Janataa24 NEWS DESK

ಪಾವಗಡ
ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಹಿರಿಯ ಹಿರಿಯ ಮುಖಂಡರಾದ ಖಾಲಿದ್ ಅಹಮದ್.ತಮೀಜ್ ಉದ್ದೀನ್ ರವರ ನೂರಾರು ಬೆಂಬಲಿಗರು.
ಪಾವಗಡ ಪಟ್ಟಣದ ಹಿರಿಯ ಜೆಡಿಎಸ್ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ರವರ ಸಂಕುಲದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ನಂತರ ಸೇರ್ಪಡೆಗೊಂಡು ಮಾತನಾಡಿದ ಖಾಲಿದ್ ಅಹಮದ್ ನಾನು ಜೆಡಿಎಸ್ ಪಕ್ಷದಲ್ಲಿ ಕಳೇದ ಇಪ್ಪತ್ತು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದ ನನ್ನಗೆ ಪಕ್ಷದಲ್ಲಿ ಕಡೆಗಣಿಸಲಾಗಿದ್ದು ಅದರಿಂದ ಬೇಸತ್ತು ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾಗಿದ್ದೆನೆ.ಒಬ್ಬ ನಿಷ್ಠಾವಂತ ಕಾರ್ಯಕರ್ತರಿಗೆ ಆ ಪಕ್ಷದ ಹಿರಿಯರಿಂದ ಯಾವುದೇ ಗೊಂದಲ ಇರುವುದಿಲ್ಲ ಅದರೆ ಅದೇ ಪಕ್ಷದಲ್ಲಿ ಇರುವಂತಹ ಹಿಂಬಾಲಕರಿಂದ ಸಮಸ್ಯೆ ಉಂಟಾಗುತ್ತವೆ ಹೊರತು ಆ ಪಕ್ಷದ ಹಿರಿಯರಿಂದ ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು.
ನಾವು ಯಾವುದೇ ಹುದ್ದೆಗೆ ಆಸೆ ಪಡುವವರು ಅಲ್ಲ ಪಕ್ಷದಲ್ಲಿ ಸ್ಪಂದಿಸುವ ಕೆಲಸ ಮಾಡಿದರೆ ಸಾಕು.
ಕಾಂಗ್ರೆಸ್ ಅಭ್ಯರ್ಥಿ ಹೆ.ವಿ.ವೆಂಕಟೇಶ್ ರವರನ್ನು ಗೆಲ್ಲಿಸಲು ಸಂಪೂರ್ಣವಾಗಿ ದುಡಿಯುತ್ತೇವೆ ಎಂದರು.
ನಂತರ ತಮೀಜ್ ಉದ್ದೀನ್ ಮಾತನಾಡಿ ನಾನು ಕಳೇದ ಹದಿನೆಂಟು ವರ್ಷಗಳ ಕಾಲ ಹಗಲು ರಾತ್ರಿ ಜೆಡಿಎಸ್ ಪಕ್ಷಕ್ಕೆ ದುಡಿದ್ದಿದ್ದೆನೆ ಅದರೆ ಪಕ್ಷದಲ್ಲಿ ನಮ್ಮನ್ನು ಗುರ್ತಿಸುವಲ್ಲಿ ಸಂಪೂರ್ಣವಾಗಿ ವಿಫರಾಗಿದ್ದು.ಹಾಗಾಗಿ ಇಂದು ನಮ್ಮ ಕುಟುಂಬದ ಸುಮಾರು ನೂರು ಜನ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾಗಿದ್ದೆವೆ.ಮುಂದಿನ ದಿನಗಳಲ್ಲಿ ಅತಿಹೆಚ್ಚು ನಮ್ಮ ಸಮುದಾಯದ ಮತಗಳನ್ನು ಹಾಕಿಸುವ ಮೂಲಕ ವೆಂಕಟೇಶ್ ರವರಿಗೆ ಗೆಲ್ಲಿಸುತ್ತೇವೆ ಎಂದರು.
ಸಂದರ್ಭದಲ್ಲಿ ನೊರಾರು ಮಹಿಳೆಯರು ಸಹ ಸೇರ್ಪಡೆಗೊಂಡರು.
ಈ ವೇಳೆ ಮುಸ್ಲಿಂ ಸಮುದಾಯದ ಮುಖಂಡರಾದ ಫಜ್ಲುಸಾಬ್.ಆರ್.ನಿಸಾರ್.ರಿಜ್ವಾನ್ ಉಲ್ಲ.ಷ ಬಾಬು.ಪುರಸಭೆ ಸದಸ್ಯ ಮಹಮ್ಮದ್ ಇಮ್ರಾನ್.ಮಾನಂ ವೆಂಕಟಸ್ವಾಮಿ. ವಕೀಲ ಭಗವಂತಪ್ಪ.ಸುದೇಶ್ ಬಾಬು.ರಾಜೇಶ್. ರವಿ.ಇತರೆ ಅನೇಕ ಮಂದಿ ಇದ್ದರು.
ವರದಿ
ಪಾವಗಡ:ಇಮ್ರಾನ್ ಉಲ್ಲ.