಸಂಪೂರ್ಣ ಕಣ್ಣೀರಿನಲ್ಲಿ ಶೋಕಚರಣೆಯಲ್ಲಿರುವಾಗ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಾಮಾಚರಣೆ ಮಾಡಿ ತಮ್ಮ ವಿಕೃತಿ ಮತ್ತು ದೇಶದ್ರೋಹವನ್ನು ಮೆರೆದಿದ್ದರು ಈ ಸಂದರ್ಭವಾಗಿ ಬೆಂಗಳೂರಿನಲ್ಲಿಯು ಒಂದು ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ದಾಖಲಿಸಿಕೊಂಡಿತ್ತು, ಆ ಪ್ರಕರಣ ತೀರ್ಪು ಇಂದು ಹೊರಬಂದಿದೆ

2019ನೇ ಇಸವಿಯಲ್ಲಿ ನಡೆದ ಪುಲ್ವಾಮ ಭೀಕರ ಬಾಂಬ್ ಬ್ಲಾಸ್ಟ್ ನ ಬಗ್ಗೆ ಫೇಸ್ಬುಕ್ ನಲ್ಲಿ ಸಂಭ್ರಮಾಚರಣೆ ಮಾಡಿದ್ದ 23 ವರ್ಷದ ಫಯಾಜ್ ರಶೀದ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯೊಂದಿಗೆ 25000 ರೂಪಾಯಿಗಳ ದಂಡವನ್ನು ವಿಧಿಸಿದೆ

ಬೆಂಗಳೂರಿನ ಕಚಾರಕನಹಳ್ಳಿ ನಿವಾಸಿಯಾದ ಫಯಾಜ್ ರಶೀದ್ ನ್ಯಾಯಾಲಯದ ಈ ಆದೇಶವನ್ನು ಪಾಲಿಸದೆ ಹೋದ ಪಕ್ಷದಲ್ಲಿ ಮತ್ತೆ 6 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ಸಹ ನೀಡಲು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಲಯದ ನ್ಯಾಯಮೂರ್ತಿ ಸಿ.ಎಂ ಗಂಗಾಧರ ರವರು ತೀರ್ಪಿನಲ್ಲಿ ತಿಳಿಸಿದ್ದಾರೆ

ಘಟನೆ ನಡೆದ ಸಂದರ್ಭದಲ್ಲಿ ಫಯಾಜ್ ರಶೀದ್ ಮೂರನೆ ವರ್ಷದ ಇಂಜಿನಿಯರಿಂಗನಲ್ಲಿ ವ್ಯಾಸಂಗ ಮಾಡುತಿದ್ದ ಎಂಬ ಮಾಹಿತಿ ಇದ್ದು, ಘಟನೆ ನಡೆದ ಕೇವಲ ಮೂರೇ ದಿನಗಳಲ್ಲಿ ಬೆಂಗಳೂರು ಪೋಲಿಸರು ಫಯಾಜ್ ರಶೀದ್ ನನ್ನೀ ಬಂಧಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಫಯಾಜ್ ನ ಪರವಾಗಿ ವಾದಿಸಿದ್ದ ವಕೀಲರಿಗೆ ಕೋರ್ಟ್ ಬುದ್ದಿ ಹೇಳಿದೆ

ಇಂತಹ ಚಟುವಟಿಕೆಯನ್ನು ಫಯಾಜ್ ಬೇಕಂತಲೇ ಮಾಡಿದ್ದಾನೆ, ಯಾಕೆಂದರೆ ಆತ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ಆತನಿಗೆ ಅಕ್ಷರ ಜ್ಞಾನವಿದೆ, ಸಮಾಜಿಕ ಜಾಲತಾಣಗಳಲ್ಲಿ ಕೋಮು ಗಲಭೆ ಹೆಚ್ಚಾಗಲಿ ಎಂದು ಹಾಗೂ ದೇಶದ ಆಂತರಿಕ ಶಾಂತಿಯನ್ನು ಕದಡಲೆಂದೆ ಉದ್ದೇಶ ಪೂರ್ವಕವಾಗಿ ಮಾಡಿದ್ದಾನೆ ಎಂದು ಸರ್ಕಾರದ ಪರವಾಗಿ ವಾದಿಸಿದ ವಕೀಲರು ಕಾನೂನು ಬಾಹಿರ ಮತ್ತು ದೇಶದ್ರೋಹದ ಆರೋಪದಡಿ IPC 153A, 201,13,124A ಪ್ರಕಾರಈತನಿಗೆ ಐದು ವರ್ಷಗಳ ಕಾರಗೃಹ ಶಿಕ್ಷೆಯನ್ನು ನೀಡಿದೆ

Leave a Reply

Your email address will not be published. Required fields are marked *