Janataa24 NEWS DESK
ತುಮಕೂರು: ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ವಿರುದ್ಧ ಪ್ರಚಾರದ ನೆಪದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ ಕೇಳಿಬಂದಿದೆ.

ಗೋವಿಂದರಾಜು ಚುನಾವಣಾ ಪ್ರಚಾರಕ್ಕೆ ಮಹಿಳೆಯರನ್ನು ಕರೆಸುವ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸಹಸ್ರಾರು ಮಹಿಳೆಯರು ಟೌನ್ ಹಾಲ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವ ಗೋವಿಂದರಾಜು ಅವರಿಗೆ ಬಿ ಫಾರಂ ಕೊಡದೆ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಪ್ರತಿಭಟನಾನಿರತ ಮಹಿಳೆಯರು ಒತ್ತಾಯಿಸಿದರು.
ಈ ಸಂಬಂಧ ರೇಷ್ಮಾ ಎಂಬ ಮಹಿಳೆ ದೂರು ನೀಡಿದ್ದು, ಗೋವಿಂದರಾಜು ಮಾತನಾಡಿದ್ದು ಎನ್ನಲಾದ ಆಡಿಯೋ ಸಾಕ್ಷ್ಯಗಳನ್ನ ಒದಗಿಸಿದ್ದಾರೆ. ಅಲ್ಲದೇ, ಕುವೆಂಪು ನಗರದಲ್ಲಿರುವ ಗೋವಿಂದರಾಜು ನಿವಾಸದ ಮುಂದೆ ಗಲಾಟೆ ಮಾಡುವ ಮೂಲಕ ಹೈಡ್ರಾಮಾ ಸೃಷ್ಟಿಸಿದರು.
ಮಹಿಳೆ ಜೊತೆಗೆ ಅಶ್ಲೀಲ, ಅಸಭ್ಯವಾಗಿ ಗೋವಿಂದರಾಜು ಮಾತನಾಡಿರುವುದು ಆಡಿಯೋದಲ್ಲಿ ದಾಖಲಾಗಿದೆ. ಆದರೆ, ಈ ಆಡಿಯೋಗೂ ನನಗೂ ಸಂಬಂಧ ಇಲ್ಲ,. ಅದರಲ್ಲಿ ಇರುವುದು ನನ್ನ ಮಾತುಗಳಲ್ಲ, ಈ ಮಹಿಳೆ ಯಾರೆಂಬುದು ಗೊತ್ತಿಲ್ಲ, ಬಿಜೆಪಿ, ಕಾಂಗ್ರೆಸ್ ನವರ ಕುತಂತ್ರದಿಂದ ಆಡಿಯೋ ಹೊರಬಂದಿದೆ ಎಂದು ಗೋವಿಂದರಾಜು ತಿಳಿಸಿದ್ದಾರೆ.