ಕ್ಷೇತ್ರದ ಅಭಿವೃದ್ಧಿಗಾಗಿ ಸ್ಥಳೀಯರಿಗೆ ಆದ್ಯತೆ ನೀಡಿ : ಎಲ್ ಸಿ ನಾಗರಾಜ್

Janataa24 NEWS DESK

VideoCapture 20230420 155234

ಸುಮಾರು 20ರಿಂದ 25 ಸಾವಿರ ಕಮಲ ಪಡೆಯ ಕಾರ್ಯಕರ್ತರು ಎಲ್ ಸಿ ನಾಗರಾಜ್ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗಿಯಾಗಿ ಸಾಕ್ಷಿಯಾದರು.

ಕ್ಷೇತ್ರದ ಅಭಿವೃದ್ಧಿಗಾಗಿ ಸ್ಥಳೀಯರಿಗೆ ಆದ್ಯತೆ ನೀಡಿ : ಎಲ್ ಸಿ ನಾಗರಾಜ್ ಮತಬಾಂಧವರಲ್ಲಿ ಮತಯಾಚಿಸಿದರು.




ಮಧುಗಿರಿ: ಕ್ಷೇತ್ರದಲ್ಲಿ ಕೆ.ಎನ್. ರಾಜಣ್ಣ ಮತ್ತು ಎಂ.ವಿ. ವೀರಭದ್ರಯ್ಯ ಇಬ್ಬರೂ ನನಗೆ ಸಮಾನ ಎದುರಾಳಿಗಳು ಎಂದು ಬಿಜೆಪಿ ಅಭ್ಯರ್ಥಿ ಎಲ್.ಸಿ. ನಾಗರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು ಇಲ್ಲಿ ನಮಗೆ ಪ್ರಬಲ ಎದುರಾಳಿ ಎಂಬ ಪ್ರಶ್ನೆ ಬರುವುದಿಲ್ಲ. ರಾಜಣ್ಣ,ವೀರಭದ್ರಯ್ಯ ಇಬ್ಬರೂ ನಮಗೆ ಸಮಾನ ಸ್ನೇಹಿತರು, ಸಮಾನ ಎದುರಾಳಿಗಳು ಇವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಸ್ಥಳೀಯರಾದ ನಮಗೆ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.




90ರ ದಶಕದ ನಂತರದಿಂದ ಇಲ್ಲಿಯವರೆಗೂ ಮಳೆ ಕೈಕೊಟ್ಟ ಸಂದರ್ಭದಲ್ಲಿ ಭೂಮಿಯಲ್ಲಿ ವ್ಯವಸಾಯ ಮಾಡಲು ಆಗದಿರುವ ಸಂದರ್ಭ ವಲಸೆ ಹೋಗುವ ಪ್ರಕ್ರಿಯ ಮಧುಗಿರಿಯಲ್ಲಿ ಪ್ರಾರಂಭವಾಗಿದೆ, ಭದ್ರಾ ಮೇಲ್ದಂಡೆ ಯೋಜನೆ ಅಡಿಯ 19 ಟಿಎಂಸಿ ನೀರು ಲಭ್ಯವಿದ್ದು ಇದನ್ನು ಬಳಸಿಕೊಂಡು ಬಯಲು ಸೀಮೆ ಭಾಗದ ಜನರಿಗಾಗಿ ಶಾಶ್ವತ ಶುದ್ಧ ನೀರು ಕೊಡುವ ಯೋಜನೆಯನ್ನು ಜಾರಿಗೊಳಿಸಲು ಒಂದು ದೊಡ್ಡ ಹೋರಾಟ ಮಾಡಬೇಕಾಗಿ ಈ ಹೋರಾಟಕ್ಕೆ ಕ್ಷೇತ್ರದ ಮತ ಬಾಂಧವರ ಸಹಕಾರ ನನಗೆ ಬೇಕಾಗಿದೆ ಇನ್ನೂ ಹತ್ತು ಹಲವು ಕ್ಷೇತ್ರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ ಆದರಿಂದ ಈ ಬಾರಿಯ 2023ರ ಸಾರ್ವತ್ರಿಕ ಚುನಾವಣೆಗೆ ಸ್ಥಳೀಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಕ್ಷೇತ್ರದ ಎಲ್ಲಾ ಮತಬಾಂಧವರು ಸ್ಥಳೀಯರಿಗೆ ಆದ್ಯತೆ ನೀಡಿ ಆಶೀರ್ವದಿಸಿ ಎಂದು ಬಾಂಧವರಲ್ಲಿ ಮತಯಾಚಿಸಿದರು.


