Janataa24 NEWS DESK
ಸರ್ಕಾರದ ಯೋಜನೆಗಳಿಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪುರಸಭೆ ಕಚೇರಿಯಲ್ಲಿ ಎರಡು ಕೌಂಟರ್ ಪ್ರಾರಂಭಿಸಲಾಗಿದೆ: ಶಾಸಕ ಹೆಚ್.ವಿ.ವೆಂಕಟೇಶ್

ಪಾವಗಡ: ಪಟ್ಟಣದ ಪುರಸಭೆ ಕಚೇರಿಯಲ್ಲಿ ಶಾಸಕರಿಂದ ಗೃಹ ಲಕ್ಮೀ ಯೋಜನೆ ಚಾಲನೆ ನೀಡಿದರು.
ನಂತರ ಮೂರ್ನಾಲ್ಕು ಜನ ಮಹಿಳೆಯರಿಗೆ ಫಲಾನುಭವಿಗಳ ಆಯ್ಕೆಯಾದ ಪ್ರತಿ ನೀಡಿದರು.
ಸರತಿ ಸಾಲಲ್ಲಿ ನಿಂತು ಸರ್ಕಾರದು ಉಚಿತ ಯೋಜನೆಗಳನ್ನು ಪಡೆದುಕೊಳ್ಳುತ್ತಿರುವ ಮಹಿಳೆಯರು ಯಾವುದೇ ರೀತಿಯ ಹಣ ನೀಡುವಂತೆ ಇಲ್ಲ ಯೋಜನೆ ಪ್ರತಿಯೊಬ್ಬರೂ ಬಂದು ಸದುಪಯೋಗಪಡಿಸಿಕೊಳ್ಳಿ ಎಂದರು.
ಶಾಸಕ ಹೆಚ್.ವಿ.ವೆಂಕಟೇಶ್ ಮಾತನಾಡಿ ಪಟ್ಟಣದ ಪುರಸಭೆ ಕಚೇರಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳು ಪಡೆದುಕೂಳ್ಳಲು ಫಲಾನುಭವಿಗಳು ಅಲೆದಾಡುವ ಪರಿಸ್ಥಿತಿ ಉಂಟಾಗಬಾರದೆಂಬುದಾಗಿ ಪುರಸಭೆ ಕಚೇರಿಯಲ್ಲಿ ಎರಡು ಕೌಂಟರ್ ಗಳ ವ್ಯವಸ್ಥೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಇನ್ನು ಎರೆಡು ಕೌಂಟರ್ ವ್ಯೆವಸ್ಥೆ ಮಾಡಲು ಪುರಸಭೆ ಮುಖ್ಯಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪುರಸಭೆ ಸದಸ್ಯ ರಾಜೇಶ್ ನಮ್ಮ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹೊಸ ಐದು ಯೋಜನೆಗಳು ಜನರಿಗಾಗಿ ಮಾಡಿದ ಹಿನ್ನೆಲೆಯಲ್ಲಿ ಯೋಜನೆಗಳು ಪಡೆದುಕೊಳ್ಳಲು ಸಾರ್ವಜನಿಕರು ಅಲೆದಾಡುವ ಸಮಸ್ಯೆ ಹೋಗಲಾಡಿಸಲೆಂದು ಪುರಸಭೆ ಕಚೇರಿಯಲ್ಲೇ ಎರಡು ಕೌಂಟ್ ಗಳನ್ನು ಮಾಡಲಾಗಿದೆ ಇದರ ಸದುಪಯೋಗ ಪಟ್ಟಣದ 23 ವಾರ್ಡ್ ಗಳ ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಈ ಮೂಲಕ ತಿಳಿಸುತ್ತಿದ್ದೇನೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ವಿವಿಧ ಯೋಜನೆಗಳನ್ನು ತಂದಿದ್ದಾರೆ ಇವುಗಳನ್ನು ಪಡೆದುಕೊಳ್ಳಲು ಪುರಸಭೆ ಅವರು ಇಂತಹ ಒಂದು ಹೊಸ ಕೌಂಟರ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಆಚೆ ಇದನ್ನು ಮಾಡಿಸಲು ಹೋದಾಗ ಸುಮಾರು ವೆಚ್ಚವಾಗುತ್ತದೆ ಹಾಗಾಗಿ ಉಚಿತವಾಗಿ ಪುರಸಭೆ ಕಚೇರಿಯ ಈ ಅನುಕೂಲ ಎಲ್ಲರೂ ಸದುಪಯೋಗಪಡಿಸಿಕೊಳ್ಳಿ: ರಾಣಿ ಉಚಿತ ಯೋಜನೆ ಅರ್ಜಿ ಹಾಕಲು ಬಂದ ಮಹಿಳೆ ತಿಳಿಸಿದರು.
ಈ ವೇಳೆ ಪಾವಗಡ ಪುರಸಭೆಯ ಮುಖ್ಯಾಧಿಕಾರಿ ಶಂಷುದ್ದಿನ್, ವೆಂಕಟಮ್ಮನಹಳ್ಳಿ ಯುವ ಮುಖಂಡ ನಾನಿ.ತಿರುಮಣಿ ಗ್ರಾಮ ಪಂಚಾಯತಿ ಅಧ್ಯಕ್ಷ ಲೋಕೇಶ್ ಚೌಧರಿ. ಅಶೋಕ್. ಪ್ರಮೋದ್ ಕುಮಾರ್.ಹಾಗೂ
ಪುರಸಭೆ ಸದಸ್ಯರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಅಂಗನವಾಡಿ ಸೂಪರ್ ವೈಜರ್ ಗಳು.ಕಾರ್ಯಕರ್ತರು ಇದ್ದರು.
ವರದಿ
ಇಮ್ರಾನ್ ಉಲ್ಲಾ: ಪಾವಗಡ
ಹಾಗೆ ರೇಷನ್ ತಿದ್ದುಪಡೆ ಸೌಲಭ್ಯ ಒದಗಿಸಿದರೆ ಸಾರ್ವಜನಿಕರಿಗೆ ತುಂಬ ಅನುಕೂಲವಾಗುತ್ತದೆ