ಗುಬ್ಬಿ: ಶ್ರೀಕಾಂತ್

ತಾಲ್ಲೂಕಿನ ಸಾತೇನಹಳ್ಳಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಹೇಮಾವತಿ ಇಲಾಖೆಯಿಂದ ಬಿಡುಗಡೆಯಾದ ಎರಡು ಕೊಟಿ ಅನುದಾನದಲ್ಲಿ ತಾಲ್ಲೂಕಿನ ಅಜ್ಜೆಕಟ್ಟೆ ಸಾತೇನಹಳ್ಳಿ, ದಾಸಪ್ಪನಹಳ್ಳಿ, ಚಿಕ್ಕಹೆಡಗೆಹಳ್ಳಿ, ಮಂಚಲದೊರೆ ಗ್ರಾಮದ ಸಿಸಿ ರಸ್ತೆಗೆ ಹೇಮಾವತಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿದ್ದು ಅನುದಾನವನ್ನು ನನ್ನ ಕ್ಷೇತ್ರ ಅಭಿವೃದ್ದಿ ಪಡಿಸಲು ಮೀಸಲಿಡಲಾಗಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಜೆಟ್ ಅಧಿವೇಶನದ ನಂತರ ನಾನು ಹಾಗೂ ಶಿವಲಿಂಗೇಗೌಡರು ಒಟ್ಟಾಗಿ ಸೇರ್ಪಡೆಯಾಗಲಿದ್ದು ಸೋಮವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ರನ್ನು ಬೇಟಿಯಾಗಲಿದ್ದು ಪಕ್ಷಾಂತರ ಪರ್ವಕ್ಕೆ ನಾನು ಬಲಿಯಾಗಿಲ್ಲ. ಜೆಡಿಸ್ ಪಕ್ಷದಿಂದ ನನ್ನ ಹೊರ ಹಾಕಿದ ಮೇಲೆ ಬೇರೆ ಪಕ್ಷಕ್ಕೆ ಸೇರ್ಪಡೆಯಾಗಲೇಬೇಕು ಹಾಗಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದು ಮತ್ತು ಜಿಲ್ಲಾ ಮುಖಂಡರ ಜೊತೆ ಮಾತುಕತೆ ನಡೆಸಿದ್ದೇನೆ. ಹಾಗಾಗಿ ಮುಂದಿನ ತಿಂಗಳು ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸಿದ್ದರಾಜು, ಲೋಕೇಶ್ವರ್, ಕಾಂತಾರಾಜ್, ಲಕ್ಕಣ್ಣ, ಹನುಮಂತಯ್ಯ, ಗಂಗಣ್ಣ, ಕುಮಾರ್ ಮತ್ತಿತರರು ಹಾಜರಿದ್ದರು.