ಸ್ಥಳೀಯ ಅಭ್ಯರ್ಥಿಯ ಮನದಾಳದ ಮಾತು :
ನಾನು ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳಬೇಕು ಎಂಬ
ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ. ನಾನು ಈ ಹಿಂದೆ ಒಬ್ಬ ಸರ್ಕಾರಿ ಅಧಿಕಾರಿಯಾಗಿದ್ದೆ, ಕ್ಷೇತ್ರ ಅಭಿವೃದ್ಧಿ ಕಾಣದಿರುವುದು ಗಮನದಲ್ಲಿಟ್ಟುಕೊಂಡು, ಕ್ಷೇತ್ರದ ಅಭಿವೃದ್ಧಿಗಾಗಿ ಕ್ಷೇತ್ರದ ಮಗನಾಗಿ ಸ್ಥಳೀಯರಿಗೆ ಅಧಿಕಾರ ದೊರೆಯಬೇಕು ಎಂಬ ಉದ್ದೇಶದಿಂದ ರಾಜೀನಾಮೆ ಕೊಟ್ಟು ರಾಜಕೀಯ ರಂಗದಲ್ಲಿ ಕೆಲಸ ಮಾಡಲು ಬಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನನಗೆ ನನ್ನದೇ ಆದ ಕನಸುಗಳಿದ್ದು, ಈ ಬಾರಿ ಜನತೆ ಸ್ಥಳೀಯನಾದ ನನನ್ನು ಆಶೀರ್ವದಿಸುವ ವಿಶ್ವಾಸವಿದೆ ಎಂದರು.



ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ :


ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ 20 ರಿಂದ 25000 ಕಮಲ ಪಡೆಯ ಕಾರ್ಯಕರ್ತರೊಂದಿಗೆ ಬಿಜೆಪಿ ಅಭ್ಯರ್ಥಿ ಎಲ್. ಸಿ.ನಾಗರಾಜು ಬೃಹತ್ ರೋಡ್ ಶೋ ನಡೆಸಿದರು. ಪಟ್ಟಣದ ದಂಡಿನ ಮಾರಮ್ಮನ ದೇವಸ್ಥಾನದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಆರಂಭಗೊಂಡ ರೋಡ್ ಶೋ ತುಮಕೂರು ಗೇಟ್, ಪೆಟ್ರೋಲ್ ಬಂಕ್ ಸರ್ಕಲ್, ಡೂಂಲೈಟ್ ಸರ್ಕಲ್ ವೃತ್ತ, ದಂಡೂರು ಬಾಗಿಲ ರಸ್ತೆ ಮೂಲಕ ಸಾಗಿ ಪಾವಗಡ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿ,ನಂತರ ತಾಲೂಕು ಕಚೇರಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಹರಿಯಾಣ ಮೇಯರ್ ಗೌತಮ್ ಸದರನ್,ಬಿ ಜೆ ಪಿ ಚುನಾವಣಾ ಉಸ್ತುವಾರಿ ಹೆಚ್.ಎಂ. ರವೀಶ್, ಟಿ ಜಿ ಗೋವಿಂದರಾಜು ಬಿ ಜೆ ಪಿ ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರಾದ ಇತಿಹಾಸ್ ಪಾಶ, ಬಿಜೆಪಿ ಉಪಾಧ್ಯಕ್ಷ ಬಿ ಎನ್ ಲಕ್ಷ್ಮಿಪತಿ, ಮಂಡಲ ಅಧ್ಯಕ್ಷ ಪಿ ಎಲ್ ನರಸಿಂಹಮೂರ್ತಿ,ಕಾರ್ಯದರ್ಶಿ ನಾಗೇಂದ್ರ, ಪ್ರಕಾಶ್, ಜಿಲ್ಲಾ ಕಾರ್ಯಾಲಯ ಸುರೇಶ್, ಟಿ ಗೋವಿಂದರಾಜು, ಸೀತಾರಾಮ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರಿ, ಬಡವನಹಳ್ಳಿ ನಾಗರಾಜಪ್ಪ, ಯುವ ಮೋರ್ಚ ಕಾರ್ತಿಕ್ ಆರಾಧ್ಯ,ಚಿಕ್ಕ ಓಬಳರೆಡ್ಡಿ, ಅಲ್ಪಸಂಖ್ಯಾತರ ಮಂಡಲ ಅಧ್ಯಕ್ಷ ರಿಯಾಜ್, ಮಹಿಳಾ ಮೋರ್ಚ ರತ್ನಮ್ಮ , ಪುಷ್ಪಲತಾ, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.

ವರದಿ

ಮಧುಗಿರಿ: ಅಬಿದ್

Leave a Reply

Your email address will not be published. Required fields are marked *